ಖುಷಿ

ಟ್ವೀಟ್ ಇಂಡಿಯಾ ಚಳವಳಿ!

Published On :

ಅಪರಿಚಿತನೊಬ್ಬನಿಗೆ 'ಹಾಯ್‌' ಹೇಳಿದೆ. ಎಲ್ಲಿಗೆ ಹೋಗುತ್ತಿದ್ದೀಯಾ ಎಂದೂ ಕೇಳಿದೆ. ಆದರೆ ಆತ ನಾನು ಕನಸಲ್ಲಿ ಕಂಡ ಹುಡುಗನಾಗಿರಲಿಲ್ಲ. ಈಗ ಆತನಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೇನೆ.
- ಮಿಸ್ಮಲಿನಿ
'ಪ್ರತಿದಿನ ಆಲ್ಕೋಹಾಲ್ ಉಪಯೋಗಿಸುವುದರಿಂದ ವೈದ್ಯರನ್ನು ದೂರವಿಡಬಹುದು' ಎಂಬ ಸಂಶೋಧನಾ ಲೇಖನ  ಪತ್ರಿಕೆಗಳಲ್ಲೇ ಪ್ರಕಟವಾಗಿದೆ. ನಿಮಗೆ ತಿಳಿದಿಲ್ಲವೆ?
- ರೋನಿ ಸ್ಕೃವೆಲ್ಲಾ
ನನ್ನ ಸುಳ್ಳುಗಳ ಪುಸ್ತಕಕ್ಕೆ ನಾನೇ ಸಂಪಾದಕಿ. ನಾನೇ ಲೇಖಕಿ. ಹಾಗಾಗಿ ನನ್ನ ಸಹಿಯನ್ನು ನಕಲು ಮಾಡಿರುವೆ.
- ಗುಲ್ ಪನಾಗ್
ರಜಾ ದಿನಗಳಲ್ಲಿ ವಿಮಾನದಲ್ಲಿ ಕುಳಿತಾಗ ರೋಮಾಂಚನಗೊಂಡು ಹಲ್ಲುಕಿರಿದಿದ್ದೆ. ಸಣ್ಣ ಮಕ್ಕಳು ಕ್ಯಾಂಡಿ ಅಂಗಡಿ ಮುಂದೆ ನಿಂತಂತೆ ಕಾಣಿಸುತ್ತಿದ್ದೆ!
- ಪ್ರೀತಿ ಜಿಂಟಾ
ನನ್ನ 79 ವರ್ಷದ ಅಜ್ಜಿ ಇತ್ತೀಚೆಗೆ ಟ್ವಿಟರ್ ಖಾತೆ ತೆರೆದರು. ಈಗ ನನ್ನ ಬಳಿ ಕೇಳುತ್ತಿದ್ದಾರೆ 'ಯಾರೀ ಅಪರಿಚಿತರು? ನನ್ನನೇಕೆ ಹಿಂಬಾಲಿಸುತ್ತಿದ್ದಾರೆ?'
- ಕರುಣ್ ಚಾಂದೋಕ್
ನಾನು ನಿದ್ರಿಸುವುದೇ ಇಲ್ಲ. ಯಾಕೆಂದರೆ ಎಲ್ಲಿ ಉಸಿರಾಡುವುದನ್ನು ಮರೆತು ಬಿಡುತ್ತೇನೋ ಎಂಬ ಭಯ!!
- ಶಿರೀಸ್ ಕುಂದರ್
(a+b)2= a2+2ab+b2 ಸೂತ್ರ ನನ್ನ ಜೀವನದಲ್ಲಿ ಎಂದು ನಿಜವಾಗುತ್ತದೆ ಎಂದು ಕಾಯುತ್ತಿದ್ದೇನೆ.
- ನಿಖಿಲ್ ಸಿದ್ದಾರ್ಥ್
ಹೆಚ್ಚಿನ ಆತ್ಮವಿಶ್ವಾಸದಿಂದ ಹಲವು ಸಮಸ್ಯೆಗಳಿಗೆ ಒಳಗಾಗಬಹುದು. ಆದರೆ ಸೂಪರ್ ಕಾನ್ಫಿಡೆನ್ಸ್‌ನಿಂದ ಸಮಸ್ಯೆಗಳ ಸುತ್ತಲೂ ಸುತ್ತಬಹುದು.
- ರಾಮ್‌ಗೋಪಾಲ್ ವರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.