ಮ್ಯಾಚ್ ಬಾಕ್ಸ್

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋಲುತ್ತದೆ. ಟೆಸ್ಟ್‌ನಲ್ಲಿ ನಂ.1 ಪಟ್ಟ ಕಳೆದುಕೊಳ್ಳುತ್ತದೆ. ಇದನ್ನು ಗಮನಿಸಿದ ಭಾರತ ತಂಡದ ಆಯ್ಕೆ ಸಮಿತಿ ಸಭೆ ಸೇರಿ, ಟೆಸ್ಟ್ ತಂಡದ ನಾಯಕತ್ವದಿಂದ ಧೋನಿಯನ್ನು ಕೈಬಿಡಲು ತೀರ್ಮಾನಿಸುತ್ತಾರೆ. ಆಗ ಮಧ್ಯ ಪ್ರವೇಶಿಸಿದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್, ಆಯ್ಕೆ ಸಮಿತಿಯನ್ನು ಕಡೆಗಣಿಸುವ ಮೂಲಕ ಧೋನಿಗೆ ಮುಂದುವರಿಯಲು ಸೂಚಿಸುತ್ತಾರೆ. ಆಯ್ಕೆ ಸಮಿತಿಯಲ್ಲಿರುವ ಸದಸ್ಯರೊಬ್ಬರು ಇದನ್ನು ವಿರೋಧಿಸಿದರೂ ಪ್ರಯೋಜನವಾಗುವುದಿಲ್ಲ.
ಘಟನೆ ನಡೆದು ವರ್ಷ ಕಳೆದರೂ ವಿಷಯ ಮಾತ್ರ ರಹಸ್ಯವಾಗಿಯೇ ಇರುತ್ತದೆ. ಆದರೆ, 2012ರಲ್ಲಿ ಹೊಸ ಆಯ್ಕೆ ಸಮಿತಿ ರಚಿಸಿದಾಗ, ಆ ವ್ಯಕ್ತಿಯನ್ನು ಆಯ್ಕೆ ಸಮಿತಿಯಿಂದ ಕೈಬಿಡಲಾಗುತ್ತದೆ. ಆಗ ಸಿಟ್ಟಿಗೆದ್ದ ಆತ ಎಲ್ಲ ವಿಷಯಗಳನ್ನು ಬಹಿರಂಗಪಡಿಸುತ್ತಾರೆ.
ಹದ್ದಿನ ಕಣ್ಣಿನಂತೆ ಕಾಯುವ ಮಾಧ್ಯಮಕ್ಕೆ ವರ್ಷವಾದರೂ ಈ ವಿಷಯ ಯಾಕೆ ಗೊತ್ತಾಗಲಿಲ್ಲ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಕ್ರೀಡಾ ಸಂಸ್ಥ್ಥೆಗಳಲ್ಲಿ ನಡೆಯುವ ಇಂತಹ ರಹಸ್ಯ ವಿಷಯಗಳು ಮಾಧ್ಯಮಕ್ಕೆ ತಕ್ಷಣವೇ ಸೋರಿಕೆಯಾಗದಂತೆ ತಡೆಯಲು ವ್ಯಕ್ತಿಯೊಬ್ಬನನ್ನು ನೇಮಿಸಲಾಗಿರುತ್ತದೆ. ಅವರೇ ಮಾಧ್ಯಮ ನಿರ್ವಹಣಾ ಅಧಿಕಾರಿ. ಫುಟ್ಬಾಲ್ ಮತ್ತು ಕ್ರಿಕೆಟ್‌ನಲ್ಲಿ ಈ ಹುದ್ದೆ ತುಂಬಾ ಮಹತ್ವದ್ದಾಗಿದೆ. ಆಟಗಾರ ಮತ್ತು ತಂಡವೊಂದರ ಬಗೆಗಿನ ಕೆಲ ರಹಸ್ಯ ಮಾಹಿತಿಗಳು ಮಾಧ್ಯಮಕ್ಕೆ ದೊರಕದಂತೆ, ಕೆಲವು ಮಾಹಿತಿಗಳು ಸಮಯಕ್ಕೆ ಸರಿಯಾಗಿ ಮಾಧ್ಯಮಕ್ಕೆ ದೊರಕುವಂತೆ ನೋಡಿಕೊಳ್ಳಬೇಕಾದ ಕಾರ್ಯ ಕ್ರೀಡೆಯಲ್ಲಿ ತುಂಬಾ ಮಹತ್ವದ್ದು. ಅದನ್ನು ಮಾಧ್ಯಮ ನಿರ್ವಹಣಾ ಅಧಿಕಾರಿಗಳು ಚಾಕಚಕ್ಯತೆಯಿಂದ ನಿಭಾಯಿಸುತ್ತಾರೆ.
ಮಹತ್ವದ ವಿಷಯ
'ಇದೊಂದು ಬೆಣ್ಣೆಯಲ್ಲಿನ ಕೂದಲು ತೆಗೆದಷ್ಟು ನಾಜೂಕಾದ ಹುದ್ದೆ. ಇಂತ ಕಾರ್ಯವನ್ನು ಗೂಢಾಚಾರನಂತೆ ಮಾಧ್ಯಮ ಹಾಗೂ ಕ್ರೀಡಾ ಸಂಸ್ಥೆಗಳ ನಡುವೆ ಕೊಂಡಿಯಾಗಿ ನಾವು ಬಹುದೊಡ್ಡ ಪಾತ್ರ ನಿರ್ವಹಿಸಬೇಕಾಗುತ್ತದೆ. ಸಮಯ ಪ್ರಜ್ಞೆ, ಕ್ರೀಡೆಯ ಬಗ್ಗೆ ಜ್ಞಾನ, ಶಿಸ್ತು, ಸಂಯಮ ಹಾಗೂ ಹೊಂದಾಣಿಕೆ ಗುಣ ಈ ಕಾರ್ಯಕ್ಕೆ ಬೇಕಾದ ಪ್ರಮುಖ ಅಂಶಗಳು. ಯಾವ ಸುದ್ದಿಯನ್ನು ಮಾಧ್ಯಮಕ್ಕೆ ನೀಡಬೇಕು, ಯಾವದನ್ನು ನೀಡಬಾರದು ಎಂಬುದನ್ನು ಚೆನ್ನಾಗಿ ಅರಿತರೆ, ಈ ಗೌರಯುತ ಹುದ್ದೆ ನಿಭಾಯಿಸುವುದು ಸುಲಭ' ಎನ್ನುತ್ತಾರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ನಿರ್ವಹಣಾ ಅಧಿಕಾರಿ ತ್ರಿವೇಣಿ ಮುರಳಿಧರನ್.
ಆಯ್ಕೆ ಪ್ರಕ್ರಿಯೆ ಹೇಗೆ
ಆಯಾ ಕ್ರೀಡೆಗಳಲ್ಲಿ ಅನುಭವ ಹೊಂದಿರುವಂತಹ ವ್ಯಕ್ತಿಯನ್ನು ಹುಡುಕಿ ಆಯ್ಕೆ ಮಾಡಲಾಗುತ್ತದೆ. ಈ ಬಗ್ಗೆ ಇತ್ತೀಚೆಗೆ ಅನೇಕ ಕೋರ್ಸ್‌ಗಳು ಬಂದಿದ್ದು, ಅಲ್ಲಿ ತರಬೇತಿ ಪಡೆದರೆ ಇನ್ನೂ ಅನುಕೂಲವಾಗುತ್ತದೆ.
ಗಳಿಕೆ ಏನು
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಮಾಧ್ಯಮ ನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ವ್ಯಕ್ತಿ, ಪಂದ್ಯವೊಂದು ನಡೆದಾಗ, ಒಂದು ದಿನಕ್ಕೆ ರು. 1000 ಪಡೆಯುತ್ತಾರೆ. ಆದರೆ, ಬಿಸಿಸಿಐನಿಂದ ನೇಮಿಸಲ್ಪಟ್ಟ ಅಧಿಕಾರಿ ದಿನವೊಂದಕ್ಕೆ ರು. 7,500 ಗಳಿಕೆ ಮಾಡುತ್ತಾನೆ.
- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


