ಬೆಡ್ ಜಾಮ್

ಸಿಕ್ಕ ಸಿಕ್ಕ ಆಹಾರಗಳನ್ನು ಮೇದು, ಸಂಗಾತಿಯೊಂದಿಗೆ ರಾತ್ರಿ ಮಲಗಿದರೆ ಇನ್ನೇನೋ 'ರಿಸಲ್ಟ್' ಬಂದೀತು. ಫುಡ್ಡಿಗೂ ಬೆಡ್ಡಿಗೂ ಬಹಳ ಲಿಂಕಿದೆ ಎಂಬ ಸತ್ಯ ಜೋಡಿಗಳಿಗೆ ಮುಂಚಿತವಾಗಿಯೇ ಗೊತ್ತಿರಬೇಕು. ಇಲ್ಲದಿದ್ದರೆ ಸುಂದರ ರಾತ್ರಿ ಅರ್ಧಕ್ಕೆ ಕೈಕೊಡುವ ಸಾಧ್ಯತೆ ಇರುತ್ತೆ. ರಾತ್ರಿ ಏನೇನೋ ತಿಂದುಬಿಟ್ಟರೆ, ನಿಮ್ಮ ಸಂಗಾತಿಗೆ ಅತೃಪ್ತಿ ಪಡಿಸಿದ್ದೀರಿ ಅಂತಲೇ ಲೆಕ್ಕ. ಹಾಗಾದರೆ, ಸೆಕ್ಸಿಗೂ ಮುನ್ನ ಏನೇನು ತಿನ್ನಬಾರದು?
ಚೂಯಿಂಗ್ ಗಮ್
ಬಬಲ್ ಗಮ್ ತಿಂದರೆ ಬಾಯಿಯ ದುರ್ನಾತ ದೂರವಾಗುತ್ತದೆ ಎಂಬುದು ಶುದ್ಧ ಸುಳ್ಳು. ಸ್ವಲ್ಪ ಕಾಲದ ಬಳಿಕ ಅದಕ್ಕಿಂತಲೂ ದುಪ್ಪಟ್ಟು ದುರ್ನಾತವನ್ನು ಬಾಯಿ ಹೊರಹಾಕುತ್ತದೆ. ಆಗ ಲಿಪ್‌ಕಿಸ್ ಮಾಡುವಾಗ ಸಂಗಾತಿಗೆ ವಿಪರೀತ ಕಿರಿಕಿರಿಯಾಗುತ್ತದೆ. ಅಲ್ಲದೆ, ಚೀವ್ ಮಾಡಿದ ಬಳಿಕ ಉಸಿರು ವೇಗ ಪಡೆದುಕೊಳ್ಳುವುದರಿಂದ ನಿಮ್ಮ ಸರಸದಾಟಕ್ಕೆ ಅರ್ಧಕ್ಕೆ ಸುಸ್ತು ಆವರಿಸಿಕೊಳ್ಳಲೂಬಹುದು.
ಮಾಂಸಾಹಾರ
ಅಯ್ಯೋ ನಾನ್‌ವೆಜ್ ಸಹವಾಸಕ್ಕೆ ಹೋಗ್ಲೇಬೇಡಿ. ಏನಿದ್ದರೂ ಹಗಲು ತಿಂದು ಮುಗಿಸಿ. ರಾತ್ರಿಗೇನೂ ಇಟ್ಟುಕೊಳ್ಳಬೇಡಿ. ಮಾಂಸ ಬೇಗ ಜೀರ್ಣವಾಗದ ಕಾರಣ ನಿಮ್ಮಲ್ಲಿ ಶಕ್ತಿಯ ಉತ್ಪಾದನೆ ಬಹಳ ಕಡಿಮೆಯಾಗುತ್ತದೆ. ರಾತ್ರಿ ವೇಳೆಗೆ ಅದು ಕಂಫರ್ಟೆಬಲ್ ಅಂತಲೂ ಅನ್ನಿಸುವುದಿಲ್ಲ.
ಆಲ್ಕೋಹಾಲ್
ಯಾವುದೇ ಕಾರಣಕ್ಕೂ ಮುಟ್ಟಬೇಡಿ. ಮದ್ಯ ಸೇವನೆಗೂ ಸೆಕ್ಸಿಗೂ ಆಗಿಬರುವುದೇ ಇಲ್ಲ. ಆ ಅಮಲು ನಿಮ್ಮನ್ನ ಶೇ.100ರ ಪ್ರಮಾಣದಲ್ಲಿ ರತಿಕ್ರೀಡೆಯಲ್ಲಿ ತೊಡಗಿಸಿಕೊಳ್ಳಲೂ ಬಿಡುವುದಿಲ್ಲ.
ಡೈರಿ ಉತ್ಪನ್ನ
ಲೈಟಾಗಿ 1 ಕಪ್ ಬಿಸಿ ಹಾಲನ್ನಷ್ಟೇ ರಾತ್ರಿ ಸೇವಿಸಿ. ಮಜ್ಜಿಗೆ, ಮೊಸರು, ಬೆಣ್ಣೆಗಳ ಸಹವಾಸಕ್ಕೆ ಹೆಚ್ಚು ಹೋಗದಿರಿ. ಇದರಿಂದ ಬೇಗ ನಿದ್ರೆ ಬರುವುದಲ್ಲದೆ, ಹೊಟ್ಟೆ ಭಾರ ಅಂತಲೂ ಫೀಲಾಗಬಹುದು.
ಈರುಳ್ಳಿ- ಬೆಳ್ಳುಳ್ಳಿ
ಇವೆರಡರ ವಾಸನೆಯೂ ಕೆಲವರಿಗೆ ಆಗಿಬರುವುದಿಲ್ಲ. ಸಂಗಾತಿಗೆ ಕಿರಿಕಿರಿ ಆದರೆ ಕಷ್ಟ. ರಾತ್ರಿ ಹೊತ್ತು ಇವುಗಳಿಗೆ ಕಡ್ಡಾಯವಾಗಿ ನಿಷೇಧ ಹೇರಿ.ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


