'ಮೂರು ಸಾವಿರ ಮಠನೋ ಆರು ಸಾವಿರ ಮಠನೋ; ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿದ್ರೆ ಮಾತ್ರ ನಿಮಗೆ ಮುಕ್ತಿ': ಸಿಎಂ ಡಿ.ಕೆ ಶಿವಕುಮಾರ್
ಧೀರೋದಾತ್ತವಾಗಿ ಭಾಷಣ ಮಾಡುವ ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ನಮ್ಮ ಧರ್ಮದ ಮರ್ಯಾದೆಯನ್ನು ಮೂರು ಕಾಸಿಗೆ ಮಾರಿದ್ದಾರೆ ಎಂಬ ಭಾವನೆ ಮೂಡಿಸಿದೆ.

ಬೆಂಗಳೂರು: ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿದ ಮಾತುಗಳು ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ವೀರಶೈವ ಲಿಂಗಾಯತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು Veerashaiva Lingayath Official ಪೇಜ್ ಸಿಎಂ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.
ಮೂರು ಸಾವಿರ ಮಠ ಇದ್ಯೋ ಆರು ಸಾವಿರ ಮಠ ಇದ್ಯೋ “ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ, ಆವಾಗಷ್ಟೇ ನಿಮಗೆ ಶಾಂತಿ ನಿಮ್ಮ ಅಭಿವೃದ್ಧಿ ಎಂದು ಹೇಳಿದಾಗ, ಅದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ವೇದಿಕೆಯಲ್ಲಿದ್ದ ಪಂಚಪೀಠಾಧೀಶರು ಚಪ್ಪಾಳೆ ತಟ್ಟಿ ಒಂದು ರೀತಿಯಲ್ಲಿ ಸಹಮತ ಸೂಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದೆ.
ಧೀರೋದಾತ್ತವಾಗಿ ಭಾಷಣ ಮಾಡುವ ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ನಮ್ಮ ಧರ್ಮದ ಮರ್ಯಾದೆಯನ್ನು ಮೂರು ಕಾಸಿಗೆ ಮಾರಿದ್ದಾರೆ ಎಂಬ ಭಾವನೆ ಮೂಡಿಸಿದೆ. ಒಬ್ಬ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತ್ರ ಈ ಹೇಳಿಕೆಯನ್ನು ಖಂಡಿಸಿದರು. ಆದರೆ, ಅಲ್ಲಿ ಉತ್ತರ ನೀಡಬೇಕಾದವರು ಮೌನವಾಗಿದ್ದು, ಬದಲಾಗಿ ಚಪ್ಪಾಳೆ ತಟ್ಟಿದ್ದು ನಿಜಕ್ಕೂ ವಿಷಾದನೀಯ ಎಂದಿದೆ.
ಇದೇ ರೀತಿ ಬೇರೆ ಸಮುದಾಯದ ಕುರಿತು ಹೇಳಿಕೆ ನೀಡಿದ್ದರೆ, ಆ ಸಮುದಾಯದ ನಾಯಕರು ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು. ಆದರೆ, ನಮ್ಮ ಸಮುದಾಯದ ಧಾರ್ಮಿಕ ಹಾಗೂ ಐತಿಹಾಸಿಕ ವಿಚಾರಗಳ ಕುರಿತು ಅವಹೇಳನಕಾರಿ ಅಥವಾ ವ್ಯಂಗ್ಯಾತ್ಮಕ ಹೇಳಿಕೆಗಳು ಬಂದಾಗಲೂ, ಅದನ್ನು ಪ್ರಶ್ನಿಸದೆ ಚಪ್ಪಾಳೆ ತಟ್ಟುವುದು ನಮ್ಮ ಧರ್ಮದ ದುರ್ದೈವ.
ಧರ್ಮದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಮ್ಮ ಧರ್ಮದ ಇತಿಹಾಸ, ಪರಂಪರೆ, ಶರಣರ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾದಾಗ, ಅದನ್ನು ಪಕ್ಷಾತೀತವಾಗಿ ಪ್ರಶ್ನಿಸುವ ಧೈರ್ಯ ನಮ್ಮ ಧಾರ್ಮಿಕ ಹಾಗೂ ರಾಜಕೀಯ ನಾಯಕರಲ್ಲಿ ಇರಬೇಕು. ಇದು ಯಾರೊಬ್ಬ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿರೋಧವಲ್ಲ; ನಮ್ಮ ಧರ್ಮದ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



