ರಾಜ್ಯ

Ballari: ಪತ್ನಿ ಕಾಟಕ್ಕೆ ಬೇಸತ್ತು ಟ್ರಾನ್ಸ್‌ಫಾರ್ಮರ್ ಏರಿದ ಇಸ್ಮಾಯಿಲ್‌!; ಪೊಲೀಸ್ ಠಾಣೆ ಎದುರೇ ಹೈಡ್ರಾಮಾ, Video

ಪತ್ನಿಯೊಂದಿಗೆ ಜಗಳದ ಬೆನ್ನಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ್ದ ವ್ಯಕ್ತಿಯನ್ನು ಬಳಿಕ ಪೊಲೀಸರು ಸಮಾಧಾನ ಪಡಿಸಿ ಕೆಳಗಿಳಿಸಿದ್ದಾರೆ.

Ballari: ಪತ್ನಿ ಕಾಟಕ್ಕೆ ಬೇಸತ್ತು ಟ್ರಾನ್ಸ್‌ಫಾರ್ಮರ್ ಏರಿದ ಇಸ್ಮಾಯಿಲ್‌!; ಪೊಲೀಸ್ ಠಾಣೆ ಎದುರೇ ಹೈಡ್ರಾಮಾ, Video
ಪತ್ನಿ ಕಾಟಕ್ಕೆ ಬೇಸತ್ತು ಟ್ರಾನ್ಸ್‌ಫಾರ್ಮರ್ ಏರಿದ ಭೂಪ..!
Published On :

ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಏರಿ ಆತಂಕ ಹುಟ್ಟಿಸಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ಎದುರಲ್ಲೇ ಈ ಹೈಡ್ರಾಮಾ ನಡೆದಿದ್ದು, ಪೊಲೀಸರೇ ಆಘಾತಕ್ಕೊಳಗಾಗಿದ್ದರು.

ಪತ್ನಿಯೊಂದಿಗೆ ಜಗಳದ ಬೆನ್ನಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿದ್ದ ವ್ಯಕ್ತಿಯನ್ನು ಬಳಿಕ ಪೊಲೀಸರು ಸಮಾಧಾನ ಪಡಿಸಿ ಕೆಳಗಿಳಿಸಿದ್ದಾರೆ.

ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಪತ್ನಿ ಕಾಟ ಆರೋಪ

ಮೂಲಗಳ ಪ್ರಕಾರ ಮುಂಡರಗಿ ಪ್ರದೇಶದ ನಿವಾಸಿ ಇಸ್ಮಾಯಿಲ್‌ ಎಂಬಾತ ಪತ್ನಿಯೊಂದಿಗೆ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಗೆ ಬಂದಿದ್ದ ಎನ್ನಲಾಗಿದೆ.

ಈ ವೇಳೆ ಪತ್ನಿಯೊಂದಿಗೆ ಇಸ್ಮಾ.ಯಿಲ್ ಜಗಳ ಮಾಡಿಕೊಂಡಿದ್ದು, ಪತ್ನಿಯೊಂದಿಗೆ ಉಂಟಾದ ವಿವಾದದಿಂದ ಬೇಸರಗೊಂಡ ಇಸ್ಮಾಯಿಲ್‌ ಠಾಣೆ ಎದುರಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿ ಆತಂಕ ಸೃಷ್ಟಿಸಿದ್ದ.

ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಇಸ್ಮಾಯಿಲ್‌ ಏಕಾಏಕಿ ಠಾಣೆಯಿಂದ ಓಡಿ ಹೋಗಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಏರಿದ್ದಾನೆ. ಇದರಿಂದ ಪೊಲೀಸರು ಹಾಗೂ ಸ್ಥಳೀಯರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಬಳಿಕ ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಮನವೊಲಿಸಲು ಹರಸಾಹಸಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.