ಖುಷಿ

ನಿಷೇಧಿತ ಪದಗಳು

ರಷ್ಯಾದಲ್ಲಿ ಸಂಸತ್ತಿನಲ್ಲಿ ಒಂದು ಮಸೂದೆ ಮಂಡನೆಯಾಗಿದೆ. ಅದರ ಪ್ರಕಾರ, ಅಲ್ಲಿನವರು ಇನ್ನು ಮುಂದೆ...

Published On :

ರಷ್ಯಾದಲ್ಲಿ ಸಂಸತ್ತಿನಲ್ಲಿ ಒಂದು ಮಸೂದೆ ಮಂಡನೆಯಾಗಿದೆ. ಅದರ ಪ್ರಕಾರ, ಅಲ್ಲಿನವರು ಇನ್ನು ಮುಂದೆ ಮಾತಾಡುವಾಗ ರಷ್ಯನ್ ಭಾಷೆಯ ಪದಗಳ ಬದಲಿಗೆ ಆಮದು ಇಂಗ್ಲಿಷ್ ಪದಗಳನ್ನು ಅನವಶ್ಯಕವಾಗಿ ಬಳಸುವಂತಿಲ್ಲ. ಬಳಸಿದರೆ ದಂಡ ಬೀಳುತ್ತೆ. ಇದು ರಷ್ಯಾದ ರಾಷ್ಟ್ರೀಯವಾದಿ ಪಕ್ಷ ಲಿಬರಲ್ ಡೆಮೊಕ್ರಾಟ್ ಪಾರ್ಟಿ ಮಂಡಿಸಿದ ಮಸೂದೆ.
ಅನಗತ್ಯ ಇಂಗ್ಲಿಷ್ ಪದಗಳನ್ನು ಬಳಸಿದರೆ ರಷ್ಯನ್ ಭಾಷೆಯ ಕಾವ್ಯಾತ್ಮಕ ಸೌಂದರ್ಯ ಕೆಟ್ಟುಹೋಗುತ್ತೆ. ನಾವು ಇಂಥ ಒಂದಷ್ಟು ಪದಗಳ ಪಟ್ಟಿ ಮಾಡಲಿದ್ದೇವೆ. ಅದು ಎಲ್ಲ ಅಧಿಕಾರಿಗಳ, ಜನಪ್ರತಿನಿಧಿಗಳ, ಬರಹಗಾರರ, ಪತ್ರಕರ್ತರ ಮೇಜಿನ ಮೇಲಿರಬೇಕು ಎಂದು ಪಕ್ಷದ ವಕ್ತಾರರು ಗರ್ಜಿಸಿದ್ದಾರೆ. ಅದರಂತೆ ರಷ್ಯನರು ಫೇಸ್‌ಬುಕ್, ಹ್ಯಾಂಬರ್ಗರ್, ಬಿಝಿನೆಸ್ ಲಾಂಚ್ ಮುಂತಾದ ಪದಗಳನ್ನೂ ಬಳಸುವಂತಿಲ್ಲ.
ಇತ್ತ ನಮ್ಮ ಮೋದಿ ಸರಕಾರ ಕೂಡ ಇನ್ನು ಮುಂದೆ ರಾಜ್ಯಗಳು ಕೇಂದ್ರದ ಜತೆ ಹಿಂದಿಯಲ್ಲೇ ವ್ಯವಹರಿಸಬೇಕು ಎಂದಿದೆ. ಇದನ್ನು ಇನ್ನೂ ಕೊಂಚ ರಷ್ಯಾದ ಮಾದರಿಗೆ ವಿಸ್ತರಿಸಬಹುದು. ಸಾಹಿತಿಗಳು ತಮ್ಮ ಕತೆ ಕಾದಂಬರಿಗಳಲ್ಲಿ ಅನವಶ್ಯಕ ಇಂಗ್ಲಿಷ್ ಪದಗಳನ್ನು ಬಳಸಿದರೆ ದಂಡ ಜಡಿಯಬಹುದು. ಹಾಗೆ ಬೇಕಿದ್ದರೆ ಕನ್ನಡದ ನಡುವೆ ಹಿಂದಿ ಪದ ಹಾಕಲಿ ಎಂಬ ರಿಯಾಯಿತಿ ನೀಡಬಹುದು. ಸಂಸ್ಕೃತ ಬಳಸಿದರೆ ಇನ್ನೂ ಒಳ್ಳೆಯದೇ.
ಆದರೆ ನಮ್ಮ ಹೊಸ ಸರಕಾರವನ್ನು ಆರಿಸಿದ ಯುವಜನಾಂಗಕ್ಕೆ ಟಾಯ್ಲೆಟ್‌ನಷ್ಟೇ ಅವಶ್ಯಕವಾದ ಫೇಸ್‌ಬುಕ್, ಟ್ವೀಟರ್ ಬಳಸಲು ಇಂಗ್ಲಿಷ್ ಅನಿವಾರ್ಯವಲ್ಲವೆ? ಅದಕ್ಕೇನು ಮಾಡೋಣ? ಈ ತಾಂತ್ರಿಕ ತೊಡಕಿನ ನಿವಾರಣೆಗೆ ಮೋದಿಯವರ ಬಳಿ ಘನವಾದ ಐಡಿಯಾಗಳಿರಬಹುದು.

-ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.