ಬೆಂಗಳೂರು: ಫಾರ್ಮ್ ಹೌಸ್ ಖಾಲಿ ಮಾಡುವಂತೆ ಚಿತ್ರ ನಿರ್ಮಾಪಕರಿಗೆ ಬೆದರಿಕೆ; ವಿದ್ಯುತ್, ನೀರು ಕಡಿತಗೊಳಿಸಿದ ಗ್ಯಾಂಗ್!
ಅಧಿಕಾರಿಗಳು ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಗೆ ಎರಡೂ ಕಡೆಯವರನ್ನು ಕರೆದು ಅವರ ವಾದ ಕೇಳಿದ್ದಾರೆ. ಆದರೆ ಅದರಿಂದ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಹೆನ್ರಿ ಹೇಳಿದರು. ಬದಲಿಗೆ ಪ್ರತೀಕಾರ ತೀರಿಸಿಕೊಂಡರು

ಬೆಂಗಳೂರು: ಚಲನಚಿತ್ರ ನಿರ್ಮಾಪಕ ಹೆನ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗ್ರಾಮೀಣ ಪ್ರದೇಶದಲ್ಲಿ ಜಮೀನನ್ನು ಗುತ್ತಿಗೆಗೆ ಪಡೆದು ಕುರಿ, ಮೇಕೆ, ಹಂದಿ ಮತ್ತು ಮೀನು ಸಾಕಣೆ ಮಾಡುತ್ತಿದ್ದ ಫಾರ್ಮ್‌ಹೌಸ್ (ಹೋಮ್‌ಸ್ಟೆಡ್) ಗೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ
ದೊಡ್ಡಬಳ್ಳಾಪುರದ ಗ್ರಾಮೀಣ ಭಾಗದಲ್ಲಿ ಹೆನ್ರಿ ಕುರಿ, ಮೇಕೆ, ದನ, ಹಂದಿ ಮತ್ತು ಮೀನುಗಳನ್ನು ಸಾಕಲು ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು. ಆದರೆ ಭೂಮಾಲೀಕರ ಪರವಾದ ಜನರ ಗುಂಪೊಂದು ಜಮೀನಿಗೆ ಇಳಿದು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ಸೂಚನೆ ಇಲ್ಲದೆ ಇಡೀ ಜಮೀನಿನ ಜಾನುವಾರು ಮತ್ತು ಮೀನುಗಳನ್ನು ಕಿತ್ತುಹಾಕಿದ್ದಾರೆ.
ಬಾಡಿಗೆಗಾಗಿ ಏಳು ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಪತ್ರವನ್ನು ಸಹ ಅವರು ತೋರಿಸಿದ್ದಾರೆ. ಆದರೆ ಅವರು ಕೇರ್ ಮಾಡಲಿಲ್ಲ ಎಂದು ಹೇಳಿದರು. ಅದಾದ ನಂತರ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಅಧಿಕಾರಿಗಳು ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಗೆ ಎರಡೂ ಕಡೆಯವರನ್ನು ಕರೆದು ಅವರ ವಾದ ಕೇಳಿದ್ದಾರೆ. ಆದರೆ ಅದರಿಂದ ಯಾವುದೇ ಪರಿಹಾರ ಸಿಗಲಿಲ್ಲ ಎಂದು ಹೆನ್ರಿ ಹೇಳಿದರು. ಬದಲಿಗೆ ಪ್ರತೀಕಾರ ತೀರಿಸಿಕೊಂಡರು.
ಸುತ್ತಿಗೆ ಜೊತೆ ಬಂದಿದ್ದ ಆ ವ್ಯಕ್ತಿಗಳು ಅವರ ವಿದ್ಯುತ್ ತಂತಿಗಳನ್ನು ಕಟ್ ಮಾಡಿ ನೀರು ಸರಬರಾಜು ಸ್ಥಗಿತಗೊಳಿಸಿದರು. ಇಡೀ ಕುಟುಂಬ ಕತ್ತಲೆಯಲ್ಲಿ ಮುಳುಗಿಸಿದರು. ಮತ್ತೆ ಬೆದರಿಕೆ ಹಾಕಿದ್ದಾರೆ. ಹೆನ್ರಿ ಒಂದು ಕಾಲದಲ್ಲಿ ಸಾಕ್ಷ್ಯಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಚಲನಚಿತ್ರ ನಿರ್ಮಾಪಕರಾಗಿದ್ದರು.
ಮೊದಲು ರಾಷ್ಟ್ರೀಯ ಪತ್ರಿಕೆಯಯಲ್ಲಿ ಅಲ್ಪಾವಧಿಗೆ ಕೆಲಸ ಮಾಡಿದರು. ಅವರು ಅದರಿಂದ ಹೊರಬಂದು ಬೇರೆ ಜೀವನ ನಡೆಸಲು ಎಲ್ಲವನ್ನೂ ತ್ಯಜಿಸಿದರು, ಹೆನ್ರಿಯ ಪತ್ನಿ, ಅವರ ನಾಲ್ಕು ವರ್ಷದ ಮಗಳು ಮತ್ತು ವೃದ್ಧ ಚಿಕ್ಕಮ್ಮ ಭಯಭೀತರಾಗಿ ಬದುಕುತ್ತಿದ್ದಾರೆ.
ನನ್ನ ಕೆರೆಯಲ್ಲಿ ಸುಮಾರು 500 ಮೀನುಗಳಿವೆ, ನಾನು ಅವುಗಳನ್ನು ತೆಗೆದುಹಾಕಿದರೆ, ಅದು ದೊಡ್ಡ ನಷ್ಟ ಉಂಟಾಗುತ್ತದೆ. ಅವು ಸಾಯುತ್ತವೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. "ನಾನು ಪ್ರಾಣಿಗಳಿಗೆ ನೀರು ನೀಡುವುದನ್ನು ಬಿಟ್ಟರೆ, ಅವು ಕೆಲವೇ ದಿನಗಳಲ್ಲಿ ಸಾಯುತ್ತವೆ. ನನಗೆ 50-60 ಲಕ್ಷ ರೂ. ನಷ್ಟವಾಗಬಹುದು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ವಲಯ ಐಜಿಪಿ ಎಸ್ ಗಿರೀಶ್ ಅವರನ್ನು ಸಂಪರ್ಕಿಸಿದಾ, ನಾವು ಇದುವರೆಗೆ ವೈಯಕ್ತಿಕವಾಗಿ ದೂರನ್ನು ಸ್ವೀಕರಿಸಿಲ್ಲ ಅಥವಾ ಹೆನ್ರಿಯನ್ನು ಭೇಟಿ ಮಾಡಿಲ್ಲ ಎಂದು ಒಪ್ಪಿಕೊಂಡರು. ನಾನು ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸರೊಂದಿಗೆ ತಕ್ಷಣ ಮಾತನಾಡುತ್ತೇನೆ ಮತ್ತು ಅದನ್ನು ಬಗೆಹರಿಸುತ್ತೇನೆ ಎಂದು ಅವರು ಹೇಳಿದರು. ಐಜಿಪಿಯವರ ಮಧ್ಯಪ್ರವೇಶದ ನಂತರ, ಸ್ಥಳೀಯ ಪೊಲೀಸ್ ತಂಡವೊಂದು ಅವರ ಮನೆಗೆ ಆಗಮಿಸಿ ಹಾನಿ ಆಗಿರುವುದರ ಬಗ್ಗೆ ಖಚಿತಪಡಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



