ಖುಷಿ

ಖಾನ್ ವಿತ್ ಕರಣ್

ಬಾಲಿವುಡ್ ಬ್ಯಾಚುಲರ್ ಸಲ್ಲು ಕಳೆದೊಂದು ವರ್ಷದಿಂದ ಫುಲ್ ಡಲ್ಲು. ಆತನ ಚಿತ್ರಗಳು ಬಿಡುಗಡೆಗೆ ಮುನ್ನ ಭಾರಿ...

ಖಾನ್ ವಿತ್ ಕರಣ್
Published On :

ಬಾಲಿವುಡ್ ಬ್ಯಾಚುಲರ್ ಸಲ್ಲು ಕಳೆದೊಂದು ವರ್ಷದಿಂದ ಫುಲ್ ಡಲ್ಲು. ಆತನ ಚಿತ್ರಗಳು ಬಿಡುಗಡೆಗೆ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸುತ್ತಿವೆ. ಭರ್ಜರಿ ಓಪನಿಂಗನ್ನೂ ತೆಗೆದುಕೊಳ್ತಿವೆ. ಆದರೆ ವಿಮರ್ಶಕರಿಂದ ಆರ್ಡಿನರಿ ಚಿತ್ರ ಎನಿಸಿಕೊಂಡು ಮರೆಯಾಗುತ್ತಿವೆ. 'ದಬಾಂಗ್‌' ಎಂಬ ಸೂಪರ್‌ಹಿಟ್‌ನ ನಂತರದಲ್ಲಿ ಬಂದು ಹೋದ ಬಾಡಿಗಾರ್ಡ್, ದಬಾಂಗ್ 2 , ಏಕ್ ಥಾ ಟೈಗರ್, ರೆಡಿ, ಜೈಹೋ ಎಲ್ಲ ಇದೇ ಕಥೆ. ದೇಶವಿದೇಶಗಳಲ್ಲಿ ಮೊದಲೆರಡು ವಾರದಲ್ಲೇ ದಾಖಲೆಯ ಕಲೆಕ್ಷನ್ ಮಾಡಿಕೊಂಡು ಮೂರನೇ ವಾರಕ್ಕೆ ಮರೆತೇ ಹೋದಂಥ ಚಿತ್ರಗಳು. ಸಲ್ಲುಗೂ ಮಾಸ್ ಚಿತ್ರಗಳ ಬಗ್ಗೆಯೇ ಹೆಚ್ಚು ಆಸಕ್ತಿ. ಹಾಗಾಗಿ ಮಿಕ್ಕ ಖಾನ್‌ಗಳ ಥರ ಯಾವ ಪ್ರಯೋಗಕ್ಕೂ ಆತ ತನ್ನನ್ನು ಒಡ್ಡಿಕೊಳ್ಳಲು ಸಿದ್ಧನಿಲ್ಲ. ಈಗ ಬಿಡುಗಡೆಗೆ ಸಿದ್ಧವಿರುವ ಕಿಕ್ ಮತ್ತು ಗಬ್ಬರ್ ಕೂಡ ಈ ಸೂತ್ರಕ್ಕೆ ಹೊರತಲ್ಲ.
ಆದರೆ ಕಳೆದ ವಾರ ಸಲ್ಮಾನ್ ಸೈನ್ ಮಾಡಿರುವ ಒಂದು ಚಿತ್ರದ ಬಗ್ಗೆ ಈಗಾಗಲೇ ಅತೀವ ನಿರೀಕ್ಷೆ ಶುರುವಾಗಿದೆ. ಚಿತ್ರದ ಹೆಸರು ಶುದ್ಧಿ. ಕ್ಲಾಸಿ ಶೀರ್ಷಿಕೆಯ ಚಿತ್ರ ಅನ್ನುವುದು ನಿರೀಕ್ಷೆಗೆ ಒಂದು ಕಾರಣವಾದರೆ, ಕರಣ್ ಜೋಹರ್ ನಿರ್ದೇಶನದ ಚಿತ್ರವಾಗಿರುವುದು ಇನ್ನೊಂದು ಕಾರಣ. ಕುಛ್ ಕುಛ್ ಹೋತಾ ಹೈ ನಂತರ ಇದೇ ಮೊದಲ ಬಾರಿಗೆ ಕರಣ್- ಸಲ್ಲು ಜೋಡಿಯಾಗಿದ್ದಾರೆ. ಬಾಡಿಗಾರ್ಡ್ ನಂತರ ಕರೀನಾ ಸಲ್ಮಾನ್‌ಗೆ ನಾಯಕಿಯಾಗಿ ಬಂದಿರುವುದು ಮತ್ತಷ್ಟು ಕಿಕ್ ಕೊಟ್ಟಿದೆ.
ಅಂದಹಾಗೆ, ಈ ಮ್ಯಾಚ್ ಫಿಕ್ಸಿಂಗ್ ನಡೆದದ್ದು 'ಕಾಫಿ ವಿತ್ ಕರಣ್‌' ಟಾಕ್‌ಷೋದಲ್ಲಿ! ಭರ್ಜರಿ ಟಿಆರ್‌ಪಿ ತೆಗೆದುಕೊಂಡಿದ್ದ ಆ ಎಪಿಸೋಡ್‌ನಲ್ಲಿ ಸಲ್ಮಾನ್ ತಾನಿನ್ನೂ ವರ್ಜಿನ್ ಅಂತ ಹೇಳಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು. ಕಾರ್ಯಕ್ರಮದ ಒಂದಷ್ಟು ಚಿನಕುರಳಿ ಸಂಭಾಷಣೆ ಬಿಟ್ಸ್ ಇಲ್ಲಿವೆ ಓದಿಕೊಳ್ಳಿ.

ಕರಣ್: ಇಷ್ಟು ವರ್ಷ ಆದರೂ ನಿಮಗೆ ಸೂಟ್ ಆಗೋ ಸೃಷ್ಟಿ ಆಗೇ ಇಲ್ವೆ ಅಥವಾ ಆಕೆ ನಿಮಗೆ ಸಿಕ್ಕಿಲ್ವೇ?
ಸಲ್ಲು: ಸಿಕ್ಕಿಲ್ಲ ಅಂತೇನಲ್ಲ. ಆದರೆ ಇನ್ನೂ ಬೆಟರ್ ಅನಿಸೋವ್ರು ಸಿಗಬಹುದೇನೋ ಎಂಬ ಹುಡುಕಾಟ.

ಕರಣ್: ಆದರೂ ಈ ಏಕಾಂಗಿತನ ಬೇಜಾರಲ್ವಾ?
ಸಲ್ಲು: ಇಲ್ಲ ಇಲ್ಲ. ನಾನು ರಾತ್ರಿ ಹೊತ್ತು ಒಬ್ಬನೇ ಮಲಗೋಕೆ ಇಷ್ಟ ಪಡುತ್ತೇನೆ.

ಕರಣ್: ಈಗ ಕೇಳುವ ಒಂದೇ ಮಾತಲ್ಲಿ ಉತ್ತರ ಕೊಡಬೇಕು.
ಮದುವೆ: ಹೇ ರಾಮ್
ಪ್ರಶಸ್ತಿ: ಅವಾರ್ಡ್‌ಗಿಂತ ರಿವಾರ್ಡ್ ಮುಖ್ಯ.
ಸಿನಿಮಾ ಅಲ್ಲದೆ ಹೋಗಿದ್ರೆ ಇವರು...?
ಸೋನಾಕ್ಷಿ ಸಿನ್ಹಾ: ರಾಜಕಾರಣಿ ಅಥವಾ ವಸ್ತ್ರವಿನ್ಯಾಸಕಿ.
ಕರೀನಾ ಕಪೂರ್: ಒಳ್ಳೆಯ ಗೃಹಿಣಿ.
ಹೃತಿಕ್ ರೋಶನ್: ಡ್ಯಾನ್ಸ್ ಟೀಚರ್
ಪ್ರಿಯಾಂಕಾ ಛೋಪ್ರಾ: ಸಿಂಗರ್ ಅಥವಾ ಗೃಹಿಣಿ

ಈ ಕೆಳಗಿನ ನಟನಟಿಯರಿಗೆ ಏನು ಸಲಹೆ ನೀಡಲು ಬಯಸುತ್ತೀರಿ?
ರಣಬೀರ್ : ಖುಷಿಯಾಗಿರೋದನ್ನ ಕಲಿ.
ಕತ್ರಿನಾ: ರಣಬೀರ್‌ಗೆ ಖುಷಿಯಾಗಿಡಬೇಡ.
ಹೃತಿಕ್: ರಣಬೀರ್-ಕತ್ರಿನಾ ಸಹವಾಸಕ್ಕೆ ಹೋಗಬೇಡ.

ತಲೆಗೆ ಗನ್ ಹಿಡಿದು ಸಲಿಂಗಕಾಮಕ್ಕೆ ಒತ್ತಾಯಿಸಿದರೆ ಏನು ಮಾಡ್ತೀರ?
ನನ್ನನ್ನು ಹೆದರಿಸೋ ಗನ್ ಇನ್ನೂ ಮ್ಯಾನುಫ್ಯಾಕ್ಚರ್ರೇ ಆಗಿಲ್ಲ!

ಪ್ರೀತಿ ಜಿಂಟಾ, ಪ್ರಿಯಾಂಕಾ ಛೋಪ್ರಾ, ಕತ್ರಿನಾ ಈ ಮೂವರಲ್ಲಿ ಒಬ್ರನ್ನು ಕೊಂದು, ಒಬ್ರನ್ನು ಮದುವೆಯಾಗಿ ಒಬ್ರನ್ನ ಫ್ರೆಂಡ್ ಮಾಡಿಕೋ ಅಂದ್ರೆ ನಿಮ್ಮ ಆಯ್ಕೆ ಏನು ?
ಪ್ರೀತಿ ಜಿಂಟಾಳನ್ನು ಮದುವೆ ಆಗ್ತೇನೆ. ಮಿಕ್ಕೆರಡು ಉತ್ತರ ಬೇಡ ಅಂದ್ಕೊಳ್ತೀನಿ.

ಈ ಪ್ರಾಣಿಗಳು ನಿಮಗೆ ಯಾವ ನಟರನ್ನು ನೆನಪಿಸುತ್ತದೆ?
ಹುಲಿ: ಆಮೀರ್ ಖಾನ್
ನಾಯಿಮರಿ: ರಣಬೀರ್
ಶಾರ್ಕ್: ಶಾರೂಕ್.

- ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.