ಖುಷಿ

ಉತ್ತರಾಧಿಕಾರಿ

Published On :

ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಮಠಾಧೀಶರ ಮುಂದೆ ಅಷ್ಟೊಂದು ಶ್ರೀಗಳೇಕೆ?
- ಅವರೆಲ್ಲ 'ಅತಿಶ್ರೀ'ಗಳು, ಅದಕ್ಕೆ ಇತಿಶ್ರೀ ಹಾಕೋದು ಕಷ್ಟ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಹುಡುಗರ ನಡೆಗೂ ಹುಡುಗಿಯರ ನಡೆಗೂ ವ್ಯತ್ಯಾಸವೇನು?
-ಹುಡುಗರದ್ದು ವಾಕಿಂಗ್, ಹುಡುಗಿಯರದ್ದು ಕ್ಯಾಟ್ ವಾಕಿಂಗ್!
ಎಂ.ಎಸ್. ಮಂಜುನಾಥ್ ಅಣಜಿ, ಮಾಧನಬಾವಿ
ರಾಜಕಾರಣಿಗಳು ಮಾತ್ರ ತಮ್ಮ ಮಕ್ಕಳನ್ನು ತಮ್ಮ ವೃತ್ತಿಗೆ ಬರಬೇಡ ಎಂದು ಹೇಳೋಲ್ವಲ್ಲ ಯಾಕೆ?
-ತಮ್ಮ 'ಕಸುಬು' ತಮ್ಮ ಮಕ್ಕಳಿಗೇ ಗೊತ್ತಿರಲೀ ಅಂತ!
ಬಿ.ಎಸ್. ನಾರಾಯಣಸ್ವಾಮಿ, ಬೋದನಹೊಸಹಳ್ಳಿ
ಮನಸ್ಸಿದ್ದರೆ ಮಾರ್ಗ, ಕನಸಿದ್ದರೆ?
-ಹಲವರದ್ದು ವಾಮಮಾರ್ಗ! ಕೆಲವರದ್ದು ಸನ್ಮಾರ್ಗ!
ಸ್ವಾಮಿ ನಿರ್ಮಲಾ, ಉಡಿಗಾಲ
ವ್ಯಂಗ್ಯ ಚಿತ್ರಕಾರರು ಮಂತ್ರಿಗಳನ್ನು ವಕ್ರವಾಗಿ ಚಿತ್ರಿಸುತ್ತಾರೇಕೆ?
-ಅವರು ಅವರ ಮುಖ ನೋಡೋಲ್ಲ, 'ಕೆಲಸ' ನೋಡಿ ಚಿತ್ರಿಸ್ತಾರೆ!
ವಿ. ಹೇಮಂತಕುಮಾರ್, ಬೆಂಗಳೂರು
ಕದಿಯುವುದಕ್ಕೂ ದೋಚುವುದಕ್ಕೂ ವ್ಯತ್ಯಾಸವೇನು?
-ಕದಿಯುವುದು ಸಣ್ಣತನ, ದೋಚುವುದೇ 'ದೊಡ್ಡತನ'!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
ಸಾವು ನಗುವುದು ಯಾವಾಗ?
- ಎಲ್ಲರೂ ಅಳುತ್ತಿರುವಾಗ!

ಮೊಳಕಾಲ್ಮೂರು ಸುರೇಶ್, ಬೆಳಗಾಂ
ಆಕಳ ಹಾಲನ್ನು ಬೆಚ್ಚಗೆ ಮಾಡಿ ಕುಡಿಯಬೇಕಂತೆ, ಆದರೆ ಆಲ್ಕೋಹಾಲನ್ನು?
- ಅದು ಕುಡಿದರೆ ನೀವೇ ಬೆಚ್ಚಗಾಗ್ತೀರಿ.
ಚೇತನ್, ಕಡೂರು
ಸಚಿವ ಎಚ್. ಆಂಜನೇಯ ಯಾಕೆ ಆತುರಗೆಟ್ಟ ಆಂಜನೇಯನಂತೆ ಆಡುತ್ತಿದ್ದಾರೆ?
- ಅವರಿಗೆ ಆಡಳಿತ 'ನಡೆಸುವುದಕ್ಕಿಂತ' 'ಹಾರಿಸು'ವುದರಲ್ಲೇ ನಂಬಿಕೆ!


ಚಿಲ್ಲಿ ಕ್ವೆಶ್ಚನ್
ರಾಹುಲ್‌ಗಾಂಧಿ ಬಳ್ಳಾರಿಯಲ್ಲಿ ಎಲೆಕ್ಷನ್ನಿಗೆ ನಿಲ್ತಾರಂತೆ, ಹೌದಾ?
ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ ಉತ್ತರಗಳು ಮುಂದಿನ ಸಂಚಿಕೆಯಲ್ಲಿ...   khushimag@gmail.com


ಕಳೆದವಾರದ ಉತ್ತರಗಳು
ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಕ್ರಿಕೆಟ್‌ನಲ್ಲೇಕೆ ಚಿಯರ್ ಗರ್ಲ್ಸ್ ಇರುವುದಿಲ್ಲ?

ಉ: ಟಿ20ಯ ಹಾವಳಿಯಲ್ಲಿ ಪ್ರೇಕ್ಷಕರು ಬಂದ್ರೇನೇ ಪುಣ್ಯ, ಇನ್ನು ಚಿಯರ್ ಗರ್ಲ್ಸಾ?
- ಎಲ್.ವಿ. ಕುಮಾರಸ್ವಾಮಿ
ಉ: ಆ ದೀರ್ಘ ಪಂದ್ಯಗಳಲ್ಲಿ ಕುಣಿಯುವಷ್ಟು ತಾಕತ್ತು ಈಗಿನ ಹೆಣ್ಣುಮಕ್ಕಳಿಗಿಲ್ಲ!
- ಶಂಕರನಾರಾಯಣ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.