'ದುಡ್ಡು-ಬ್ಲಡ್ಡು ಸರ್ಕ್ಯುಲೇಟ್ ಆಗ್ತಿರಬೇಕು, ಅದರಿಂದ ಹಣಕಾಸು ವ್ಯವಸ್ಥೆ, ನಮ್ಮ ಆರೋಗ್ಯ ಸದೃಢವಾಗಿರುತ್ತದೆ': CM ಶಿವಕುಮಾರ್; Video
ನಾನು ಚಿಕ್ಕವನಿರುವಾಗ ನನ್ನ ಸೋದರಮಾವ ಹೇಳುತ್ತಿದ್ದರು, ನೂರು ಚಪ್ಪಲಿಯೇಟು ಪಟ ಪಟ ಅಂತ ಹೊಡೆದರೆ ತಿನ್ನಬಹುದು, ದುಡ್ಡು ಏಟು ತಿನ್ನಲು ಸಾಧ್ಯವಿಲ್ಲ. ಅಂದರೆ ಉದ್ಯಮ, ವ್ಯಾಪಾರ ಹಾಗೂ ಜೀವನದಲ್ಲಿ ಆರ್ಥಿಕ ಸವಾಲು, ಸಂಕಷ್ಟ, ಒತ್ತಡವನ್ನು ನಿಭಾಯಿಸುವುದು ಕಷ್ಟ ಎಂದು ಅನುಭವದ ಮಾತು ಹೇಳುತ್ತಿದ್ದರು ಎಂದರು.

ಬೆಂಗಳೂರು: ಇಂದು ಉದ್ಯಮ ನಡೆಸುವುದು ಅಷ್ಟು ಸುಲಭವಲ್ಲ, ಸಾಲ ತೆಗೆದುಕೊಳ್ಳುವಾಗ ಬ್ಯಾಂಕುಗಳು ಸಾಕಷ್ಟು ದಾಖಲೆಗಳನ್ನು ಕೇಳುತ್ತವೆ, ಸಾಕಷ್ಟು ಒತ್ತಡವಿರುತ್ತದೆ, ನಾನು ಚಿಕ್ಕವನಿರುವಾಗ ನನ್ನ ಸೋದರಮಾವ ಹೇಳುತ್ತಿದ್ದರು, ನೂರು ಚಪ್ಪಲಿಯೇಟು ಪಟ ಪಟ ಅಂತ ಹೊಡೆದರೆ ತಿನ್ನಬಹುದು, ದುಡ್ಡು ಏಟು ತಿನ್ನಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಅಂದರೆ ಉದ್ಯಮ, ವ್ಯಾಪಾರ ಹಾಗೂ ಜೀವನದಲ್ಲಿ ಆರ್ಥಿಕ ಸವಾಲು, ಸಂಕಷ್ಟ, ಒತ್ತಡವನ್ನು ನಿಭಾಯಿಸುವುದು ಕಷ್ಟ ಎಂದು ಅನುಭವದ ಮಾತು ಹೇಳುತ್ತಿದ್ದರು, ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರಿನಲ್ಲಿ, ಉಬುಂಟು ಕನ್ಸಾರ್ಟಿಯಂ ಆಫ್ ವುಮೆನ್ ಎಂಟರ್‌ಪ್ರೆನರ್ಸ್ ಅಸೋಸಿಯೇಷನ್ಸ್ ಆಯೋಜಿಸಿದ್ದ ‘ಟುಗೆದರ್ ವಿ ಗ್ರೋ’ 5ನೇ ಆವೃತ್ತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮ ನಡೆಸುವುದು, ಉದ್ಯೋಗ ಸೃಷ್ಟಿ ಮಾಡುವುದು, ಉದ್ಯೋಗ ನೀಡುವ ಮಾಲೀಕನಾಗುವುದು ಒತ್ತಡದ, ಸವಾಲಿನ ಕೆಲಸ, ಸರ್ಕಾರ ಎಫ್ ಕೆಸಿಸಿಐ ಜೊತೆ ನಿಲ್ಲುತ್ತದೆ ಎಂದರು.
ರಾಮಾಯಣದಲ್ಲಿ ಸೀತೆಯ ಪಾತ್ರ ಹೆಚ್ಚು ಮಹತ್ವದ್ದು, ಆಕೆಯ ಹೋರಾಟ, ತ್ಯಾಗ, ಪರಿಶುದ್ಧತೆ ನಿಜಕ್ಕೂ ಅದ್ಬುತ, ಭಾರತದಲ್ಲಿ ಮೊದಲು ಹೆಣ್ಣು ದೇವತೆಗೆ ಪೂಜೆ ಮಾಡಿ ನಂತರ ದೇವರನ್ನು ಪೂಜಿಸುತ್ತೇವೆ, ಸಮಾಜದಲ್ಲಿ ಹೆಣ್ಣಿಗೆ ಅಷ್ಟು ಶಕ್ತಿಯಿದೆ, ಪೂಜನೀಯ ಭಾವನೆ ಇದೆ ಎಂದರು.
ದುಡ್ಡು, ಬ್ಲಡ್ಡು ಸರ್ಕ್ಯುಲೇಟ್ ಆಗಬೇಕು
ಸಮಾಜಲ್ಲಿ ಆರ್ಥಿಕತೆ ಬಲವಾಗಲು ಹಣ ಚಲನೆಯಲ್ಲಿರಬೇಕು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಮಹಿಳೆಯರ ಮತ್ತು ಸಮಾಜದ ಎಲ್ಲಾ ವರ್ಗದ ಜನರ ಆರ್ಥಿಕ ಶಕ್ತಿ ಬಲವರ್ಧನೆಗೆ ಸಹಾಯವಾಗಿದೆ ಎಂದರು.
ನಾನು ಬಾಲಗಂಗಾಧರನಾಥ ಸ್ವಾಮೀಜಿಗಳ 50ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಸಾಯಿಬಾಬಾ ಅವರು ನನಗೆ ಹೇಳಿದ್ದರು, ದುಡ್ಡು,ಬ್ಲುಡ್ಡು ಎರಡೂ ಸರ್ಕ್ಯುಲೇಟ್ ಆಗುತ್ತಿರಬೇಕು, ಬ್ಲಡ್ ದೇಹದಲ್ಲಿ ಒಂದು ಕಡೆ ನಿಂತುಬಿಟ್ಟರೆ ಆರೋಗ್ಯ ಸಮಸ್ಯೆಯಾಗುತ್ತದೆ, ದುಡ್ಡು ಒಂದೇ ಕಡೆ ಸಂಗ್ರಹವಾಗಿದ್ದರೆ ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ದಾಳಿಗಳು, ಕುಡಿಕೆ ಕಳ್ಳತನ ಇತ್ಯಾದಿ ಆಗುತ್ತದೆ,ಹಣ ಯಾವತ್ತೂ ಚಲನಶೀಲನವಾಗಿರಬೇಕು, ಹಣಕಾಸು ವ್ಯವಸ್ಥೆ ಸಮಾದಲ್ಲಿ ಸರ್ಕ್ಯುಲೇಟ್ ಆಗುತ್ತಿದ್ದರೆ ದೇಶದ ಆರ್ಥಕ ವ್ಯವಸ್ಥೆ ಸದೃಢವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



