ಖುಷಿ

ಖುಲ್ಲಂ ಖುಲ್ಲಾ - ಬೇವು ಬೆಲ್ಲ

Published On :

ಎಫ್ ಅಂದರ...
ತಿಮ್ಮಾ: ಅದೇನ ತಮ್ಮಾ. ಡಿಕ್ಷನರಿ ತಕ್ಕೊಂಡ ಕುಂತಿಯಲಾ? ಏನ್ ನೋಡಾಕತ್ತಿ?
ತಮ್ಮಾ: 'ಎಫ್‌' ಪದದಾಗ ಏನೆಲ್ಲ ಐತಿ ಅಂತ ನೋಡತಿದ್ದೆ...
ತಿಮ್ಮ: ಎನರಡ ಸಿಕ್ಕವೇನು?
ತಮ್ಮಾ: 'ಎಫ್‌'ದಿಂದ 'ಎಫ್‌ಎಂ' ಬಂದೈತಲಾ..!
ತಿಮ್ಮಾ: ಆದರ ಭಾಷಾ ಹಾಳಾಗಿ ಹತ್ತಿಬಿತ್ತಿ ಹೋಗೆತಲಾಡ!!
ತಮ್ಮಾ: 'ಎಫ್‌'ನಿಂದ 'ಫ್ಯೂಜನ್‌' ಅಂತ ಏನೋ ಮಾಡ್ತಾರಂತಲಾಡ!
ತಿಮ್ಮಾ: ಸಂಗೀತ ಹಾಳಾಗಿ ಹೊಗೇತಲಾಡ!!
ತಮ್ಮಾ: 'ಎಫ್‌'ನಿಂದ ಈಗ ಭಾಳಾ ಇಂಪಾರಟೆಂಟ್ ಅಂದ್ರ 'ಫೇಸಬುಕ' ನೋಡಪಾ...!
ತಿಮ್ಮಾ: ಸಂಬಂಧಗಳು ಶಗಣಿ ತಿಂದು ಹೊಂಟಾವಲಾಡಡ!!
ತಮ್ಮಾ: 'ಎಫ್‌'ನಿಂದ 'ಫಾರಿನ್ ಟೂರ್‌' ಆಗ್ತಾವಲಾ ಡಡ!!
ತಿಮ್ಮಾ: ಊರಾಗ ಇದ್ದ ಮಾಡಲಿಕ್ಕಾಗಲಾರದ್ದನ್ನ ಟೂರ್‌ನ್ಯಾಗ ಮಾಡಬಹುದಲಾಡಡ!!
ತಮ್ಮಾ: 'ಫಾರಿನ್ ಮಾಲ' ಬಂದಾವಲಾಡಡ!!
ತಿಮ್ಮಾ: ನಾಲ್ಕ ದಿನ ಛಂದಾಗಿರತಾವು, ಆಮ್ಯಾಲ ಮುರದ ಬಿಳತಾವ, ಏನೂ ಗ್ಯಾರಂಟಿ ಇಲ್ಲಲಾಡಡ!!
ತಮ್ಮಾ: 'ಫ್ಯಾಂಟಸಿ ಪಾರ್ಕ್‌'ಗಳಾಗ್ಯವಲಾಡಡ!!
ತಿಮ್ಮಾ: ಜಾತ್ರಿ, ಹಬ್ಬ-ಹರಿದಿನಗಳು ಮಾಯ ಆಗಕತ್ತವಲಾಡಡ!!
ತಮ್ಮಾ: 'ಎಫ್‌' ನಿಂದ ಫ್ಲೆಕ್ಸ್ ಬಂದಾವಲಾಡಡ!!
ತಿಮ್ಮಾ: ಕುಂಚ ಹಿಡಿದ ದುಡಿಯೋ ಕಲಾವಿದ ಕಂಗಾಲ ಆಗ್ಯಾನಲಾಡಡ!!
ತಮ್ಮಾ: 'ಫ್ಯಾಷನ್‌' ಬರೋದೇನು ಹೊಸಾದಲ್ಲ ಆದರ ಚನಲ್ಲು ಬಂದೈತಲಾ...!
ತಿಮ್ಮಾ: ಹುಚ್ಚುತನದ ವರೈಟಿ ನೋಡಾಕ ಸಿಗತೇತಲಾಡಡ!!
ತಮ್ಮಾ: 'ಫಿಲ್ಮ್‌'ನ್ಯಾಗ ಏನೇನೋ ಆಗ್ಯಾವಲಾಡಡ!!
ತಮ್ಮಾ: ನೋಡವರು ಥೇಟರಿಗೆ ಬರೋದ ಬಿಟ್ಟಾರಲಾಡಡ!!
ತಮ್ಮಾ: 'ಫಿಲ್ಮ್ ಅವಾರ್ಡ್‌' ಎಲ್ಲಾರಿಗೂ ಕೊಡಾಕತ್ತಾರಲಾಡಡ!!
ತಿಮ್ಮಾ: ಆದರ ಇಸಗೊಳ್ಳಾಕ, ಫಿಲ್ಮ್‌ನವರಡ ಯಾರು ಉಳಿದಿಲ್ಲಲಾಡಡ!!
ತಮ್ಮಾ: 'ಫಂಕ್ಷನ್‌' ಗಲ್ಲಗಲ್ಲಿಗೂ ಆಗತ್ತಾವಲಾಡಡ!!
ತಿಮ್ಮಾ: ಹಿಂಗಾಗಿ ಮುಖ್ಯ ಅತಿಥಿಗಳು ಸಿಗವಲ್ಲರಾಗ್ಯಾರಲ್ಲ ಡಡ!!
ತಮ್ಮಾ: 'ಫ್ರಾಡ್‌' ದಿನಕ್ಕದಿನಾ ಹೆಚ್ಚಗಾಕತ್ತಾವಲ !
ತಿಮ್ಮಾ: ಮಾಡಿಸಿಕೊಳ್ಳವರು ಇದ್ದಲ್ಲೆ ಮಾಡವರು ರಡಿ ಇರತಾರ!!
ತಮ್ಮಾ: 'ಫ್ಲಾಪ್‌'ಗಳು ಭಾಳಗ್ಯಾವು!
ತಿಮ್ಮಾ: ಅರ್ಧಮರ್ಧ ಶಾಣ್ಯಾತನ ಇದ್ದರ ಇನ್ನೇನು ಆಗ್ತಾವು ಡಡ !!
ತಮ್ಮಾ: ಈ 'ಎಫ್‌'ದಾಗ ಫೇಲ್ ಐತಿ, ಫ್ಲಾ ಐತಿ, ಫೂಲ್ ಐತಿ, ಫಾಲ್ಟ್ ಐತಿ, ಫೋರ್‌ಟ್ವೆಂಟಿನೂ ಇದರಾಗ ಐತೆಲಾ...
ತಿಮ್ಮಾ: ಅದಕ್ಕ ಅದರಾಗಡ ಮಜಾ ಐತಿ, ಅದಡ ಎಫ್‌ನ್ಯಾಗ ಫನ್ ಐತಿ, ಫ್ಲವರ್ ಐತಿ, ಫ್ಲೇವರ್ ಐತಿ, ಫೇವರ್ ಐತಿ, ಒಟ್ಟಿನ್ಯಾಗ 'ಎಫ್‌' ಫೆಂಟಾಸ್ಟಿಕ್ ಐತಿ!!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.