ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಾಕಿ; ಗುತ್ತಿಗೆದಾರರಿಂದ ನಿತ್ಯ ಕಿರುಕುಳ: ಪತ್ರ ಬರೆದು ಕೆಆರ್‌ಐಡಿಎಲ್ AEE ನಾಪತ್ತೆ!
ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು ತೀವ್ರವಾಗಿ ನೊಂದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

ಗದಗ: ರಾಜ್ಯ ಸರ್ಕಾರದ ಅನುದಾನ ಬಾರದಕ್ಕೆ ಪತ್ರ ಬರೆದು KRIDL ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಧಿಕಾರಿ ನಾಪತ್ತೆಯಾಗಿದ್ದಾರೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ಉಂಟಾದ ಆರ್ಥಿಕ ಸಂಕಷ್ಟವೇ ಅಧಿಕಾರಿಯ ನಾಪತ್ತೆಗೆ ಕಾರಣ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ.
ಕೆಆರ್‌ಐಡಿಎಲ್‌ನ ಇಇ ಅವರಿಗೆ ಪತ್ರ ಬರೆದು ಫರ್ವೀಜ್ ನಾಪತ್ತೆಯಾಗಿದ್ದಾರೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು ತೀವ್ರವಾಗಿ ನೊಂದಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅನುದಾನ ಬಿಡುಗಡೆಯಾಗದ ಹಿನ್ನೆಲೆ ಮನೆಯ ಮುಂದೆ ಉಪ-ಗುತ್ತಿಗೆದಾರರು ಬಂದು ಗಲಾಟೆ ಮಾಡುತ್ತಿದ್ದರು. ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಕಾರಣ ಪ್ರತಿದಿನ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದು ಪತ್ರದಲ್ಲಿ ಫರ್ವೀಜ್ ಉಲ್ಲೇಖಿಸಿದ್ದಾರೆ.
ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಾನು ಸೋತಿದ್ದೇನೆ. ಸದರಿ ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ. ಬೇರೆ ಎಇಇಯನ್ನ ನಿಯೋಜಿಸಿ. ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
2026ರ ಸೆಪ್ಟೆಂಬರ್ 12ರಂದು ಇಇ ಅವರಿಗೆ ಪತ್ರ ಬರೆದಿದ್ದ ಫರ್ವೀಜ್, ಮರುದಿನ ಅಂದರೆ ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ತೆರಳಿದ್ದರು. ಬಳಿಕ ಸೆಪ್ಟೆಂಬರ್ 16ರಂದು ಅವರು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ಪತ್ನಿ, ಓರ್ವ ಮಗಳು, ತಂದೆ-ತಾಯಿ ಹಾಗೂ ಸಹೋದರರನ್ನ ಬಿಟ್ಟು ಫರ್ವೀಜ್ ನಾಪತ್ತೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



