ಖುಷಿ

ಕೋರಾ ಹಾರರ್

'ಕೋರಾ' ಎಂಬುದೊಂದು ಸಾಮಾಜಿಕ ಜಾಲತಾಣ. ಆದರೆ ಇದು ಫೇಸ್‌ಬುಕ್‌ಗಿಂತ ಭಿನ್ನ. ಇಲ್ಲೂ ನೀವು...

Published On :

'ಕೋರಾ' ಎಂಬುದೊಂದು ಸಾಮಾಜಿಕ ಜಾಲತಾಣ. ಆದರೆ ಇದು ಫೇಸ್‌ಬುಕ್‌ಗಿಂತ ಭಿನ್ನ. ಇಲ್ಲೂ ನೀವು ಫೇಸ್‌ಬುಕ್‌ನಂತೆಯೇ ನಿಮ್ಮ ಕಸವನ್ನು ತುಂಬಬಹುದು. ಆದರೆ ಇದು 'ಪ್ರಶ್ನೋತ್ತರ' ಮಾದರಿಯದ್ದು. ಕೆಲ ಅರ್ಥಪೂರ್ಣ ಚರ್ಚೆ, ಕ್ರಿಯೇಟಿವಿಟಿಗೂ ಆಸ್ಪದವಿದೆ. ಇಲ್ಲಿ ದಾಖಲೆಯಾದ ಪುಟ್ಟ ಪುಟ್ಟ ಹಾರರ್ ಕತೆಗಳ ಸರಣಿಯಿಂದ ಆಯ್ದ ಕತೆಗಳಿವು:
    'ಅಪ್ಪ, ಮಂಚದ ಕೆಳಗೆ ರಾಕ್ಷಸರಿರಬಹುದಾ ನೋಡು' ಎಂದು ಮಗ ಹೇಳಿದ. ಬಗ್ಗಿ ನೋಡಿದೆ. ಅಲ್ಲಿ ನನ್ನ ಮಗ ಅವಿತುಕೊಂಡಿದ್ದ. 'ಡ್ಯಾಡಿ, ನನ್ನ ಮಂಚದ ಮೇಲೆ ಯಾರೋ ಮಲಗಿದ್ದಾರೆ' ಎಂದ.
    ನನ್ನ ಬೆಕ್ಕಿನ ಕಣ್ಣುಗಳಲ್ಲಿ ಸಮಸ್ಯೆಯಿದೆ ಅಂದುಕೊಂಡಿದ್ದೆ. ಅದು ಯಾವಾಗಲೂ ನನ್ನನ್ನೇ ದಿಟ್ಟಿಸುತ್ತಿತ್ತು. ಇಂದು ಗೊತ್ತಾಯಿತು- ಅದು ನನ್ನನ್ನು ಭೇದಿಸಿಕೊಂಡು ಆಚೆಗೆ ನೋಡುತ್ತಿದೆ ಅಂತ.
    ಆಕೆ ನನ್ನ ಎದೆ ಮೇಲೆ ಕುಳಿತುಕೊಂಡು ಚೂರಿಯನ್ನು ಎದೆಗೆ ಇಳಿಸುತ್ತಿರಬೇಕಾದರೆ, ನನ್ನ ಮೇಜಿನ ಮೇಲಿದ್ದ ಗಡಿಯಾರ 12.05 ನಿಮಿಷ ತೋರಿಸುತ್ತಿತ್ತು. ಬೆಚ್ಚಿ ಎಚ್ಚೆತ್ತರೆ, ಕನಸು ಬಿದ್ದಿದ್ದು ಅರಿವಾಯಿತು. ಮೇಜಿನ ಮೇಲಿದ್ದ ಗಡಿಯಾರ 12.04 ತೋರಿಸುತ್ತಿತ್ತು. ಬಾಗಿಲು ತೆರೆದ ಸದ್ದು.
    ಯಾರೋ ಗಾಜನ್ನು ತಟ್ಟುತ್ತಿರುವ ಸದ್ದು. ಕಿಟಕಿಯಿಂದಿರಬೇಕೆಂದು ಭಾವಿಸಿದೆ. ಅಲ್ಲ, ಕನ್ನಡಿಯಿಂದ ಬರುತ್ತಿತ್ತು.
    ಯಾವುದೋ ಮುಖ ನನ್ನ ಮನೆಯ ಕಿಟಕಿಯಾಚೆಯಿಂದ ಮುಗುಳು ನಕ್ಕಿತು. ನಾನು ವಾಸಿಸುತ್ತಿರುವುದು 14ನೇ ಫ್ಲೋರಿನಲ್ಲಿ.
    ಸೊಗಸಾದ ಕನಸು ಕಾಣುತ್ತಿದ್ದೆ. ಮಣ್ಣು ಸುರಿಯುವ ಸದ್ದಾಯಿತು. ಎಚ್ಚರಾದಾಗ ನೋಡಿದರೆ ಯಾರೋ ಶವದ ಪೆಟ್ಟಿಗೆಯನ್ನು ಗುಂಡಿಗಿಳಿಸಿ ಮಣ್ಣು ಮುಚ್ಚುತ್ತಿದ್ದರು. ಒಳಗೆ ನಾನಿದ್ದೆ.
    ನಾನು ಗುಂಪಿನ ಮಧ್ಯದಲ್ಲಿದ್ದೇನೆ. ಜೇಬು ಮುಟ್ಟಿ ನೋಡಿಕೊಂಡೆ. ಮೊಬೈಲ್ ಕೈಗೆ ಸಿಗಲಿಲ್ಲ.
    ನಾನು ಏಕಾಂತದಲ್ಲಿದ್ದೇನೆ. ಎಂಥ ಏಕಾಂತ ಎಂದರೆ, ಕಿರುಚಿದರೆ ಕೇಳಿಸಿಕೊಳ್ಳುವವರೇ ಇಲ್ಲ.
    ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ನನ್ನ ಪ್ರತಿಬಿಂಬ ಒಮ್ಮೆ ಕಣ್ಣು ಮಿಟುಕಿಸಿತು.
ಇನ್ನಷ್ಟು ಓದಬೇಕಾದರೆ, ನಿಮ್ಮದೊಂದು ಕತೆ ಕಾಣಿಸಬೇಕಾದರೆ www.quora.com ಗೆ ಹೋಗಿ 'ಹಾರರ್ ಸ್ಟೋರೀಸ್‌' ಎಂದು ಟೈಪಿಸಿ.


- ಹರೀಶ್ ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.