ಖುಷಿ

ಧೂಮ್ ಮಚಾಲೇ

ಬಾಲಿವುಡ್‌ನ ಶ್ರೇಷ್ಠತೆಯ ವ್ಯಸನಿ ಅಮೀರ್ ಖಾನ್ ಅಭಿನಯದ ಧೂಮ್ 3 ಧೂಳೆಬ್ಬಿಸಿದೆ. 9 ದಿನದಲ್ಲಿ ಬರೋಬ್ಬರಿ 200 ಕೋಟಿ ...

ಧೂಮ್ ಮಚಾಲೇ
Published On :

ಬಾಲಿವುಡ್‌ನ ಶ್ರೇಷ್ಠತೆಯ ವ್ಯಸನಿ ಅಮೀರ್ ಖಾನ್ ಅಭಿನಯದ ಧೂಮ್ 3 ಧೂಳೆಬ್ಬಿಸಿದೆ. 9 ದಿನದಲ್ಲಿ ಬರೋಬ್ಬರಿ 200 ಕೋಟಿ ಬಾಕ್ಸ್ ಆಫೀಸ್ ಸೂರೆ ಮಾಡಿದೆ. ಒಟ್ಟಾರೆ ಡಿಸೆಂಬರ್ 29ಕ್ಕೆ 227 ಕೋಟಿ ದಾಖಲಿಸಿದೆ.
2009ರ ಕ್ರಿಸ್‌ಮಸ್ ದಿನಗಳಲ್ಲೇ ತೆರೆ ಕಂಡ ಅಮೀರ್ ಖಾನ್‌ರ ಚಿತ್ರ '3 ಇಡಿಯಟ್ಸ್‌'200 ಕೋಟಿ ಸಂಗ್ರಹವಾಗಲು 70 ದಿನ ತೆಗೆದುಕೊಂಡಿತ್ತು. ಶಾರುಕ್ ಖಾನ್‌ರ ಚೆನ್ನೈ ಎಕ್ಸ್‌ಪ್ರೆಸ್ 15 ದಿನಗಳಲ್ಲೇ 277 ಕೋಟಿ ಸಂಪಾದಿಸಿತ್ತು. ಸ್ವಲ್ಪ ದಿನಗಳ ನಂತರ ಹೃತಿಕ್ ರೋಷನ್‌ರ 'ಕ್ರಿಶ್ 3' ಹತ್ತು ದಿನಗಳಲ್ಲೇ 244 ಕೋಟಿ ಬಾಚಿಕೊಂಡಿತು. ಅಮೆರಿಕ ಮತ್ತು ಕೆನಡಾದಲ್ಲಿ ದಾಖಲಾಗಿದ್ದ ಅಮೀರ್ ಖಾನ್‌ರ '3 ಇಡಿಯಟ್ಸ್‌'ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಿತ್ರ ಎಂಬ ದಾಖಲೆಯನ್ನು 'ಧೂಮ್ 3' ಅಳಿಸಿ ಹಾಕಿದೆ.
ಧೂಮ್ ಸೀರೀಸ್‌ನಲ್ಲಿ ಚೇಸ್ ಮಾಡುವ ರೋಚಕ ಕ್ಷಣಗಳೇ ಹೈಲೈಟ್. ಧೂಮ್ 1ರಲ್ಲಿ 'ಸುಜೂಕಿ ಹಯಬುಜಾ', 'ಸುಜೂಕಿ ಜಿಎಸ್‌ಎಕ್ಸ್-ಆರ್ 600' ಮತ್ತು 'ಸುಜೂಕಿ ಬ್ಯಾಂಡಿಟ್‌' ಮೋಟಾರ್ ಸೈಕಲ್‌ಗಳು ರಾರಾಜಿಸಿದ್ದವು. ನಂತರ ಬಂದ ಧೂಮ್ 2ನಲ್ಲಿ 'ಸುಜೂಕಿ ಬ್ಯಾಂಡಿಟ್‌', 'ಸುಜೂಕಿ ಜಿಎಸ್‌ಎಕ್ಸ್ - ಆರ್ 1000', 'ಸುಜೂಕಿ ಜಿಎಸ್‌ಆರ್ 600' ಮೋಟಾರ್ ಸೈಕಲ್‌ಗಳು ಹುಚ್ಚೆಬ್ಬಿಸಿದ್ದವು. ಈಗ 'ಬಿಎಮ್‌ಡಬ್ಲೂಕೆ 1300 ಆರ್‌' ಹವಾ ನಡೆಯುತ್ತಿದೆ.
ಕಾರಣ ಗೊತ್ತೇ ಇದೆ. ಧೂಮ್ 3ಯಲ್ಲಿ ಅಮೀರ್ ಖಾನ್ ಸಾಹಸ ಮಾಡಿರುವ ಬೈಕ್ ಇದು. ಜೆಟ್ ಸ್ಕೈಯಲ್ಲಿ ಅಮೀರ್ ತಿರುಗಿಸಿದ್ದು, ರಾಕೆಟ್ ತಿರುಗಣಿಯಿಂದ ತಪ್ಪಿಸಿಕೊಳ್ಳಲು ಬಳಸಿದ್ದು ಬಿಎಮ್‌ಡಬ್ಲೂಕೆ 1300 ಆರ್! 'ಸೂಪರ್ ಬೈಕ್ ವಿತೌಟ್ ಕಾಂಪ್ರಮೈಸ್‌' ಎಂಬ ಬಿಎಮ್‌ಡಬ್ಲೂ ಮಾಡೆಲ್ ಬೈಕ್‌ನ ತತ್ವ ಅಕ್ಷರಶಃ ಸಿನಿಮಾದಲ್ಲಿ ಸಾಬೀತಾಗಿದೆ. ಸಂಗಾತಿಯೊಂದಿಗೆ ಈ ಬೈಕ್‌ನಲ್ಲಿ ರೈಡ್ ಮಾಡುವುದು ಥ್ರಿಲ್ಲೇ ಸರಿ!
ಈ ಬೈಕ್ ಪ್ರಬಲ ಎಂಜಿನ್ ಕಾರ್ಯಕ್ಷಮತೆ ಹೊಂದಿದೆ. ಪರಿಪೂರ್ಣ ದೈನಂದಿನ ಉಪಯುಕ್ತತೆಗೂ ಹೇಳಿ ಮಾಡಿಸಿದಂತಿದೆ. ಸುಲಭ ನಿರ್ವಹಣೆಯೂ ಸಾಧ್ಯ ಎಂಬುದು ಕಂಪನಿ ನುಡಿ. ಬಿಎಮ್‌ಡಬ್ಲೂ ಉತ್ಪಾದಿಸಿರುವ ಬಿಎಮ್‌ಡಬ್ಲ್ಯೂಎಸ್ 1000 ಆರ್‌ಆರ್ ಮತ್ತು ಬಿಎಮ್‌ಡಬ್ಲ್ಯೂಕೆ 1300 ಆರ್ ಎಂಬ ಎರಡು ಮೋಟಾರ್ ಸೈಕಲ್‌ಗಳು ಧೂಮ್ 3 ಕರಾಮತ್ತಿನಿಂದ ಪ್ರಸಿದ್ಧಿಗೆ ಬಂದಿವೆ.  

ಬಿಎಮ್‌ಡಬ್ಲ್ಯೂಎಸ್ 1000 ಆರ್‌ಆರ್:
ವಾಟರ್ ಕೂಲ್‌ಡ್ ಪವರ್, ಫೋರ್ ಸ್ಟೋರ್ಕ್, ನಾಲ್ಕು ಸಿಲಿಂಡರ್ ಉಳ್ಳ 999 ಸಿಸಿ ಎಂಜಿನ್ ಹೊಂದಿದೆ. 1193bhp@ 13,00orpm ಔಟ್‌ಪುಟ್ ಮತ್ತು 112Nm@9,75orpm ಟಾರ್ಕ್ಯೂ ಇದೆ. ವೇಗದ ಮಿತಿ ಗಂಟೆಗೆ 200 ಕಿ.ಮೀ. ಗಂಟೆಗೆ 90 ಕಿ.ಮೀ ವೇಗದಲ್ಲಿ ಸಾಗಿದರೆ ಪ್ರತಿ 100 ಕಿ.ಮೀ ಕ್ರಮಿಸಲು 5.7 ಲೀಟರ್ ಇಂಧನ ಬೇಕು. ಅಂದರೆ ಒಂದು ಲೀಟರ್‌ಗೆ 17 ಕಿ.ಮೀ ಕ್ರಮಿಸಬಹುದು. 2,056ಟಟ ಉದ್ದ, 826ಟಟ ಅಗಲ ವಿಸ್ತೀರ್ಣ ಹೊಂದಿದೆ. ವೀಲ್‌ಬೇಸ್ 1,432ಟಟ. ಟ್ಯಾಂಕ್ ಪೂರ್ತಿ ಇಂಧನ ಹೊಂದಿರುವ ಬಿಎಮ್‌ಡಬ್ಲೂ ಎಸ್ 1000 ಆರ್‌ಆರ್ 204 ಕೇಜಿ ಭಾರವಿದೆ. ಮುಂದೆ ಎರಡು ಡಿಸ್ಕ್ ಬ್ರೇಕ್. ಬೆಲೆ 20 ಲಕ್ಷ.
ಬಿಎಮ್‌ಡಬ್ಲ್ಯೂಕೆ 1300 ಆರ್
ವಾಟರ್ ಕೂಲ್‌ಡ್ ಪವರ್, ಫೋರ್ ಸ್ಟೋರ್ಕ್, ಫೋರ್ ಸಿಲಿಂಡರ್ 1,293ಸಿಸಿ ಎಂಜಿನ್‌ನ ಬಿಎಮ್‌ಡಬ್ಲ್ಯೂಕೆ 1300 ಆರ್‌ನ ಮತ್ತೊಂದು ಮಾಡೆಲ್ ಇದು. 173bhp@925orpm ಔಟ್ ಪುಟ್ ಮತ್ತು 140Nm8,25orpmಟಾರ್ಕ್ಯೂ ಹೊಂದಿದೆ. ವೇಗದ ಮಿತಿ ಗಂಟೆಗೆ 200 ಕಿ.ಮೀ. ಗಂಟೆಗೆ 90 ಕಿ.ಮೀ ವೇಗದಲ್ಲಿ ಸಾಗಿದರೆ ಪ್ರತಿ 100 ಕಿ.ಮೀ ಕ್ರಮಿಸಲು5 ಲೀಟರ್ ಇಂಧನದ ಅಗತ್ಯವಿದೆ. 2,228ಟಟ ಉದ್ದ, 856ಟಟ ಅಗಲ ವಿಸ್ತೀರ್ಣ ಹೊಂದಿದೆ. ವೀಲ್‌ಬೇಸ್ 1,585ಟಟ. ಟ್ಯಾಂಕ್ ಪೂರ್ತಿ ಇಂಧನ ಹೊಂದಿರುವ ಬಿಎಮ್‌ಡಬ್ಲ್ಯೂಕೆ 1300 ಆರ್ 243 ಕೇಜಿ ಬಾರವಿದೆ. ಮುಂದೆ ಡ್ಯೂಲ್ ಡಿಸ್ಕ್, ರಾರ್ ಸಿಗ್ನಲ್ ಡಿಸ್ಕ್ ಬ್ರೇಕ್ ಒಳಗೊಂಡಿದೆ. ಬೆಲೆ 20 ಲಕ್ಷ.ಟಿ


-ನಮ್ಮ ಸಂಸ್ಥೆಯ ಬೈಕ್ ಧೂಮ್ 3ಯಂತಹ ಶ್ರೇಷ್ಠ ಮಟ್ಟದ ಸಿನಿಮಾದಲ್ಲಿ ಬಳಸಿಕೊಂಡಿರುವುದು ನಮಗೆ ಹೆಮ್ಮೆ.
- ಅಲೆಗ್ಸಾಂಡರ್ ಬರಾಕ,
ಬಿಎಮ್‌ಡಬ್ಲ್ಯೂ ವ್ಯವಹಾರ ಮುಖ್ಯಸ್ಥ


- ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.