ರಾಜ್ಯ

ಮೈಸೂರಿನಲ್ಲಿ ದುರಂತ: ಅಣ್ಣನನ್ನು ಮನೆಗೆ ಕರೆತರಲು ಹೋಗಿದ್ದ ಪುಟ್ಟ ಬಾಲಕಿ ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಸಾವು!

ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣವೆಂದು ಮಗುವಿನ ಕುಟುಂಬ ಆರೋಪಿಸಿದ್ದು, ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದೆ.

ಮೈಸೂರಿನಲ್ಲಿ ದುರಂತ: ಅಣ್ಣನನ್ನು ಮನೆಗೆ ಕರೆತರಲು ಹೋಗಿದ್ದ ಪುಟ್ಟ ಬಾಲಕಿ ಮೇಲೆ ಹರಿದ ಶಾಲಾ ಬಸ್; ಸ್ಥಳದಲ್ಲೇ ಸಾವು!
ಮೃತ ಮಗು
Published On :

ಮೈಸೂರು: ಜಿಲ್ಲೆಯ ಶಾಸ್ತ್ರಿ ಪಬ್ಲಿಕ್ ಶಾಲೆಯ ವಾಹನವೊಂದು ಹರಿದು ಲತೀಕ್ಷಾ ಎಂಬ 19 ತಿಂಗಳ ಬಾಲಕಿ ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ನಾಲ್ಕು ವರ್ಷದ ಬಾಲಕನನ್ನು ಶಾಲೆಯಿಂದ ಮನೆಗೆ ಬಿಡಲು ಬಂದಿದ್ದ ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ಗೆ ಸೇರಿದ ವಾಹನ ಹರಿದ ಪರಿಣಾಮ ಈ ಘಟನೆ ನಡೆದಿದೆ. ಬಾಲಕನ ತಾಯಿ ಬಸ್‌ನಿಂದ ಮಗುವನ್ನು ಕೆಳಗಿಳಿಸುತ್ತಿದ್ದಾಗ, ಶಾಲಾ ವಾಹನ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಿದೆ. ಆಗ ಹತ್ತಿರದಲ್ಲೇ ನಿಂತಿದ್ದ ಲತೀಕ್ಷಾ ಎಂಬ ಬಾಲಕಿಗೆ ಡಿಕ್ಕಿ ಹೊಡೆದಿದೆ.

ವಾಹನದ ಚಕ್ರವು ಮಗುವಿನ ಮೇಲೆ ಹರಿದ ಪರಿಣಾಮ, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 42 ವರ್ಷದ ಸಿದ್ದರಾಜು ಎಂದು ಗುರುತಿಸಲಾದ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣವೆಂದು ಮಗುವಿನ ಕುಟುಂಬ ಆರೋಪಿಸಿದ್ದು, ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.