ಉತ್ತರಾಧಿಕಾರಿ
ವಿ. ಹೆಮಂತ್‌ಕುಮಾರ್, ಬೆಂಗಳೂರು
ಪ್ರೇಮಕ್ಕೆ ಟ್ರಾಫಿಕ್ ಸಿಗ್ನಲ್ ಇಲ್ವಂತೆ ಹೌದಾ ಸಾರ್?
ಆದರೂ ಅದು ಎಲ್ಲೆಲ್ಲೋ ಜಾಮ್ ಆಗಿ ಕಲ್ಯಾಣಮಂಟಪನೇ ತಲುಪೋಲ್ಲ!
ಸಿ.ಎನ್. ಅಂಬ್ರೇಶ್ ತಡಿಟಿಡಿ, ಯಾದಗಿರಿ
ಇತ್ತೀಚೆಗೆ ಹುಡುಗೀರು ಮುಖಕ್ಕೆ ಬಟ್ಟೆ ಕಟ್ಟುತ್ತಿದ್ದಾರಲ್ಲ?
ಬಾಯಿ ಬಿಟ್ರೆ ಬಣ್ಣ ಗೇಡು ಅಂತ ಇರಬಹುದು!
ಪಿ.ಜೆ. ರಾಘವೇಂದ್ರ ಮೈಸೂರು
ಸಿದ್ಧರಾಮಯ್ಯನವರ ಆತ್ಮೀಯ ಸ್ನೇಹಿತ ಯಾರು?
ಇಷ್ಟು ದಿನದವರೆಗೆ 'ಸಿಎಂ' ಇಬ್ರಾಹಿಂ ಅಂತಲೇ ಎಲ್ಲರೂ ತಿಳ್ಕೊಂಡಿದ್ದಾರೆ!
ಸ್ವಾಮಿ ನಿರ್ಮಲಾ ಉಡಿಗಾಲ
ಹೇಳುವುದಕ್ಕೂ ಸಾಧಿಸುವುದಕ್ಕೂ ವ್ಯತ್ಯಾಸವೇನು?
ಅದು ಕೇಜ್ರಿವಾಲರ ಅಧಿಕಾರವಧಿಯಲ್ಲಿ ಗೊತ್ತಾಗುತ್ತೆ!
ಕಡಸೂರು ಶಂಕರನಾರಾಯಣ, ಮೈಸೂರು
ಸಲಿಂಗಕಾಮಿಗಳ ಪ್ರತಿಭಟನೆಗೆ ಕೆಲವು ಸಾಹಿತಿಗಳ ಬೆಂಬಲವಿದೆಯಂತೆ?
ಅವರ ಸಾಹಿತ್ಯದಲ್ಲೂ 'ಗೇ'ಯತೆ ಪ್ರತಿಫಲಿಸಬಹುದು!
ಕಾಳಿದಾಸ, ರಾಮಕೃಷ್ಣನಗರ, ಮೈಸೂರು
ಹಣವನ್ನೇ ಬಂಧು ಎಂದು ತಿಳಿದಿರುವವರಿಗೆ ನಿಮ್ಮ ಸಲಹೆ?
ಬಂಧುವನ್ನೇ ನಂಬಿ, ಆದರೆ ಬಳಗದವರನ್ನು ಮರೆಯದಿರಿ!
ವಿಶ್ವಸುಹೃದಯ, ದಾವಣಗೆರೆ
ಅಂದು ಗುಣನೋಡಿ ಹೆಣ್ಣು ಕೊಡುತ್ತಿದ್ದರು, ಇಂದು?
ನಿಮ್ಮ ಗುಣ ನೋಡಿ ಹಣ್ಣು ಫಲ ತಾಂಬೂಲ ಕೊಡ್ತಾರೆ ಅಷ್ಟೇ!
ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
ನಿನಗೇನಾದರೂ ಒಂದು ಲೋಡ್ ಹಣ ಸಿಕ್ಕರೆ ಏನ್ಮಾಡ್ತೀರ?
ಬೆಂಗಳೂರು-ಮಂಡ್ಯ ನಡುವೆ ಸೈಟ್ ಕೊಳ್ತಿನಿ!
ಜೆ.ಆರ್. ಆದಿನಾರಾಯಣಮುನಿ, ಕೋಡಿಹಳ್ಳಿ ಮಠ
ನಿಷ್ಠೆ ಮತ್ತು ಪ್ರಾಮಾಣಿಕತೆ ವಂಶವಾಹಿನಿಯಿಂದ ಬರುವುದಂತೆ?
ಈ ಜೀನ್ಸ್ ವಾದ ಕಾಂಗ್ರೆಸ್‌ನವರದ್ದು ಇರಬೇಕು!
ಪವನಕುಮಾರ ಕೆ.ವಿ. ಬಳ್ಳಾರಿ
ರಾಜ್ಯ ಸರ್ಕಾರದ ಯೋಜನೆಗಳಲ್ಲಿ ನಿಮ್ಮನ್ನು ಯೋಚಿಸುವಂತೆ ಮಾಡಿದ ಯೋಜನೆ ಯಾವುದು?
ನನ್ನ ಭಾಗ್ಯಕ್ಕೆ ಆ ಯೋಜನೆಗಳಿಂದ ಯಾವ ಉಪಯೋಗವೂ ಇಲ್ಲ!
-ಎಸ್.ವಿ. ಪದ್ಮನಾಭ
ಹೊಸ ವರ್ಷದಲ್ಲಿ ಸಂಭವಿಸಬಹುದಾದ ಅದ್ಭುತ ಸಂಶೋಧನೆ ಏನಿರಬಹುದು?
ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ ಉತ್ತರಗಳು ಮುಂದಿನ ಸಂಚಿಕೆಯಲ್ಲಿ... khushimag@gmail.com
ಕಳೆದವಾರದ ಉತ್ತರಗಳು
ಪ್ರಶ್ನೆ: ಸಲಿಂಗಕಾಮಿಗಳ ಪ್ರತಿಭಟನೆಗೆ ಸಾಹಿತಿಗಳಿಂದಲೂ ಬೆಂಬಲವಿದೆಯಂತೆ?
1. ಕಾಮ ಯಾವುದು? ಫುಲ್‌ಸ್ಟಾಪ್ ಯಾವುದು ಎಂದು ಸಾಹಿತಿಗಳಿಗೇ ಚೆನ್ನಾಗಿ ಗೊತ್ತಂತೆ!
- ಎಲ್. ವಿ. ಕುಮಾರಸ್ವಾಮಿ, ಹಿರಿಯೂರು
2. ಸಾಹಿತಿಗಳ ಬೆಂಬಲವಿರಲಿ, ಅದರಲ್ಲಿ 'ಬುದ್ಧಿ ಜೀವಿಗಳದೇ ಮುಂಚೂಣಿಯಂತೆ!'
- ಪತ್ತಂಗಿ ಹೇಮಲತಾ ಮುರಳಿ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

