ಖುಷಿ

ಬೇಡ ಮಾಸ್ಟರ್ ಬೆಡ್‌ರೂಮ್

ಮನೆಯಲ್ಲಿ ಮಲಗುವ ಕೋಣೆ (Bed Room) ಅತೀ ಪ್ರಮುಖವಾದದ್ದು. ಇಡೀ ದಿನ ಅನುಭವಿಸಿದ ಸರ್ವಾಂಗಗಳ ದಣಿವಿನಿಂದ....

ಬೇಡ ಮಾಸ್ಟರ್ ಬೆಡ್‌ರೂಮ್
Published On :

ಮನೆಯಲ್ಲಿ ಮಲಗುವ ಕೋಣೆ (Bed Room) ಅತೀ ಪ್ರಮುಖವಾದದ್ದು. ಇಡೀ ದಿನ ಅನುಭವಿಸಿದ ಸರ್ವಾಂಗಗಳ ದಣಿವಿನಿಂದ ಹೊರಬರುವ ಸುಂದರ ದೇಗುಲ ನಿಮ್ಮ ಮಲಗುವ ಕೋಣೆ. ಸಪ್ತಚಕ್ರಗಳ ಚೈತನ್ಯಕ್ಕೆ ಬೆಡ್‌ರೂಮೇ ಪ್ರಮುಖ. ನಿತ್ಯವೂ ನಿಮ್ಮ ಹೊಸ ದಿನದ ಪ್ರಾರಂಭದಿಂದ ಮಲಗುವವರೆಗೆ ಪ್ರತಿ ಯಶಸ್ವಿ ಕಾರ್ಯಗಳ ಹಿಂದೆ ನಿಮ್ಮ ಮಲಗುವ ಕೋಣೆಯೂ ಕಾರಣ. ಸರಳವಾಸ್ತುವಿನ ಪ್ರಕಾರ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಇರುವಿಕೆ, ಅವುಗಳು ನಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತವೆ? ಅವುಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮಗಳೇನು? ಅದನ್ನು ತಿಳಿದುಕೊಳ್ಳೋಣ.
ಸರಳವಾಸ್ತುವಿನ ಪ್ರಕಾರ ಮನುಷ್ಯನ ಜೀವನದಲ್ಲಿ ಯಶಸ್ಸು ಕಾಣಲು ಪ್ರತಿ ಮನುಷ್ಯ ತನ್ನ ಜನ್ಮದಿನಾಂಕದ ಅನುಗುಣವಾಗಿ ನಾಲ್ಕು ಒಳ್ಳೆಯ ಹಾಗೂ ನಾಲ್ಕು ಕೆಟ್ಟ ದಿಕ್ಕುಗಳನ್ನು ಹೊಂದಿರುತ್ತಾನೆ. ಅವುಗಳ ಪ್ರಕಾರ ಮಲಗುವ ಕೋಣೆಯಲ್ಲಿ ನಿಮ್ಮ ಮಂಚ ಹಾಗೂ ದಿಕ್ಕು ಸರಿಯಾಗಿ ಇರದಿದ್ದಲ್ಲಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವುದು. ಮನುಷ್ಯನ ಸಪ್ತಚಕ್ರಗಳು ಧನಾತ್ಮಕ ಶಕ್ತಿಯ ಪೂರೈಕೆ ಸರಿಯಾಗಿ ಆಗದೇ ಇರುವುದರಿಂದ ಚೈತನ್ಯಗೊಳ್ಳದಿರುವುದು ಇದಕ್ಕೆ ಕಾರಣ.
ದಪ್ಪಗಿರುವವರು ಡಯಟ್, ವಾಕಿಂಗ್ ಮಾಡಿದರೂ ತೂಕ ಕಡಿಮೆಯಾಗುವುದಿಲ್ಲ. ಇದಕ್ಕೆ ಧನಾತ್ಮಕ ಶಕ್ತಿ ಪೂರ್ಣ ಪ್ರಮಾಣದ ಪೂರೈಕೆಯೇ ಕಾರಣ ಎಂದು ಸರಳವಾಸ್ತು ಹೇಳುತ್ತದೆ. ರಾತ್ರಿ ಮಲಗಿದಾಗ ಮನುಷ್ಯನ ಚಕ್ರಗಳಲ್ಲಿ ಋಣಾತ್ಮಕ ಶಕ್ತಿಯ ಹರಿವಿಕೆ ಕಡಿಮೆ ಮಾಡಿ, ಧನಾತ್ಮಕ ಶಕ್ತಿಯ ಸಂಗ್ರಹಣೆ ಸರಿಯಾಗಿ ಆಗದೇ ಇರುವುದು ಇದಕ್ಕೆ ಕಾರಣ. ಸರಳವಾಸ್ತುವಿನ ಪ್ರಕಾರ ಮನೆ ಎಷ್ಟು ಮುಖ್ಯವೋ ಮಲಗುವ ಕೋಣೆಯೂ ಅಷ್ಟೇ ಮುಖ್ಯ. ಪ್ರತಿನಿತ್ಯ ಒಬ್ಬ ಆರೋಗ್ಯವಂತ ವ್ಯಕ್ತಿ ವಿಶ್ರಮಿಸಲು 6 ರಿಂದ 8 ಘಂಟೆಯವರೆಗೆ ತನ್ನ ಮಲಗುವ ಕೋಣೆ ಬಳಸುತ್ತಾನೆ. ಹೀಗೆ ವಿಶ್ರಾಂತಿ ಪಡೆಯುಲು ಉಪಯೋಗಿಸುವ ಮಲಗುವ ಕೋಣೆ ಅಥವಾ ಬೆಡ್‌ರೂಮ್‌ಗೆ ಅನ್ವಯಿಸುವ ಕೆಲವು ಅಂಶಗಳಿವೆ. ಸರಳವಾಸ್ತುವಿನಲ್ಲಿ ಮಲಗುವ ಕೋಣೆಗೆ ಹೊಂದಿಕೊಂಡು ಟಾಯ್ಲೆಟ್ ಅಥವಾ ಬಾತ್‌ರೂಮ್ ಇರಬಾರದು. ಹೊಂದಿಕೊಂಡು ಇದ್ದರೂ ಅದು ಸ್ವಲ್ಪ ಮಟ್ಟಿಗೆ ಮಲಗುವ ಕೋಣೆ ಹಾಗೂ ಟಾಯ್ಲೆಟ್ ನಡುವೆ ವಿಭಜನೆಯಾಗಿರಬೇಕು ಅಂದರೆ ಅಲ್ಲಿ ಡ್ರೆಸ್ಸಿಂಗ್ ರೂಮ್ ಇರಬೇಕು. ಇದರಿಂದ ಲಾಭಗಳು ತುಂಬಾ ಇವೆ. ಮುಖ್ಯವಾಗಿ ಉತ್ತಮ ಆರೋಗ್ಯ ಪಡೆಯಬಹುದು. ವಿಶ್ರಾಂತಿ ಪಡೆಯುವಾಗ ಪೂರ್ಣ ಪ್ರಮಾಣದ ಧನಾತ್ಮಕ ಶಕ್ತಿಯನ್ನು ಪಡೆಯುವ ಮೂಲಕ ಸಪ್ತಚಕ್ರಗಳನ್ನು ಚೈತನ್ಯಗೊಳಿಸಿ ದಿನವಿಡೀ ಆಯಾಸರಹಿತ ಕಾರ್ಯಮಾಡಲು ಸಹಾಯಕವಾಗುವುದು (ಚಿತ್ರದಲ್ಲಿ ಋಣಾತ್ಮಕ ಶಕ್ತಿಯ ಆವರಿಸುವಿಕೆಯನ್ನು ಕಾಣಬಹುದು). ಇತ್ತೀಚಿನ ದಿನಗಳಲ್ಲಿ ಮಾಸ್ಟರ್ ಬೆಡ್‌ರೂಮ್ ಕಾನ್ಸೆಪ್ಟ್ ಜನಪ್ರಿಯವಾಗುತ್ತಿದೆ. ಇದು ಕೂಡದು. ಇದರಿಂದ ಸಪ್ತಚಕ್ರಗಳ ಚೈತನ್ಯಕ್ಕೆ ಅಡ್ಡಿ ಉಂಟಾಗಿ ನಾವು ಮಾಡುವ ಕಾರ್ಯಗಳಲ್ಲಿ ಉತ್ಸಾಹ ಕಡಿಮೆಯಾಗುವುದು. ಹಾಗಾಗಿ ಸಾಮಾನ್ಯ ಬೆಡ್‌ರೂಮ್ ಉತ್ತಮ. ಜೊತೆಗೆ ಬಾತ್‌ರೂಮ್‌ನಲ್ಲಿ ಕನ್ನಡಿಗಳು ಹೆಚ್ಚಿನ ಪ್ರಮಾಣದಲ್ಲಿ ಅವರಿಸಿರಬಾರದು. ಸರಳವಾಸ್ತುವಿನ ವಿಶೇಷತೆಯೆಂದರೆ ಮನುಷ್ಯನ ಸಪ್ತಚಕ್ರಗಳನ್ನು ಚೈತನ್ಯಗೊಳಿಸಬೇಕಾದರೆ ಯೋಗ, ಸಿದ್ಧಿ ಸಮಾಧಿಯೋಗ, ರೇಖಿ ಮುಂತಾದವುಗಳ ನೆರವು ಬೇಕು. ಆದರೆ ಸರಳವಾಸ್ತುವಿನಲ್ಲಿ ನಿಸರ್ಗದತ್ತವಾಗಿ ಸಪ್ತಚಕ್ರಗಳನ್ನು ಚೈತನ್ಯಗೊಳಿಸಲು ಸಾಧ್ಯವಿದೆ.
ಸರಳವಾಸ್ತುವಿನ ಪ್ರಕಾರ ನಿಮ್ಮ ಜನ್ಮ ದಿನಾಂಕದ ಅನುಗುಣವಾಗಿ ಒಳ್ಳೆಯ ದಿಕ್ಕು ಹಾಗೂ ಮನೆಯು ಯಾವ ಯಾವ ವಾಸ್ತು ಆಯಾಮಗಳನ್ನು ಹೊಂದಿದ್ದರೆ, ಆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಯಿಂದ ಇರಲು ಸಾಧ್ಯವಿದೆ ಎಂಬುದನ್ನು ನೀವೂ ತಿಳಿದುಕೊಳ್ಳಬಹುದು. ನಿಮ್ಮ ಮನೆಗೆ ಸರಳವಾಸ್ತು ತಜ್ಞರು ಭೇಟಿ ನೀಡಿ ಮನೆಯ ನಕ್ಷೆಯನ್ನು ತೆಗೆದುಕೊಂಡು ನಿಮ್ಮ ಸಮಸ್ಯೆಗಳನ್ನು ಅವುಗಳಿಂದ ಹೊರ ಬರಲು ಸೂಕ್ತ ಪರಿಹಾರಗಳನ್ನು ಸೂಚಿಸುತ್ತಾರೆ.

-  ಡಾ. ಚಂದ್ರಶೇಖರ ಗುರೂಜಿ
guruji@saralvaastu.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.