ನಿಶಾಳ ತಾಯಿಗೆ ಡಿವೋರ್ಸ್ ಕೊಟ್ಟು 25 ವರ್ಷವಾಯ್ತು, ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಶಾಸಕ ಯೋಗೇಶ್ವರ್
ವೈಯಕ್ತಿಕ ಕಾರಣದಿಂದ ಈ ಬಾರಿ ಹಬ್ಬ ಮಾಡಿರ್ಲಿಲ್ಲ. ಈ ವಿಚಾರ ನಿಶಾಳಿಗೆ ಗೊತ್ತಿದ್ದೂ ಈ ರೀತಿ ಮಾಡಿದಳೋ ಅಥವಾ ಗೊತ್ತಿಲ್ಲದೆ ಮಾಡಿದ್ಲೋ ಗೊತ್ತಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳನ್ನ ನೋಡಿಯೇ ಕೊಂಡಿಲ್ಲ ಎನ್ನುವಂತೆ ಬಿಂಬಿತವಾಗಿದೆ.

ಬೆಂಗಳೂರು: ನಿಶಾಳ ತಾಯಿ ನನ್ನಿಂದ ಕಾನೂನು ಬದ್ದವಾಗಿ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆಗೂ ನನಗೂ ನನ್ನ ಕುಟುಂಬಕ್ಕೂ ಯಾವೂದೇ ಸಂಬಂಧವಿಲ್ಲ ಎಂದು ಶಾಸಕ ಯೋಗೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರ ಸಿ.ಪಿ.ಯೋಗೇಶ್ವರ್ ಹುಟ್ಟೂರು ಚಕ್ಕೆರೆ ಗ್ರಾಮದಲ್ಲಿ ಹಬ್ಬದ ಸಮಯದಲ್ಲಿ ನಡೆದ ಜಗಳ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು, ಇದೀಗ ಮಗಳ ಆರೋಪಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಯೋಗೇಶ್ವರ್ ಅವರು, ಇತ್ತಿಚೀನ ದಿನಗಳಲ್ಲಿ ನನ್ನ ಮಗಳು ನಿಶಾ ಮತ್ತು ಆಕೆಯ ತಾಯಿ ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಕೆಲ ಹೇಳಿಕೆಗಳನ್ನ ನೀಡಿದ್ದಾರೆ. ನನ್ನ ಹೂಟ್ಟೂರು ಚಕ್ಕರೆಯಲ್ಲಿ ಊರ ಹಬ್ಬದ ದಿನ ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಮನೆ ಬಳಿ ಬಂದು ಮನೆಯೊಳಗೆ ನಮ್ಮನ್ನ ಬಿಡ್ತಿಲ್ಲ ಅಂತ ವಿಡಿಯೋ ಮಾಡಿದ್ದಾರೆ.
ವೈಯಕ್ತಿಕ ಕಾರಣದಿಂದ ಈ ಬಾರಿ ಹಬ್ಬ ಮಾಡಿರ್ಲಿಲ್ಲ. ಈ ವಿಚಾರ ನಿಶಾಳಿಗೆ ಗೊತ್ತಿದ್ದೂ ಈ ರೀತಿ ಮಾಡಿದಳೋ ಅಥವಾ ಗೊತ್ತಿಲ್ಲದೆ ಮಾಡಿದ್ಲೋ ಗೊತ್ತಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳನ್ನ ನೋಡಿಯೇ ಕೊಂಡಿಲ್ಲ ಎನ್ನುವಂತೆ ಬಿಂಬಿತವಾಗಿದೆ. ಈ ಮೂಲಕ ಸಾರ್ವಜನಿರಲ್ಲಿ ತಿಳಿಯ ಪಡಿಸುವುದೆನೆಂದರೆ ನಿಶಾಳ ತಾಯಿ ನನ್ನಿಂದ ಕಾನೂನು ಬದ್ದವಾಗಿ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆಗೂ ನನಗೂ ನನ್ನ ಕುಟುಂಬಕ್ಕೂ ಯಾವೂದೇ ಸಂಬಂಧವಿಲ್ಲ. ಇನ್ನೂ ನನ್ನ ಮಗಳಿಗೆ ನಾನಿನ್ನು ತಂದೆಯಾಗಿದ್ದೇನೆ. ಆದರೆ ನನ್ನ ಮಗಳು ನನ್ನ ವಿರುದ್ಧವೇ ಇಲ್ಲ ಸಲ್ಲದ ಆರೋಪಗಳನ್ನ ಮಾಡಿರೋದು ನನ್ನ ಮನಸ್ಸಿದೆ ಘಾಸಿಯುಂಟುಮಾಡಿದೆ.
ನನ್ನ ಮಗಳು ವಿರೋಧಿಗಳ ಜೊತೆ ಸೇರಿ ನನ್ನನ್ನು ಕಳಂಕಿತಗೊಳಿಸಲು ಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಸುಳ್ಳು ಆರೋಪಗಳನ್ನು ನಂಬಬಾರದು’ ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



