ಅನೂಷ ಪ್ರವೇಶ
ಎರಡು ವರ್ಷದಿಂದಲೇ ಸಂಗೀತಕ್ಕೆ ಹೆಜ್ಜೆ ಹಾಕತೊಡಗಿದ ಅನೂಷ ಶ್ರೀ ಈಗ ಅಧಿಕೃತವಾಗಿ ವೇದಿಕೆ ...

ಎರಡು ವರ್ಷದಿಂದಲೇ ಸಂಗೀತಕ್ಕೆ ಹೆಜ್ಜೆ ಹಾಕತೊಡಗಿದ ಅನೂಷ ಶ್ರೀ ಈಗ ಅಧಿಕೃತವಾಗಿ ವೇದಿಕೆ ಹತ್ತುತ್ತಿದ್ದಾಳೆ. ಭೂಷಣ್ಸ್ ಪ್ರದರ್ಶಕ ಕಲೆಗಳು ಮತ್ತು ದೃಶ್ಯ ಪ್ರಸ್ತುತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾಳೆ ಅನೂಷ. ಈಜು, ಪಿಯಾನೋ, ಸಂಗೀತ, ರಂಗಭೂಮಿ, ಓದನ್ನು ಹವ್ಯಾಸವಾಗಿಸಿಕೊಂಡಿರುವ ಈ ಬಹುಮುಖ ಪ್ರತಿಭೆ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಬಹುಮಾನ ಪಡೆದವಳು. ಅಮೆರಿಕದಲ್ಲಿ ಬೆಳೆದರೂ ಕನ್ನಡ, ತಮಿಳನ್ನು ಸರಾಗವಾಗಿ ಮಾತನಾಡುವ ಈಕೆ, ಭಾರತೀಯ ಸಂಸ್ಕೃತಿಯ ಬಗ್ಗೆ ಒಲವು ಹೊಂದಿದ್ದಾಳೆ. ನಾಟ್ಯಶ್ರೀ ಬದರಿ ದಿವ್ಯಾ ಭೂಷಣ್ ಮತ್ತು ಡಾ. ಅಂಜನಾ ಭೂಷಣ್ ಅವರ ಶಿಷ್ಯೆಯಾಗಿರುವ ಅನೂಷ, ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ರಂಗಪ್ರವೇಶ ಮಾಡಲಿದ್ದಾಳೆ. ಗುಡ್‌ಲಕ್ ಅನೂಷ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


