ಖುಷಿ

ಉತ್ತರಾಧಿಕಾರಿ

Published On :

ಮ. ಶಿವಸ್ವಾಮಿ , ಬೆಂಗಳೂರು.
ಮುಂದಿನ ಚುನಾವಣೆಯಲ್ಲಿ 'ಕೈ' ಪಾಳಯದ ರಾಹುಲ್ ಗಾಂಧಿ ಗೆಲ್ಲುವರೆ?
-'ಕೈ'ಗೆ ಬಂದದ್ದು ಬಾಯಿಗೆ ಬರದೇ ಹೋಗಬಹುದು!

ರವೀಂದ್ರನಾಥ ಶಿ. ಯಡಹಳ್ಳಿ, ಬೀಳಗಿ
ಫೇಸ್‌ಬುಕ್‌ಗೂ, ಪಾಸ್‌ಬುಕ್‌ಗೂ ವ್ಯತ್ಯಾಸವೇನು?
ಫೇಸ್‌ಬುಕ್‌ನಲ್ಲಿ 'ಬ್ಯಾಲೆನ್ಸ್‌' ತಪ್ಪುತ್ತೆ. ಪಾಸ್‌ಬುಕ್‌ನಲ್ಲಿ ಬ್ಯಾಲೆನ್ಸ್ ತಪ್ಪೋಲ್ಲ!


 ವೆಂಕಟೇಶ್‌ಭಟ್, ಮಂಗಳೂರು
ಇತ್ತೀಚೆಗೆ ರಾಜಕಾರಣಿಗಳದ್ದು ವೇದಾಂತ, ಸ್ವಾಮೀಜಿಗಳದ್ದು ರಾದ್ಧಾಂತ ಆಗುತ್ತಿದೆಯಲ್ಲ?
- ಅವರದ್ದು ರಾಜಕೀಯ ಸನ್ಯಾಸ, ಇವರದ್ದು 'ಸನ್ಯಾಸ ರಾಜಕೀಯ'!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಎಲ್ಲರ ಬುರುಡೆಯಲ್ಲೂ ಒಂದೇ ಮೆದುಳು, ಆದರೂ ಬುದ್ಧಿ ಯಾಕೆ ಬೇರೆ ಬೇರೆ?
-ಬುದ್ಧಿನ ಬೇರೆ ಬೇರೆ ಕಡೆ ಓಡಿಸ್ತಾರಲ್ಲ ಅದಕ್ಕೆ!
ಆರ್.ಸಿ. ಪರಶುರಾಮ್, ಶಿಕಾರಿಪುರ.
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ, ಅತ್ತೆ ಸೊಸೆ ಜಗಳ?
-ಇಬ್ಬರೂ ಊಟ ಮಾಡದೇ ಮಲಗುವ ತನಕ!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ
 ಜೀವಕ್ಕಿಂತ ಪ್ರೀತಿ ಯಾವುದು?
-ಕೆಲವರು ನಿನ್ನನ್ನು 'ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ' ಅಂತ ಯಾರ ಬಗ್ಗೆಯೋ ಹೇಳ್ತಿರ್ತಾರೆ!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಎರಡು ಜಡೆ ಸೇರಿದರೆ ಜಗಳ, ಎರಡು ಮೀಸೆ ಸೇರಿದರೆ?
-ಜಡೆ ಬಗ್ಗೆ ಜಗಳ!
ಪೇಂಟರ್ ಪಾಪು, ಸಂತೇಮರಹಳ್ಳಿ
ನಾವು ಒಳ್ಳೇ ದಾರಿಯನ್ನೇ ಯಾಕೆ ಆರಿಸಿಕೊಳ್ಳಬೇಕಾಗುತ್ತೆ?
-'ಅಡ್ಡದಾರಿ'ಯಲ್ಲಿ ಜನ ಜಾಸ್ತಿ ಹೋಗ್ತಿರ್ತಾರೆ!
ಅಣಜಿ ಮಂಜುನಾಥ್, ಮಾಧನಬಾವಿ
ಕೆಲವು ವಿದ್ವಾಂಸರೇಕೆ ವಿಧ್ವಂಸಕಾರಿ ಹೇಳಿಕೆಗಳನ್ನು ಕೊಡುತ್ತಾರೆ?
-ಅವರು ಲೇಖನಿಗಿಂತ ನಾಲಿಗೆಯೇ ಹರಿತ ಅಂತ ನಂಬಿದವರು!

ಚಿಲ್ಲಿ ಕ್ವೆಶ್ಚನ್
ಮಕ್ಕಳು ಗೈರುಹಾಜರಾದ್ರೆ 'ಕ್ಷೀರಭಾಗ್ಯ'ದ ಹಾಲನ್ನು ಶಿಕ್ಷಕರು ಏನು ಮಾಡಬೇಕು?
ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ ಉತ್ತರಗಳು ಮುಂದಿನ ಸಂಚಿಕೆಯಲ್ಲಿ...  ಝಞ್ಡಝ್ಝಟಛ್ಜಅ್ಜಟಛ್ಝಟ.್ಛ್ಟಟ

ಕಳೆದವಾರದ ಉತ್ತರಗಳು
ರಾಹುಲ್‌ಗಾಂಧಿ ಬಳ್ಳಾರಿಯಲ್ಲಿ ಎಲೆಕ್ಷನ್‌ಗೆ ನಿಲ್ತಾರಂತೆ ಹೌದಾ?

ಉ: ಅಮ್ಮನಿಗೆ ತಕ್ಕ ಮಗ ಎಂದು ಕರೆಯಲು ಅಡ್ಡಿ ಇಲ್ಲ ಬಿಡಿ.
- ವೀರಭದ್ರಪ್ಪ ಉಳ್ಳಾಗಡ್ಡಿ, ಯಾದಗಿರಿ
ಅಮೇಥಿಯಲ್ಲಿ 'ಆಮ್ ಆದ್ಮಿ' ಸರಿಯಾಗಿ ಚಳಿ ಬಿಡಿಸ್ತಿದ್ದಾರೆ ಅಂತಾಯ್ತು.
- ಮಾದೇಶ, ಮಂಡ್ಯ


-ಎಸ್.ವಿ. ಪದ್ಮನಾಭ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.