ಟ್ವಿಟ್ಟರೇಚರ್
'ನಾನು ಬದುಕಿನ ಬಗ್ಗೆ ಕಲಿತದ್ದನ್ನು ಮೂರೇ ಮೂರು ಪದಗಳಲ್ಲಿ ಹಿಡಿದಿಡಬಲ್ಲೆ- ಇದು ಮುಂದಕ್ಕೆ ಸಾಗುತ್ತದೆ...''(it goes on)...

'ನಾನು ಬದುಕಿನ ಬಗ್ಗೆ ಕಲಿತದ್ದನ್ನು ಮೂರೇ ಮೂರು ಪದಗಳಲ್ಲಿ ಹಿಡಿದಿಡಬಲ್ಲೆ- ಇದು ಮುಂದಕ್ಕೆ ಸಾಗುತ್ತದೆ...''(it goes on). ಅಂದವನು ರಾಬರ್ಟ್ ಫ್ರಾಸ್ಟ್ ಈತ ಕಳೆದ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಅಮೆರಿಕದ ಕವಿ.
ಮೂರು ಪದಗಳು, ನಮ್ಮ ಕಾಲಕ್ಕೆ ಬಂದಾಗ 140 ಅಕ್ಷರಗಳಾಗಿಬಿಟ್ಟಿವೆ. ಟ್ವಿಟ್ಟರ್‌ನಲ್ಲಿ ನಾವು ಮಾಡುವ ಒಂದು ಟ್ವೀಟ್‌ನ ಶಬ್ದಮಿತಿ ಇಷ್ಟೇ. ಆದರೆ ಇಷ್ಟರಲ್ಲೇ ಬದುಕಿನ ಸಾರಸಂಗ್ರಹವನ್ನೆಲ್ಲ ಹಿಡಿದಿಡಬಹುದು ಎಂಬುದು ಹೊಸ ತಲೆಮಾರಿನ ಅಂಬೋಣ. ಟ್ವಿಟ್ಟರ್‌ನಲ್ಲಿ ಸಾಹಿತ್ಯ ರಚನೆ ಹೊಸ ಟ್ರೆಂಡ್. ಹೀಗೆ ಪೋಸ್ಟ್ ಮಾಡಿದ್ದನ್ನು ಸಂಕಲಿಸಿ ಪುಸ್ತಕಗಳನ್ನೂ ತರಲಾಗುತ್ತಿದೆ. ಜಗತ್ಪ್ರಸಿದ್ಧ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇದಕ್ಕಾಗಲೇ 'ಟ್ವಿಟ್ಟರೇಚರ್' ಎಂಬ ಹೆಸರನ್ನೂ ಟಂಕಿಸಿದೆ.
ಜಗತ್ತಿನ ಮಹಾ ಮಹಾ ಕೃತಿಗಳ ಸಾರವನ್ನೆಲ್ಲ ಟ್ವಿಟ್ಟರೇಚರ್‌ನಲ್ಲಿ ಹೇಳಬಹುದೆ ಎಂಬ ಪ್ರಯತ್ನಗಳೂ ಆಗಿವೆ. ಲೂಸಿ ಕೋಟ್ಸ್ ಎಂಬಾಕೆ 100 ಗ್ರೀಕ್ ಪುರಾಣಕತೆಗಳನ್ನು 100 ಟ್ವೀಟ್‌ಗಳಲ್ಲಿ ಹೇಳಿದ್ದಾಳೆ. ಅಮೆರಿಕದಲ್ಲಿ ನಡೆಯುತ್ತಿರುವ 'ಟ್ವಿಟ್ಟರ್ ಫಿಕ್ಷನ್ ಫೆಸ್ಟಿವಲ್'ಗೆ ಈಗ ಎರಡು ವರ್ಷ.
ನಮ್ಮ ಮಹಾ ಕೃತಿಗಳನ್ನು ಟ್ವಿಟ್ಟರೇಚರ್‌ಗೆ ಇಳಿಸಿದರೆ ಹೇಗಿರಬಹುದು?
ಮಲೆಗಳಲ್ಲಿ ಮದುಮಗಳು
ಕತ್ತಲೆಯಲ್ಲಿ ಕಾಡು ಬಿದ್ದ ಮದುಮಗಳು ಚಿನ್ನಮ್ಮ ಹೊಸ ಬಾಳು ಕಂಡುಕೊಂಡಳು. ಗುತ್ತಿಯ ಇನ್ನೊಂದು ಜೀವವಾದ ಹುಲಿಯ ತುಂಗೆಯ ಪ್ರವಾಹದಲ್ಲಿ ಕೊಚ್ಚಿಹೋಯ್ತು. ಮಲೆನಾಡಿನ ನಿಬಿಡ ಕಾನನ ಇದೆರಡಕ್ಕೂ ಮೌನಸಾಕ್ಷಿಯಾಯ್ತು.
ಮೂಕಜ್ಜಿಯ ಕನಸುಗಳು
ಗತಕಾಲದ ವಸ್ತುಗಳನ್ನು ಮುಟ್ಟಿದಾಗ ಮೂಕಜ್ಜಿಯ ಮೈ ಮನಸ್ಸುಗಳು ಕಂಪಿಸುತ್ತಿದ್ದವು. ಅವು ರವಾನಿಸಿದ ಸ್ಪಂದನ ಆಕೆಯ ಬಾಯಿಯಿಂದ ಕತೆಗಳಾಗಿ ಹೊಮ್ಮುತ್ತಿತ್ತು.
ಶಿಕಾರಿ
ತನ್ನ ಪಾಡಿನ ಕಾರಣ ತಿಳಿಯದೆ, ಪಾರಾಗುವ ದಾರಿ ತಿಳಿಯದೆ ವಿಲವಿಲ ಒದ್ದಾಡುತ್ತಿದ್ದ ನಾಗಪ್ಪ ತನ್ನನ್ನು ನಿರಂತರವಾಗಿ ಬೇಟೆಯಾಡಲು ಬೆನ್ನಟ್ಟಿದ್ದ ವ್ಯಕ್ತಿಗಳಿಗೆ 'ಒಂದೂ ಮಗನೇ' ಎಂದು ಬೈಯುತ್ತಲೇ ಮುಕ್ತನಾಗುವ ದಾರಿ ಹುಡುಕಿಕೊಂಡ.
-ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


