ಗರಿಗೆದರಿದ ಗಿರಿ

ತನ್ನ ಕಾದಂಬರಿಯ ಹೆಸರಿನಿಂದಲೇ ಕನ್ನಡ ಜನಮಾನಸದಲ್ಲಿ ಗುರುತಿಸಿಕೊಳ್ಳುವ ಇನ್ನೊಬ್ಬ ಲೇಖಕ ಕನ್ನಡದಲ್ಲಿ ಇರಲಿಕ್ಕಿಲ್ಲ. ಅವರು 'ಗತಿ ಸ್ಥಿತಿ ಗಿರಿ' ಎಂದೇ ಖ್ಯಾತರಾದ ಗಿರಿ. ಅವರ ಇದುವರೆಗಿನ ಸಮಸ್ತ ಕೃತಿಗಳು 'ಗತಿ ಸ್ಥಿತಿ ಮತ್ತೆಲ್ಲ' ಶೀರ್ಷಿಕೆಯಲ್ಲಿ ಇಂದು (ಏ.20) ಬಿಡುಗಡೆಯಾಗುತ್ತಿದೆ.
'ನವ್ಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಹೊರಬಂದ ಈ ಕೃತಿ ಆ ನಂತರದ ಚಳವಳಿಗಳನ್ನೂ ದಾಟಿ ಬಂದಿರುವ ನಮಗೆ ಈಗ ಬೇರೆಯದೇ ಅರ್ಥ ಆಯಾಮಗಳನ್ನು ಅನುಗ್ರಹಿಸುತ್ತದೆ. ಹೊಸ ಪೀಳಿಗೆಯ ಓದುಗರಿಗೆ ಇದು ನವ್ಯರ ಕಾಲದ ಕಾದಂಬರಿಯೆಂದು ಬಹುಶಃ ಅನಿಸಲಾರದು. ಹೀಗೆ ಎಲ್ಲ ದೃಷ್ಟಿಯಿಂದಲೂ ಹೊಸತನ, ಪರಿಪೂರ್ಣತೆ ಸಾಧಿಸಿರುವ ಈ ಕಾದಂಬರಿ ಸಹಜವಾಗಿಯೇ ಕನ್ನಡ ಸಾಹಿತ್ಯದ ಕ್ಲಾಸಿಕ್ ಕೃತಿಯಾಗಿದೆ' ಎಂದು ಎಸ್.ದಿವಾಕರ್ 'ಗತಿ ಸ್ಥಿತಿ'ಯ ಬಗ್ಗೆ ನುಡಿಯುತ್ತಾರೆ.
ಬಿಡುಗಡೆಯಾಗಲಿರುವ ಹೊತ್ತಿಗೆಯಲ್ಲಿ ಗತಿ ಸ್ಥಿತಿಯ ಜತೆಗೆ ಕಂಡದ್ದು ಕಾಣದ್ದು, ಕಾಫ್ಕನ ರೂಪಾಂತರ ಕಾದಂಬರಿಗಳು ಮತ್ತು ಕತೆಗಳಿವೆ. ಎಸ್.ದಿವಾಕರ್ ಬಿಡುಗಡೆಗೊಳಿಸಲಿದ್ದಾರೆ. ಗಿರಿ ಉಪಸ್ಥಿತರಿರುತ್ತಾರೆ. ಆಕೃತಿ ಪುಸ್ತಕವು ಇದನ್ನು ಪ್ರಕಟಿಸುತ್ತಿದೆ. ಸ್ಥಳ: ಆಕೃತಿ ಪುಸ್ತಕ ಮಳಿಗೆ, ರಾಜಾಜಿನಗರ. ಸಮಯ: ಬೆಳಗ್ಗೆ 10.30.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


