ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ
-ಉಷಾಲಕ್ಷ್ಮಿ, ಚಾಮರಾಜನಗರ
ತಂದೆಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಹುಡುಗನನ್ನು ದತ್ತು ತೆಗೆದುಕೊಂಡಿದ್ದರು. ಈಗ ಆತನಿಗೆ 43 ವರ್ಷ ವಯಸ್ಸು. ನಮ್ಮ ತಂದೆ ಕಾಲವಾದ ನಂತರ ದತ್ತು ಮಗ ಎಲ್ಲ ಆಸ್ತಿಯನ್ನೂ ತಾನೇ ಇಟ್ಟುಕೊಂಡಿದ್ದು, ಈಗ ಕೆಲಕಾಲದ ಹಿಂದೆ ನಮಗೆ ತಿಳಿಯದಂತೆ, ನಮ್ಮ ಗಮನಕ್ಕೆ ಬಾರದಂತೆ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದಾನೆ. ಇದೇ ರೀತಿ ಮುಂದೆಯೂ ಮಾಡಬಹುದು. ಇದನ್ನು ತಡೆಯುವುದು ಹೇಗೆ?
- ನಿಮ್ಮ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನವಾದ ಹಕ್ಕಿದೆ. ಆದ್ದರಿಂದ ಈ ಹಿಂದೆ ಮಾರಾಟ ಮಾಡಿದ ಜಮೀನಿನ ವಿವರವನ್ನು ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಪಡೆದು ಆಸ್ತಿ ಮಾರಾಟ ಮಾಡಿದ ಕ್ರಮವನ್ನು ರದ್ದು ಮಾಡುವಂತೆ ಕೋರಿ (ಆರ್ಟಿಕಲ್ 59 ಲಿಮಿಟೇಷನ್ ಕಾಯ್ದೆ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ. ಜತೆಗೆ ಉಳಿದ ಆಸ್ತಿಯಲ್ಲಿ ನಿಮ್ಮ ಪಾಲು ಕೇಳಿ ದಾವಾ ಹಾಕಿ.
ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕಿದೆ
-ಎಂ. ಶಿವಪ್ಪ, ಕಡಕಟ್ಟೆ
ತಂದೆಯ ಆಸ್ತಿಯು ನನ್ನ ಹೆಸರಿಗೆ 1992ರಲ್ಲಿ ಬದಲಾವಣೆಯಾಯಿತು. ನಾನು ಆ ಜಮೀನಿನ ಮೇಲೆ ಸಾಲ ತೆಗೆದುಕೊಂಡಿದ್ದೇನೆ. ಈಗ ನನ್ನ ತಂಗಿಯರು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ತಮಗೂ ಪಾಲು ಬೇಕೆಂದು ದಾವಾ ಹಾಕಿದ್ದಾರೆ. ಇದು ಸರಿಯೇ? ನಾನು ಏನು ಮಾಡಬೇಕು?
- ನಿಮ್ಮ ತಂದೆಯ ಆಸ್ತಿಯು ವಿಭಾಗವಾಗಿ ನೋಂದಣಿಯಾಗಿದ್ದರೆ ಮಾತ್ರ ಹೊಸ ಕಾನೂನು ಅನ್ವಯವಾಗುವುದಿಲ್ಲ (ಕಲಂ 6 (5)- ವಿವರಣೆ) ಅಥವಾ 20.12.2004ರ ಮುಂಚೆ ವಿಲ್ ಮಾಡಿದ್ದರೆ ಸರಿ. ಇಲ್ಲದಿದ್ದರೆ ಕಲಂ 6ರ ಹಿಂದೂ ಉದ್ದರಾಧಿಕಾರ ಕಾಯ್ದೆಯ ತಿದ್ದುಪಡಿಯಂತೆ ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿದೆ.
ನೈಜತೆಯನ್ನು ಪ್ರಶ್ನಿಸಿ ದಾವಾ ಹಾಕಿ
-ಎಸ್.ಎಸ್. ಭಟ್, ಹೊನ್ನಾವರ
ತಂದೆಗೆ ಇಬ್ಬರು ಹೆಂಡತಿಯರು. ಬದುಕಿದ್ದಾಗ ನಮ್ಮ ತಂದೆ ಎರಡನೇ ಹೆಂಡತಿಯ ಮಗನಿಗೆ ವಿಲ್ ಮೂಲಕ ತಮ್ಮ ಎಲ್ಲ ಆಸ್ತಿಯನ್ನೂ ಬರೆದಿರುವಂತೆ ತೋರಿಸಲಾಗಿದೆ. ಮೊದಲ ಹೆಂಡತಿ, ಮಕ್ಕಳ ಪ್ರಸ್ತಾಪ ಅದರಲ್ಲಿ ಇಲ್ಲವೇ ಇಲ್ಲ. ಆಸ್ತಿ ಪಿತ್ರಾರ್ಜಿತವಾದರೂ ಸ್ವಯಾರ್ಜಿತ ಎಂದು ವಿಲ್‌ನಲ್ಲಿ ತೋರಿಸಲಾಗಿದೆ. ತಂದೆ ಟೀಚರ್ ಆಗಿದ್ದರೂ ಅವರ ಹೆಬ್ಬೆಟ್ಟು ಗುರುತನ್ನು ವಿಲ್‌ಗೆ ಪಡೆಯಲಾಗಿದೆ. ಈಗ ನಾವು ನಮ್ಮ ಆಸ್ತಿ ಪಡೆಯಲು ಏನು ಮಾಡಬೇಕು?
- ನ್ಯಾಯಾಲಯದಲ್ಲಿ ದಾವಾ ಹಾಕಿ ವಿಲ್‌ನ ನೈಜತೆಯನ್ನು ಪ್ರಶ್ನಿಸಿ. ಜತೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಕೇಳಿ ದಾವಾ ಹಾಕಿ.
ಖಂಡಿತ ಸಿಗುತ್ತದೆ
-ಎಸ್. ನಾಗರಾಜ, ಕೊಡ್ಲಿಪೇಟೆ
ಗಂಡ ನಿರುದ್ಯೋಗಿ, ಹೆಂಡತಿ ಸರ್ಕಾರಿ ಉದ್ಯೋಗದಿಂದ ನಿವೃತ್ತಿಯಾದ ನಂತರ ನಿಧನಹೊಂದಿದ್ದಾಳೆ. ಗಂಡನಿಗೆ ಕುಟುಂಬ ನಿವೃತ್ತಿ ವೇತನ ಸಿಗುವುದೇ?
- ಗಂಡನಿಗೆ ಕುಟುಂಬ ನಿವೃತ್ತಿ ವೇತನ ಸಿಗುತ್ತದೆ (ನಿಯಮ 9(ಎ), ಕುಟುಂಬ ನಿವೃತ್ತಿ ವೇತನ ನಿಯಮಗಳು, 2002).
= ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

