ರಾಜ್ಯ

ಗದಗ ಲಕ್ಕುಂಡಿ ನಿಧಿ ಪ್ರಕರಣ: 466 ಗ್ರಾಂ ಅಪರೂಪದ ಹಳೆಯ ಚಿನ್ನಕ್ಕೆ 8 ಕೋಟಿ ರೂ ಮೌಲ್ಯ ಅಂದಾಜು!

ಲಕ್ಕುಂಡಿಯಲ್ಲಿ ಪತ್ತೆಯಾದ ಈ ಖಜಾನೆಯಲ್ಲಿ ಸುಮಾರು 466 ಗ್ರಾಂ ತೂಕದ ಅಪರೂಪದ ಪುರಾತನ ಚಿನ್ನದ ಆಭರಣಗಳಿದ್ದು, ಅವು ಸುಮಾರು 600 ವರ್ಷಗಳ ಹಳೆಯದಾಗಿದೆ.

ಗದಗ ಲಕ್ಕುಂಡಿ ನಿಧಿ ಪ್ರಕರಣ: 466 ಗ್ರಾಂ ಅಪರೂಪದ ಹಳೆಯ ಚಿನ್ನಕ್ಕೆ 8 ಕೋಟಿ ರೂ ಮೌಲ್ಯ ಅಂದಾಜು!
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ
Published On :

ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.

ಇಲ್ಲಿ ಸಿಕ್ಕಿರುವ ಸುಮಾರು 466 ಗ್ರಾಂ ತೂಕದ ಅಪರೂಪದ ಪ್ರಾಚೀನ ಚಿನ್ನಾಭರಣಗಳ ಅಂದಾಜು ಮೌಲ್ಯ ಬರೋಬ್ಬರಿ 8 ಕೋಟಿ ರೂ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್ ಅವರು ತಿಳಿಸಿದ್ದಾರೆ.

ಬುಧವಾರ ಮಾತನಾಡಿದ ಅವರು, ಲಕ್ಕುಂಡಿಯಲ್ಲಿ ಪತ್ತೆಯಾದ ಈ ಖಜಾನೆಯಲ್ಲಿ ಸುಮಾರು 466 ಗ್ರಾಂ ತೂಕದ ಅಪರೂಪದ ಪುರಾತನ ಚಿನ್ನದ ಆಭರಣಗಳಿದ್ದು, ಅವು ಸುಮಾರು 600 ವರ್ಷಗಳ ಹಳೆಯದಾಗಿದೆ.

ಈ ಖಜಾನೆಯ ಮೌಲ್ಯ ನಿರ್ಧಾರಕ್ಕಾಗಿ ಪುರಾತತ್ವ ಇಲಾಖೆಯ ಆಯುಕ್ತರು ಗದಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಿದ್ದರು.

ಸಮಿತಿ ತನ್ನ ವರದಿ ಸಲ್ಲಿಸಿದ್ದು, ಅಂತರರಾಷ್ಟ್ರೀಯ ಪುರಾತತ್ವ ಮೌಲ್ಯದ ಆಧಾರದ ಮೇಲೆ ಖಜಾನೆಯ ಬೆಲೆ ಸುಮಾರು ರೂ.8 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷದ ಜನವರಿಯಲ್ಲಿ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೋಡುವ ವೇಳೆ ಈ ಖಜಾನೆ ಪತ್ತೆಯಾಗಿತ್ತು. 15 ವರ್ಷದ ಪ್ರಜ್ವಲ್ ಎಂಬ ಬಾಲಕ ಪ್ರಾಮಾಣಿಕತೆಯಿಂದ ಆಭರಣಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದನು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಕುಟುಂಬವನ್ನು ಬುಧವಾರ ಸನ್ಮಾನಿಸಲಾಯಿತು.

ಲಕ್ಕುಂಡಿ ಹೆರಿಟೇಜ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿಯ ರಾಜ್ಯ ಸಮಿತಿ ಸದಸ್ಯ ಸಿದ್ದು ಪಾಟೀಲ್ ಮಾತನಾಡಿ, ಲಕ್ಕುಂಡಿಯಲ್ಲಿ ಪುರಾತತ್ವ ಅನ್ವೇಷಣೆ ಕಾರ್ಯ ಮುಂದುವರಿದಿದ್ದು, ಈಗಾಗಲೇ ಅನೇಕ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.