ಖುಷಿ

ಸಿಂಪಲ್ ಮಾರ್ಕೆಟಿಂಗ್

Published On :

ಎಂಬಿಎ ವಿದ್ಯಾರ್ಥಿ, ಹುಡುಗಿಯೊಬ್ಬಳನ್ನು ಅಪ್ಪಿಕೊಂಡ. ಗಾಬರಿಯಾದ ಹುಡುಗಿ ಆತನನ್ನು ದೂರ ತಳ್ಳಿ 'ಏನಿದು?' ಎಂದು ಕೇಳುತ್ತಾಳೆ. ಅದಕ್ಕೆ ಅವನು 'ಡೈರೆಕ್ಟ್ ಮಾರ್ಕೆಟಿಂಗ್!' ಎಂದು ಶಾಂತವಾಗಿ ಉತ್ತರಿಸುತ್ತಾನೆ. ಹುಡುಗಿ ಆತನ ಕೆನ್ನೆಯ ಮೇಲೆ ಠಪಾರನೆ ಬಾರಿಸುತ್ತಾಳೆ. ಗಾಬರಿಯಾದ ಎಂಬಿಎ ವಿದ್ಯಾರ್ಥಿ 'ಏನಿದು?' ಎನ್ನುತ್ತಾನೆ. ಅದಕ್ಕೆ ಅವಳು 'ಗ್ರಾಹಕರ ಪ್ರತಿಕ್ರಿಯೆ' ಎನ್ನುತ್ತಾಳೆ!
ಅವಳಿ, ತ್ರಿವಳಿ, ದಿವಾಳಿ!
ಮೂವರು ಕುಡುಕರು ಬಾರಿನಲ್ಲಿ ಆಕಸ್ಮಿಕ ಸನ್ನಿವೇಶಗಳ ಬಗ್ಗೆ ಚರ್ಚಿಸುತ್ತಿರುತ್ತಾರೆ.
ಮೊದಲನೆಯವ: ನನ್ನ ಹೆಂಡತಿ 'ಎ ಟೇಲ್ ಆಫ್ ಟು ಸಿಟೀಸ್‌' ಓದುತ್ತಿದ್ದಳು. ಅವಳು ಅವಳಿ ಮಗುವಿಗೆ ಜನ್ಮ ನೀಡಿದಳು.
ಎರಡನೆಯವ: ಓಹ್ ಹೌದೇ! ನನ್ನ ಹೆಂಡತಿ 'ದಿ ಥ್ರೀ ಮುಸ್ಕೆಟೆರೀಸ್‌' ಪುಸ್ತಕ ಓದುತ್ತಿದ್ದಳು. ಅವಳು ತ್ರಿವಳಿ ಮಗುವಿಗೆ ಜನ್ಮ ನೀಡಿದಳು.
ಮೂರನೆಯವ: ಓಹ್ ದೇವರೇ! ನಾನು ಆದಷ್ಟು ಶೀಘ್ರವಾಗಿ ಮನೆಗೆ ಹೋಗಬೇಕು- ಎಂದು ಎದ್ದು ಹೋಗಲು ಅನುವಾಗುತ್ತಾನೆ. ಉಳಿದ ಇಬ್ಬರೂ ಕಾರಣ ಕೇಳುತ್ತಾರೆ.
ಮೂರನೆಯವ: ನನ್ನ ಹೆಂಡತಿ 'ಆಲಿ ಬಾಬಾ ಮತ್ತು ನಲವತ್ತು ಕಳ್ಳರು' ಪುಸ್ತಕ ಓದುತ್ತಿದ್ದಾಳೆ. ನಿಮ್ಮ ಹೆಂಡತಿಯರಿಗಾದಂತೆ ಆದರೆ ನಾನು ದಿವಾಳಿಯಾಗುವುದರಲ್ಲಿ ಅನುಮಾನವೇ ಇಲ್ಲ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.