ನಿದ್ರೆ ಗುಳಿಗೆಗಳು
ನಿದ್ದೆ ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯವಾದ ಸಂಗತಿ. ದಿನಕ್ಕೆ 8 ತಾಸು ನಿದ್ದೆ ಮಾಡಬೇಕೆಂದು ವೈದ್ಯರು ಹೇಳುತ್ತಾರೆ. ..

ನಿದ್ದೆ ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯವಾದ ಸಂಗತಿ. ದಿನಕ್ಕೆ 8 ತಾಸು ನಿದ್ದೆ ಮಾಡಬೇಕೆಂದು ವೈದ್ಯರು ಹೇಳುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲವೆಂದರೆ ಮಾರನೆ ದಿನ ಆರಂಭದಿಂದ ಅಂತ್ಯದವರೆಗೂ ಕಿರಿಕಿರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ರೆ ಸರಿಯಾಗಿ ಬರುವುದಿಲ್ಲ ಎಂದು ದೂರುವ ಮಂದಿ ಹೆಚ್ಚು. ನಿದ್ದೆಯ ಸಮಸ್ಯೆಯ ಪರಿಹಾರಕ್ಕೆ ಕೆಲವು ಸರಳ ಮಾರ್ಗಗಳಿವೆ.
- ಕಾಫಿಯಲ್ಲಿನ ಕೆಫೀನ್ ಎಂಬ ಅಂಶ ಸುಮಾರು 8 ಗಂಟೆಯವರೆಗೆ ನಮ್ಮನ್ನು ಎಚ್ಚರದಿಂದ ಇರುವಂತೆ ಮಾಡುತ್ತದೆ. ಇದರಿಂದ ಸುಖಕರ ನಿದ್ದೆಗೆ ಭಂಗ ಬರುವುದು ಖಂಡಿತ. ಆದ್ದರಿಂದ ರಾತ್ರಿ ಮಲಗಲು 6 ಗಂಟೆಗೂ ಮುಂಚೆ ಕಾಫಿ ಕುಡಿಯುವುದು ಬೇಡ.
- ಬಹಳ ಜನ ಮದ್ಯ ಸೇವಿಸಿದರೆ ನಿದ್ದೆ ಬರುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಮೊದಮೊದಲು ಕುಡಿದರೆ ನಿದ್ದೆ ಬರುತ್ತದಾದರು ರಾತ್ರಿಪೂರ ಸುಖ ನಿದ್ದೆಯಾಗುವುದಿಲ್ಲ ಎಂಬುದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
- ಕೆಲವು ಮಂದಿಗೆ ಮಲಗುವ ಮುನ್ನ ದಿನದಲ್ಲಿ ನಡೆದ ಘಟನೆ ನೆನಪಿಸಿ ಮುಂದಿನ ದಿನದ ದಿನಚರಿಯನ್ನು ಯೋಜಿಸುವ ಹವ್ಯಾಸವಿರುತ್ತದೆ. ಮಲಗುವ ಕೆಲವು ಗಂಟೆಗಳ ಮುಂಚೆ ಅದನ್ನು ಮಾಡಿ ಮುಗಿಸಿ ಮನಸ್ಸನ್ನು ನಿರಾಳ ಮಾಡಿಕೊಂಡು ಹೋಗಿ.
- ಮಲಗುವ ಮೊದಲು ಮನಸ್ಸಿಗೆ ಮುದ ನೀಡುವ ಪುಸ್ತಕ ಓದುವುದು, ಧ್ಯಾನ, ಇಲ್ಲವೇ ಬಿಸಿ ನೀರಿನಲ್ಲಿ ಸ್ನಾನ ಮಾಡಿ.
- ನಿಯಮಿತ ವ್ಯಾಯಾಮ ನಿದ್ದೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕೆಲವು ಜನ ವ್ಯಾಯಾಮದ ನಂತರ ಕ್ರಿಯಾಶೀಲರಾಗುತ್ತಾರೆ. ಅಂತಹವರು ಮುಂಜಾನೆ ಸಮಯದಲ್ಲಿ ಮಾಡಿದರೆ ಒಳಿತು.
- ಮಲಗುವ ಕೋಣೆಯನ್ನು ಸ್ವಲ್ಪ ಕತ್ತಲೆಯಾಗಿ ಇರುವಂತೆ ನೋಡಿಕೊಳ್ಳಿ.
- ಹಿತವಾದ ಊಟ ಸರಿಯಾದ ನಿದ್ದೆ ಎಂಬಂತೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದು ಬೇಡ. ಹಿತಮಿತವಾಗಿ ತಿಂದು ಮಲಗಿದರೆ ಒಳ್ಳೆಯ ನಿದ್ದೆ ಸಾಧ್ಯ.
- ಮಲಗುವ ಮುನ್ನ ಅಥವಾ ನಿದ್ದೆಯಲ್ಲಿ ಎಚ್ಚರವಾದಾಗ ಧೂಮಪಾನ ಮಾಡುವುದು ಒಳ್ಳೆಯ ಹವ್ಯಾಸವಲ್ಲ.
- ಸಾಕು ಪ್ರಾಣಿಗಳಿದ್ದರೆ ಅವುಗಳನ್ನು ಮಲಗುವ ಸಮಯದಲ್ಲಿ ಕೋಣೆಗೆ ಬಾರದಂತೆ ನೋಡಿಕೊಳ್ಳಿ.
- ಟಿವಿ ನೋಡುವುದು, ಆಹಾರ ಸೇವಿಸುವುದಾಗಲಿ ಮಲಗುವ ಕೋಣೆಯಲ್ಲಿ ಬೇಡ. ಬೆಡ್ ಮೇಲೆ ಯಾವುದೇ ರೀತಿಯ ಮಾನಸಿಕವಾಗಿ ಘಾಸಿಗೊಳ್ಳುವ ವಿಚಾರ ಬೇಡ.
- ರಂಜಿತ್ ಎಚ್.ಎ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


