ವಂದೇ ಮಾತರಂ ಜಟಾಪಟಿ: ಎರಡೇ ಚರಣ ಗಾಯನಕ್ಕೆ ಶಾಸಕ ಚನ್ನಬಸಪ್ಪ ಆಕ್ಷೇಪ; ಸಿಎಂ ಶಿವಕುಮಾರ್ ತಿರುಗೇಟು!
ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರು, ರೈತರು, ತಜ್ಞರ ಜೊತೆ ನೇರ ಸಂವಾದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಎರಡೇ ಚರಣ ಹಾಡಿದ್ದಕ್ಕೆ ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ: ರಾಜ್ಯದಲ್ಲಿ ಸಿಎಂ ಡಿಕೆ ಶಿವಕುಮಾರ್ ಹಾಜರಿದ್ದ ವೇದಿಕೆಯಲ್ಲೇ ವಂದೇ ಮಾತರಂ ಜಟಾಪಟಿ ಮುಂದುವರೆದಿದೆ.
ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸಾರ್ವಜನಿಕರು, ರೈತರು, ತಜ್ಞರ ಜೊತೆ ನೇರ ಸಂವಾದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಎರಡೇ ಚರಣ ಹಾಡಿದ್ದಕ್ಕೆ ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಕ್ ಬಳಿಗೆ ಬಂದ ಅವರು, ವಂದೇ ಮಾತರಂ ಗೀತೆ ಪೂರ್ಣ ಹಾಡದೇ ನಮ್ಮ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇಂತಹ ಅಪಮಾನ ಮುಂದುವರೆದರೆ ವೇದಿಕೆಯಿಂದ ನಿರ್ಗಮಿಸುವೆ ಎಂದು ಹೇಳಿದ್ದಾರೆ. ಈ ವೇಳೆ ನೆರೆದಿದ್ದ ಜನರಿಂದ ಭಾರಿ ವಿರೋಧ ವ್ಯಕ್ತವಾಗಿದ್ದು, ವೇದಿಕೆ ಬಳಿ ಕೆಲಕಾಲ ಗೊಂದಲ ಸೃಷ್ಠಿಯಾಗಿತ್ತು.
ವೇದಿಕೆ ಹತ್ತಿರ ಬಂದ ಕಾಂಗ್ರೆಸ್ ಮುಖಂಡರು `ಡಿ.ಕೆ ಡಿ.ಕೆ’ ಅಂತ ಘೋಷಣೆ ಕೂಗಿದ್ದಾರೆ. ಬಳಿಕ ಸಿಎಂ ಮಾತಾಡಿ, ಹಿಂದಿನಿಂದಲೂ ನಾವು ಎರಡೇ ಪ್ಯಾರ ಹಾಡಿಕೊಂಡು ಬಂದಿದ್ದೇವೆ. ಚನ್ನಬಸಪ್ಪ ಯಾಕೇ ನನ್ನ ಕೆಣಕ್ತಾ ಇದ್ದಾರೋ ಗೊತ್ತಾಗ್ತ ಇಲ್ಲ. ನಾನು ಇಲ್ಲಿ ಜನರ ಬದುಕಿನ ಮೇಲೆ ರಾಜಕಾರಣ ಮಾಡಲು ಬಂದಿರುವೆ. ಅವರ ರೀತಿ ಭಾವನೆಗಳ ಮೇಲೆ ಅಲ್ಲ. ನೀವೇ ಉತ್ತರ ಕೊಟ್ಟಿದ್ದೀರಿ ಅಂತ ಕಾರ್ಯಕರ್ತರಿಗೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



