ಖುಷಿ

ಮದುವೆ... ಮಧುವೇ?

ಮದುವೆ... ಮಧುವೇ?
Published On :

ಮದುವೆ ಲಾಟರಿ ಅಲ್ಲ, ಯಾಕೆಂದ್ರೆ ಲಾಟರಿಯಲ್ಲಿ ಅಪರೂಪಕ್ಕಾದರೂ ಗೆಲ್ಲುವ ಅವಕಾಶ ಇರುತ್ತೆ.
-    ಮದುವೆಯಾದವರು, ಆಗದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎನ್ನುವುದು ಸುಳ್ಳು; ಅವರಿಗೆ ಹಾಗನ್ನಿಸುತ್ತೆ ಅಷ್ಟೇ.
-    ಮದುವೆಯೆಂಬುದು ಇಲಿ ಬೋನು ಇದ್ಹಂಗೆ. ಒಳಗೆ ಹೋಗುವುದು ಸುಲಭ, ಹೊರಗೆ ಬರುವುದು ಕಷ್ಟ.
-    ಚಡಪಡಿಸುವ ಹೆಂಡತಿ ಅಡುಗೆಮನೆಯಲ್ಲಿ, ಹರಿದಾಡುವ ಹೇನು ಅಂಗಿಯಲ್ಲಿ ಇದ್ದರೆ, ಗಂಡ ಎಂಬ ಪ್ರಾಣಿಗೆ ನಿದ್ದೆ ಎಲ್ಲಿ ಬರುತ್ತೆ?
-    ಅವನ ಹೆಂಡ್ತಿ ಪಾಕಪ್ರವೀಣೆ. ಮುಂಬಾಗಿಲಿನಲ್ಲಿ ಕಿವಿಗೆ ಪೋನ್ ಆನಿಸಿಕೊಂಡು ನಿಂತಿರುವಾಗಲೇ 'ಅಡುಗೆಮನೆಯಲ್ಲಿ ಏನೋ ಸೀಯ್ತಾ ಇದೆ, ಆಫ್ ಮಾಡಿ' ಅಂತ ಗಂಡನಿಗೆ ಸೂಚನೆ ಕೊಡ್ತಾಳೆ.
-    ಮದುವೆಯ ಅನುಕೂಲಗಳು: ನಿಮ್ಮ ಮನೆಯಲ್ಲಿ ಕಾಲು ಚಾಚಿ, ಆರಾಮವಾಗಿ ಕೂತ್ಕೊಂಡು, ಉಳಿದಿರುವುದನ್ನು ಬಿಸಿಮಾಡಿಕೊಂಡು ಬಾಯಿಗೆ ಎಸೆದುಕೊಳ್ಳುತ್ತಾ ಸೂರ್ಯ ಮುಳುಗಿದ ಕ್ಷಣದಿಂದ, ನಾಲ್ಕು ಗಂಟೆ ನಿಶ್ಚಿಂತೆಯಿಂದ ನಿಮ್ಮ ಹೆಂಡತಿಗೆ ಇಷ್ಟವಾದ ಟಿವಿ ಕಾರ್ಯಕ್ರಮಗಳನ್ನು (ಮೂಗು ತೂರಿಸದೆ) ನೋಡಬಹುದು.
-    ಮದುವೆಯಾದವರು ಒಳ್ಳೆಯ ಮಾರಾಟಗಾರರು. ಯಾಕೆಂದ್ರೆ ಅವರಿಗೆ ಆರ್ಡರ್‌ಗಳನ್ನು ತೆಗೆದುಕೊಂಡು ಅಭ್ಯಾಸ ಇರುತ್ತೆ.
-    ಶಾಲೆಯಲ್ಲಿ ಕಲಿಸಲಾಗದ್ದನ್ನು, ಕಲಿಸುವ ವ್ಯವಸ್ಥೆಯೇ ಹೆಂಡತಿ ಎಂಬ ಸ್ಕೂಲು.
-    ಅವನಿಗೆ ಮದುವೆಯಾಗಿ ಐದು ವರುಷವಾದರೂ, ಅವನು ಯಾರಿಗೂ ಹೇಳಲಿಲ್ಲ. ತನ್ನ ತೊಂದರೆ- ತಾಪತ್ರಯಗಳನ್ನು ಹಂಚಿಕೊಳ್ಳಲು ಅವನಿಗೆ ಇಷ್ಟವಿಲ್ಲ.
-    ಅವರದು ಕೊಟ್ಟು ತೆಗೆದುಕೊಳ್ಳುವ ಅಪರೂಪ ದಾಂಪತ್ಯ. ಅವನು ಕೊಡುತ್ತಾನೆ, ಅವಳು ತೆಗೆದುಕೊಳ್ಳುತ್ತಾಳೆ.



- ಸಂಪಟೂರು ವಿಶ್ವನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.