'ಯಾರೂ ಕರೆದು ಅವಕಾಶ ನೀಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು': ಪಿಜಿಆರ್ ಸಿಂಧಿಯಾ ಕುರಿತು ಸಿದ್ದರಾಮಯ್ಯ ಹೀಗೆ ಹೇಳಿದ್ದೇಕೆ?
ಯಾರೂ ಅವಕಾಶ ನೀಡುವುದಿಲ್ಲ. ಅವಕಾಶವನ್ನು ನಾವೇ ಪಡೆದುಕೊಳ್ಳಬೇಕು! ಅದಕ್ಕೆ ಅರ್ಹತೆ ಗಳಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ ಸಿಂಧಿಯಾ ಅವರು ಮುಖ್ಯಮಂತ್ರಿಯಾಗಲು ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು: ನನಗಿಂತ ಮೊದಲೇ ಪಿ ಜಿ ಆರ್ ಸಿಂಧಿಯಾ ಸಚಿವರಾಗಿದ್ದರು, ಬಳಿಕ ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ಆದರೆ ಸಿಂಧಿಯಾ ಮುಖ್ಯಮಂತ್ರಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಅವರು ಪಿ.ಜಿ.ಆರ್. ಸಿಂಧಿಯಾ ಅವರ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಈ ಮಾತು ಹೇಳುತ್ತಿದ್ದಂತೆ ಸಭಿಕರಲ್ಲಿ ನಗೆ ಮೂಡಿತು.
ಏನು? ಅವರಿಗೆ ಅವಕಾಶ ನೀಡಬೇಕಾ? ಯಾರೂ ಅವಕಾಶ ನೀಡುವುದಿಲ್ಲ. ಅವಕಾಶವನ್ನು ನಾವೇ ಪಡೆದುಕೊಳ್ಳಬೇಕು! ಅದಕ್ಕೆ ಅರ್ಹತೆ ಗಳಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಆದರೆ ಸಿಂಧಿಯಾ ಅವರು ಮುಖ್ಯಮಂತ್ರಿಯಾಗಲು ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಪಿ ಜಿ ಆರ್ ಸಿಂಧಿಯಾ ಅವರ 78ನೇ ಜನ್ಮದಿನ ಹಾಗೂ ಸಾರ್ವಜನಿಕ ಜೀವನದಲ್ಲಿ 45 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಕೆ. ಖಂಡೇಲ್ವಾಲ್ ಅವರು ಬರೆದ ‘ಎ ಲೈಫ್ ಅನ್‌ಕಾಂಪ್ರಮೈಸ್ಡ್: ದಿ ಡಾ. ಪಿ.ಜಿ.ಆರ್. ಸಿಂಧಿಯಾ ಸ್ಟೋರಿ’ ಕೃತಿಯನ್ನು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.
ರಾಮಕೃಷ್ಣ ಹೆಗಡೆ ಮತ್ತು ಹೆಚ್.ಡಿ. ದೇವೇಗೌಡ ಅವರ ಸಚಿವ ಸಂಪುಟಗಳಲ್ಲಿ ಪಿ ಜಿ ಆರ್ ಸಿಂಧಿಯಾ ಅವರೊಂದಿಗೆ ತಾವು ಹಂಚಿಕೊಂಡ ರಾಜಕೀಯ ಪಯಣವನ್ನು ಸಿದ್ದರಾಮಯ್ಯ ಸ್ಮರಿಸಿದರು. ಯುವಜನ, ಗೃಹ, ಸಾರಿಗೆ, ಸಮಾಜ ಕಲ್ಯಾಣ ಹಾಗೂ ಹಣಕಾಸು ಖಾತೆಗಳನ್ನು ಸಿಂಧಿಯಾ ಅವರು “ಶಿಸ್ತು ಮತ್ತು ದಕ್ಷತೆಯಿಂದ” ನಿರ್ವಹಿಸಿದ್ದರು ಎಂದು ಅವರು ನೆನಪಿಸಿಕೊಂಡರು.
‘ಅನ್‌ಕಾಂಪ್ರಮೈಸ್ಡ್’ ಎಂಬ ಕೃತಿಯ ಶೀರ್ಷಿಕೆ ಸಿಂಧಿಯಾ ಅವರ ಕಾರ್ಯಶೈಲಿಗೆ ಸೂಕ್ತವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅವರು ಹಣಕಾಸು ಸಚಿವರಾದಾಗ, ನೀವು ಮಾಡಿರಬಹುದಾದ ಯಾವುದೇ ತಪ್ಪುಗಳನ್ನು ಹುಡುಕುವಂತೆ ನನಗೆ ಸೂಚನೆ ನೀಡಲಾಗಿದೆ ಎಂದು ನನಗೆ ಹೇಳಿದ್ದರು ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು. ವಿವಿಧ ಮುಖ್ಯಮಂತ್ರಿಗಳ ಅಡಿಯಲ್ಲಿ ತಾವು ದೀರ್ಘಕಾಲ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭವನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು.
ಸಿಂಧಿಯಾ ಅವರ ಸಂಘಟನಾ ಸಾಮರ್ಥ್ಯವನ್ನು ಶ್ಲಾಘಿಸಿದ ಸಿದ್ದರಾಮಯ್ಯ, ವಿಧಾನ ಪರಿಷತ್, ರಾಜ್ಯಸಭೆ ಮತ್ತು ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಅವರು ಬಹಳ ವೇಗವಾಗಿ ಕೆಲಸ ಮಾಡುತ್ತಿದ್ದರು. ಯಾವುದೇ ದೂರು ನೀಡದೆ ಜನರನ್ನು ಹಾಗೂ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಸಿಂಧಿಯಾ ಅವರ ಸಾರ್ವಜನಿಕ ಸೇವೆಗೆ ಬೆಂಬಲವಾಗಿ ಕುಟುಂಬವನ್ನು ಒಗ್ಗೂಡಿಸಿಕೊಂಡು ಬಂದ ಅವರ ಪತ್ನಿ ಗೀತಾ ಅವರ ಕೊಡುಗೆಯನ್ನೂ ಸಿದ್ದರಾಮಯ್ಯ ಇದೇ ವೇಳೆ ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



