ಖುಷಿ

ಚಿಲ್ಲರೆ ವಾಪಸ್

Published On :

ಕೇಶವ ಒಬ್ಬ ಪ್ರಾಮಾಣಿಕ ಬಾಲಕ. ಈ ಉತ್ತಮ ಗುಣದಿಂದಲೇ ಮನೆ ಮತ್ತು ಶಾಲೆಯಲ್ಲಿ ಮೇಲಿಂದ ಮೇಲೆ ಅವನು ಪ್ರಶಂಸೆ ಪಡೆಯುತ್ತಿದ್ದ. ಅವನ ಪ್ರಾಮಾಣಿಕತೆಗೆ ಇದೊಂದು ನಿದರ್ಶನ.
ಹೀಗೆ ಒಂದಿನ ಅವನ ತಂದೆ ಸಕ್ಕರೆ ತರುವುದಾಗಿ ಹೇಳಿ, ಅವನ ಕೈಗೆ ನೂರರ ನೋಟೊಂದನ್ನು ನೀಡಿದ. ಅಂಗಡಿಗೆ ಹೋದಾಗ ಸಂಜೆಗತ್ತಲಾಗಿತ್ತು. ಅಂಗಡಿಯಿಂದ ಸಕ್ಕರೆ ಹಾಗೂ ಮಿಕ್ಕ ಹಣವನ್ನು ಪಡೆದು ಮನೆ ಕಡೆಗೆ ಹೊರಟ. ಮಿಕ್ಕ ಹಣವನ್ನು ಹಾದಿಯಲ್ಲಿ ಎಣಿಸಿ ನೋಡಿದ. ಅಂಗಡಿಯಾತ ವಾಪಸು ಕೊಟ್ಟ ಹಣವನ್ನು ನೋಡಿ ಚಕಿತನಾದ. ಮತ್ತೆ ಸೀದಾ ಅಂಗಡಿ ಕಡೆಗೆ ನಡೆದ.
'ನೋಡಿ ಶೆಟ್ರೆ, ನೀವು ನನಗೆ ಕೊಟ್ಟ ಮಿಕ್ಕ ಹಣದಲ್ಲಿ 10 ರುಪಾಯಿ ಕಡಿಮೆ ಬಂದಿದೆ' ಎಂದ ಕೇಶವ. ಆಗ ಶೆಟ್ಟಿ ಕುಪಿತನಾಗಿ, 'ಅದಕ್ಕೆ ನಾನು ಜವಾಬ್ದಾರನಲ್ಲ. ಇಲ್ಲಿಂದ ಹೊರಡುವ ಮೊದಲೇ ಚಿಲ್ಲರೆ ಎಣಿಸಿಕೊಂಡು ಹೋಗಬೇಕು. ಈಗ ಅರ್ಧದಾರಿಗೆ ಹೋಗಿ, ವಾಪಸ್ ಬಂದರೆ ಹೇಗೆ ನಂಬುವುದು?' ಕೇಳಿದ. ಆಗ ಕೇಶವ ಮುಗುಳ್ನಗುತ್ತಾ, 'ಶೆಟ್ರೆ ನೀವು ನೀಡಿದ ಹಣದಲ್ಲಿ 10 ರುಪಾಯಿ ಹೆಚ್ಚಿಗೆ ಬಂದಿದೆ, ತಗೊಳ್ಳಿ' ಎಂದು ಹಣವನ್ನು ಶೆಟ್ರ ಕೈಗಿಟ್ಟ. ಶೆಟ್ಟರು ಅಚ್ಚರಿಪಟ್ಟು, ಸುಮ್ಮನೆ ಹುಡುಗನ ಮೇಲೆ ಹರಿಹಾಯ್ದಿದ್ದಕ್ಕೆ ಪಶ್ಚಾತ್ತಾಪ ಪಟ್ಟರು. ಕೇಶವನ ಪ್ರಾಮಾಣಿಕತೆಯನ್ನು ಕೊಂಡಾಡಿದರು.
ಜ್ಞಾನಪಾಠ
= ಒಂದು 'ಬಿಂದು'ವಿಗೆ ಸ್ಥಾನ ಮಾತ್ರವಿರುತ್ತದೆ. ಆದರೆ, ಉದ್ದ ಹಾಗೂ ಅಗಲ ಇರುವುದಿಲ್ಲ.
= ಒಂದು 'ಸರಳರೇಖೆ'ಗೆ ಉದ್ದವಿದೆ ಆದರೆ ಅಗಲವಿಲ್ಲ.
= ಒಂದು ಹೆಕ್ಟೇರಿಗೆ 1000 ಚದರ ಮೀಟರುಗಳು.
= ಒಂದು ಅಂಗುಲದಲ್ಲಿ 2.5 ಸೆಂಟಿಮೀಟರ್‌ಗಳಿರುತ್ತವೆ.
= 'ಲೀಲಾವತಿ' ಎಂಬ ಸಂಸ್ಕೃತ ಭಾಷೆಯ ಗಣಿತಶಾಸ್ತ್ರದ ಗ್ರಂಥದ ಕರ್ತೃ ಭಾಸ್ಕರಾಚಾರ್ಯ.
= ಕರ್ನಾಟಕದ ಪ್ರಸಿದ್ಧ ಗಣಿತ ವಿದ್ವಾಂಸರಾದ ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ ರಾಮಾಯಣವನ್ನೂ ಬರೆದಿದ್ದಾರೆ.            
ಸಂಗ್ರಹ: ಕೃಷ್ಣ. ಎಸ್. ಕುಲಕರ್ಣಿ



-ಗೊಡ್ರಿಹಾಳ್ ಬಿ. ರಮೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.