ಖುಷಿ

ಲಾ ಪಾಯಿಂಟ್

Published On :

ಈಗ ಪ್ರಶ್ನಿಸುವ ಹಕ್ಕಿಲ್ಲ
ಬಿ.ಎನ್. ವೆಂಕಟೇಶ್, ಹಾರೋಹಳ್ಳಿ
ನಮ್ಮ ತಾತನವರ ಜಮೀನನ್ನು 1954ರಲ್ಲಿ ನಮ್ಮ ತಂದೆ ಹಾಗೂ ಅವರ ಅಣ್ಣನ ಮಕ್ಕಳು ಮಾರಾಟ ಮಾಡಿದ್ದಾರೆ. ಆ ಮಾರಾಟ ಕಾಲದಲ್ಲಿ  ನಮ್ಮ ತಾತನಿಂದ ಇವರಿಗೆ ಹಕ್ಕು ವರ್ಗಾವಣೆಯಾಗಿರುವುದಿಲ್ಲ. ಈಗ ನಾನು ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಬಹುದೇ?
- ಮಾರಾಟ 1954ರಲ್ಲಿ ಆಗಿದ್ದು ಈಗ 67 ವರ್ಷಗಳ ಮೇಲೆ ಇದನ್ನು ಪ್ರಶ್ನಿಸುವ ಹಕ್ಕಿಲ್ಲ. ಲಿಮಿಟೇಷನ್ ಆಗಿ ಹೋಗಿದೆ.



ಅಸಿಂಧು ಎಂದು ಕೋರ್ಟಿನಲ್ಲಿ ಪ್ರಶ್ನಿಸಿ
ಮಹಾವೀರ, ಚಾಮರಾಜನಗರ
45 ವರ್ಷದ ಹಿಂದೆ ನಮ್ಮ ಅಜ್ಜಿಯವರಿಂದ ನಮ್ಮ ತಂದೆಯವರು ಜಮೀನು ಖರೀದಿಸಿರುತ್ತಾರೆ. ಈಗ ನಮ್ಮ ಚಿಕ್ಕಪ್ಪನ ಮಕ್ಕಳು ಆ ಆಸ್ತಿಯಲ್ಲಿ ಪಾಲು ಕೇಳಿ ದಾವಾ ಹಾಕಿದ್ದು, ಎಡ್ವರ್ಸ್ ಪೊಸೆಶನ್ ನಿಯಮದಂತೆ ನಮ್ಮಂತೇ ಆಗಿದೆ. ಆದರೆ ಜಮೀನಿನ ಅಳತೆಯಲ್ಲಿ ವ್ಯತ್ಯಾಸವಿದ್ದುದರಿಂದ ಮಾರಾಟ ಪತ್ರ ಅಸಿಂಧು ಎಂದು ನ್ಯಾಯಾಲಯ ತಿಳಿಸಿದೆ. ಈಗ ಆ ಪಾರ್ಟಿಯವರು ಜಿಲ್ಲಾ ನ್ಯಾಯಾಲಯಕ್ಕೆ ಅಪೀಲು ಮಾಡಿದ್ದಾರೆ. ಫಲಿತಾಂಶವೇನಾಗಬಹುದು?
- ಕ್ರಯಪತ್ರ ಅಸಿಂಧು ಎಂದು ಹೇಳಿರುವುದನ್ನು ನೀವೂ ಪ್ರಶ್ನಿಸಬೇಕು. ಆಗ ನಿಮಗೆ ಹೆಚ್ಚು ಅನುಕೂಲವಾಗಬಹುದು.



ವಾಪಸ್ ಬರುವಂತೆ ನೋಟೀಸ್ ಕೊಡಿ
ಚಂದ್ರು, ಕೊಟ್ಟಿಗೆಪಾಳ್ಯ
ನಾನೊಬ್ಬ ಅಂಗವಿಕಲನಾಗಿದ್ದು, ಮದುವೆಯಾಗಿ ಒಂದು ಮಗುವಿದೆ. ನನ್ನ ಹೆಂಡತಿ ಪಕ್ಕದ ಮನೆಯವನೊಂದಿಗೆ ಅನುಮಾನಾಸ್ಪದ ಸಂಬಂಧ ಹೊಂದಿದ್ದರಿಂದ ಪಂಚಾಯ್ತಿ ನಡೆಸಿದ ನಂತರ ಆಕೆ ಮನೆಬಿಟ್ಟು ಹೋಗಿದ್ದಾಳೆ. ಈಗ ಆಕೆಯ ಮನೆಯವರು ಬೇರೆ ಮಾಡುವ ಮಾತಾಡಿದ್ದಾರೆ. ಆಕೆಯನ್ನು ಕಳುಹಿಸುವುದಿಲ್ಲ, ವರದಕ್ಷಿಣೆ ಕೇಸು ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಏನು ಮಾಡುವುದು?
- ಆಕೆಗೆ ನೀವೇ ನೋಟೀಸ್ ಕೊಟ್ಟು ವಾಪಸ್ ಬರುವಂತೆ ತಿಳಿಸಿ. ಬರದಿದ್ದರೆ ಕುಟುಂಬ ನ್ಯಾಯಾಲಯದಲ್ಲಿ ಆರ್‌ಸಿಆರ್‌ಗೆ ದಾವಾ ಹಾಕಿ. ಒಂದು ವೇಳೆ ಆಕೆ ವರದಕ್ಷಿಣೆ ಕಿರುಕುಳದ ಕೇಸು ದಾಖಲಿಸಿದರೆ ಪಂಚಾಯ್ತಿದಾರರ ಸಾಕ್ಷಿಯನ್ನು ಹಾಜರುಪಡಿಸಿದರೆ ತೊಂದರೆಯಾಗಲಾರದು.



ಕೆಪಿಸಿಎಲ್ ವಿರುದ್ಧ ರಿಟ್ ಹಾಕಿ
ಕೆ. ಬಸವರಾಜಪ್ಪ, ಬಳ್ಳಾರಿ
ಕೆಪಿಸಿಎಲ್‌ಗೆ ಜಮೀನು ಕೊಟ್ಟಿದ್ದು ಆ ಆಧಾರದ ಮೇಲೆ ನೌಕರಿ ಸಿಕ್ಕಿದೆ. ಈಗ ಕೆಪಿಸಿಎಲ್‌ನವರು ಇಲ್ಲದ ತಕರಾರು ಎತ್ತಿ ಜಮೀನಿಗೆ ಆರು ಜನ ವಾರಸುದಾರರಿದ್ದಾರೆಂದು ನನ್ನ ನೌಕರಿ ಕಾಯಂ ಮಾಡಿಲ್ಲ. ದಾಖಲೆಗಳಲ್ಲಿ ಜಮೀನು ಹಿಸ್ಸೆಯಾಗಿರುವುದನ್ನು ತೋರಿಸಿದರೂ ಒಪ್ಪುತ್ತಿಲ್ಲ. ಏನು ಮಾಡುವುದು?
- ಹೈಕೋರ್ಟಿನಲ್ಲಿ ಕೆಪಿಸಿಎಲ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿ. ಸಹಾಯವಾಗುತ್ತದೆ.


- ಎಚ್.ಆರ್. ಕಸ್ತೂರಿರಂಗನ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.