ಖುಷಿ

ಗರ್ಭಕೋಶ ಇಲ್ಲದಿದ್ದರೆ ಅಡ್ಡಿ ಇಲ್ಲವಾ?

ಮದುವೆಯಾಗಿ ಮೂರು ವರ್ಷವಾಗಿದೆ. ಸುಖಮಯ ದಾಂಪತ್ಯ. ಇತ್ತೀಚೆಗೆ ನನ್ನ ಪತ್ನಿಗೆ ಗರ್ಭಕೋಶ ಕ್ಯಾನ್ಸರ್ ಇರುವುದು ಪತ್ತೆಯಾಯಿತು...

Published On :

ಮದುವೆಯಾಗಿ ಮೂರು ವರ್ಷವಾಗಿದೆ. ಸುಖಮಯ ದಾಂಪತ್ಯ. ಇತ್ತೀಚೆಗೆ ನನ್ನ ಪತ್ನಿಗೆ ಗರ್ಭಕೋಶ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಗರ್ಭಕೋಶ ತೆಗೆದು ಹಾಕುವುದಾಗಿ ವೈದ್ಯರು ಹೇಳಿದ್ದಾರೆ. ಆ ನಂತರವೂ ನಾವು ಲೈಂಗಿಕ ಚಟುವಟಿಕೆದಳಲ್ಲಿ ತೊಡಗಿಕೊಳ್ಳಬಹುದೆ? ಹೆಂಡತಿಯ ಹಾರ್ಮೋನುಗಳ ಮಟ್ಟ ಏರುಪೇರಾಗುವುದಿಲ್ಲವೆ?
- ಶ್ರೀನಿವಾಸ ಕೆ., ರಾಯಚೂರು
ಗರ್ಭಾಶಯ ತೆಗೆಯುವುದಕ್ಕೂ, ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವುದಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು ಮುಂದೆಯೂ ನೀವು ಸಂತೋಷದಿಂದ ಸುಖಿಸಬಹುದು. ಆದರೆ ಶಸ್ತ್ರಚಿಕಿತ್ಸೆ ಆದ ಬಳಿಕ ಎಷ್ಟು ದಿನದ ವಿಶ್ರಾಂತಿ ಅಗತ್ಯ ಎನ್ನುವ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿಕೊಳ್ಳಿ. ಹಾರ್ಮೋನುಗಳ ವಿಚಾರದಲ್ಲಿ ನಿಮಗೆ ಮಂಡೆಬಿಸಿ ಬೇಡ. ಹಾರ್ಮೋನುಗಳ ಮಟ್ಟದಲ್ಲಿ ಏರಿಳಿತ ಆಗದಂತೆ ವೈದ್ಯರೇ ಸೂಕ್ತ ಔಷಧೋಪಚಾರ ನೀಡುತ್ತಾರೆ.

ಹೊರಗಷ್ಟೇ ಸುಖ
ನನ್ನ ವಯಸ್ಸು 45 ವರ್ಷ. ಸಮಾಜದ ದೃಷ್ಟಿಯಲ್ಲಿ ನಮ್ಮದು ಅನ್ಯೋನ್ಯ ದಾಂಪತ್ಯ. ಹಾಸಿಗೆಯಲ್ಲಿ ಹೆಂಡತಿಯನ್ನು ತೃಪ್ತಿಪಡಿಸಲು ನನ್ನಿಂದ ಆಗುತ್ತಿಲ್ಲ, ಕೆಲ ವರ್ಷಗಳಿಂದ ಶೀಘ್ರಸ್ಖಲನದ ಸಮಸ್ಯೆ. ಇದರಿಂದ ಹೆಂಡತಿ ಮನೆಯಲ್ಲಿ ಸದಾ ನನ್ನ ಮೇಲೆ ಕೋಪದಿಂದ ಭುಸುಗುಡುತ್ತಾಳೆ. ನನ್ನ ತೊಂದರೆಗೆ ಪರಿಹಾರ ಇಲ್ಲವೆ? ಜೀವಮಾನವಿಡೀ ಹೀಗೇ ಕೊರಗುತ್ತ ಇರಬೇಕೆ?
- ಸುಬ್ರಾಯ ಶೇಟ್, ಕಾರವಾರ
ಯಾವ ಸಮಸ್ಯೆಗೂ ಪರಿಹಾರ ಇಲ್ಲ ಅಂತಲ್ಲ. ಬಹುಶಃ ನಿಮಗೆ ಮಧುಮೇಹ ಅಥವಾ ರಕ್ತದೊತ್ತಡ ಇರಬಹುದು. ಇಲ್ಲವೇ ಮಾನಸಿಕ ಒತ್ತಡದಿಂದ ನೀವು ಬಳಲುತ್ತಿದ್ದಿರಬಹುದು. ಈ ವಯಸ್ಸಿನಲ್ಲಿ ಶೀಘ್ರಸ್ಖಲನ ಆಗುತ್ತಿದೆ ಎಂದರೆ ಅದಕ್ಕೆ ವೈದ್ಯಕೀಯ ಸಮಸ್ಯೆಗಳೇ ಕಾರಣ. ಮನಸ್ಸಿನಲ್ಲಿ ಕೊರಗುತ್ತ ಸಮಯ ವ್ಯರ್ಥ ಮಾಡದೆ ಕುಟುಂಬ ವೈದ್ಯರನ್ನು ಭೇಟಿ ಮಾಡಿ. ಅವರು ನಿಮ್ಮ ಸಮಸ್ಯೆಯ ಮೂಲ ಪತ್ತೆ ಮಾಡುವುದರ ಜತೆಗೆ ಪರಿಹಾರವನ್ನೂ ಸೂಚಿಸುವರು.

ಟಿ.ವಿ ಗೀಳು ಬಿಡಿಸೋದು ಹೇಗೆ?
ಮಗ ಯುಕೆಜಿ ಓದುತ್ತಿದ್ದಾನೆ. ವಿಪರೀತ ಟಿ.ವಿ ಹುಚ್ಚು. ಶಾಲೆಯಿಂದ ಬಂದವನೇ ಹೋಂವರ್ಕ್ ಕೂಡ ಮಾಡದೇ ಕಾರ್ಟೂನ್ ಚಾನೆಲ್ ನೋಡುತ್ತಿರುತ್ತಾನೆ. ಟಿ.ವಿ ನೋಡಬೇಡ ಎಂದರೆ ಸಿಟ್ಟು ಮಾಡಿಕೊಳ್ಳುತ್ತಾನೆ. ಏನು ಮಾಡಬೇಕು ತಿಳಿಯುತ್ತಿಲ್ಲ.
- ಸುಮಂಗಲಾ, ಮೈಸೂರು
ಮೊದಲು ನೀವು ಟಿ.ವಿ ನೋಡುವುದನ್ನು ಕಡಿಮೆ ಮಾಡಿ. ಮಕ್ಕಳು ಇರುವಾಗ ಟಿ.ವಿ.ಯಿಂದ ಸಾಧ್ಯವಾದಷ್ಟು ದೂರ ಇರುವುದು ಒಳ್ಳೆಯದು. ಟಿ.ವಿ ನೋಡುವುದರಿಂದ ಆಗುವ ಅಪಾಯಗಳ ಬಗ್ಗೆ ನಯವಾಗಿ ತಿಳಿಸಿ ಹೇಳಿ.ಅದಕ್ಕೂ ಮಣಿಯದಿದ್ದರೆ ಟಿ.ವಿ ಮಾರಿಬಿಡುವ ಬೆದರಿಕೆ ಹಾಕಿ. ಆಗಲೂ ಜಗ್ಗದಿದ್ದರೆ ಆತನ ಶಿಕ್ಷಕರ ನೆರವು ಪಡೆದುಕೊಳ್ಳಲು ಸಂಕೋಚ ಮಾಡಿಕೊಳ್ಳಬೇಡಿ.

-   ಡಾ. ನರೇಂದ್ರ ಗಾಂಧಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.