ಖುಷಿ

ತೆಪ್ಪಂಗಡಿ

ಬೆಂಗಳೂರಿನಿಂದ 180 ಕಿ.ಮಿ. ದೂರದಲ್ಲಿ ಕಾವೇರಿ ರಭಸದಿಂದ ಕಲ್ಲುಗಳ ಮಧ್ಯೆ ಧುಮ್ಮಿಕ್ಕುವ ಹೊಗೆನಕಲ್ ಜಲಪಾತ ಪ್ರವಾಸಿ ತಾಣ...

ತೆಪ್ಪಂಗಡಿ
Published On :

ಬೆಂಗಳೂರಿನಿಂದ 180 ಕಿ.ಮಿ. ದೂರದಲ್ಲಿ ಕಾವೇರಿ ರಭಸದಿಂದ ಕಲ್ಲುಗಳ ಮಧ್ಯೆ ಧುಮ್ಮಿಕ್ಕುವ ಹೊಗೆನಕಲ್ ಜಲಪಾತ ಪ್ರವಾಸಿ ತಾಣ. ಕಲ್ಲಿನ ಸಂದಿಗೊಂದಿಗಳಲ್ಲಿ ನೀರು ಹೊರ ಛಚೆಲ್ಲುವಾಗ ಚೆಲ್ಲಾಟವಾಡುತ್ತಾ ಹಲವು ಜಲಪಾತಗಳನ್ನು ಒಂದೇ ಜಾಗದಲ್ಲಿ ತೋರಿಸುತ್ತಿರುತ್ತದೆ. ಕಣ್ಸೆಳೆಯುವ ಕಲ್ಲು ಬಂಡೆಗಳ ಮಧ್ಯೆ ಹರಿಯುವ ನೀರ ಕಾಲುವೆಯಲ್ಲಿ ತೆಪ್ಪದಲ್ಲಿ ಸಾಗಿ ಪ್ರಕೃತಿಯನ್ನು ಸವಿಯುವುದೂ ಒಂದು. ಸಾವಿರಾರು ಪ್ರವಾಸಿಗಳು ಬರುವ ಈ ತಾಣದಲ್ಲಿ ನೂರಾರು ತೆಪ್ಪಗಳು ಆರೇಳು ಜನರನ್ನು ತುಂಬಿಕೊಂಡು ಸಾಗುತ್ತಿರುತ್ತವೆ. ನೀರು-ಬಂಡೆ ಬಿಟ್ಟರೆ ಮತ್ತೇನೂ ಸಿಗದ ಆ ಜಾಗದಲ್ಲಿ ತೆಪ್ಪವೊಂದರಲ್ಲಿ ಲಘು ತಿನಿಸು, ಲಘು ಪಾನೀಯ ಇಟ್ಟುಕೊಂಡು ಹುಟ್ಟುಹಾಕುತ್ತಾ ಗ್ರಾಹಕರ ಬಳಿಗೇ ಬರುವ ತೆಪ್ಪಂಗಡಿಯಿದೆ. ಅವನ ಬಂಡವಾಳ ಒಂದು ತೆಪ್ಪ, ನೀರಿಗಿಳಿಯುವ ಜಾಗದಲ್ಲಿ ಒಂದು ದಾಸ್ತಾನು ಪೆಟ್ಟಿಗೆ ಮಾತ್ರ. ವ್ಯಾಪಾರ ಮುಗಿದ ನಂತರ ಉಳಿದ ವಸ್ತುಗಳನ್ನು ದಾಸ್ತಾನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ತೆಪ್ಪ ಹೊತ್ತುಕೊಂಡು ಸಾಗುತ್ತಾನೆ. ಕಲ್ಲುಗಳ ಮೇಲೆ ನಡೆಯುತ್ತಾ, ನೀರ ಹರಿವು ದಾಟುತ್ತಾ ನೀರ ಕಾಲುವೆಗೆ ಬರುವಷ್ಟರಲ್ಲಿ ಸುಸ್ತಾಗಿ ಹೊಟ್ಟೆ ಚುರ್‌ಗುಟ್ಟುವಂತಾಗಿ ತಿನ್ನಲು ಏನೂ ಸಿಗದೆ ತೆಪ್ಪಗಿರುವ ಪರಿಸ್ಥಿತಿಯಿರುವ ಜಾಗದಲ್ಲಿ ಈ ತೆಪ್ಪಂಗಡಿ ಪ್ರವಾಸಿಗರಿಗೆ ವರದಾನ.

- ಬಿ.ಎಸ್.ವೆಂಕಟಾಚಲ ಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.