ರಾಜ್ಯ

ಗ್ರಾಹಕರಿಗೆ ಮತ್ತೊಂದು ಬರೆ: ಈ ಹಾಲಿನ ದರ ಏರಿಕೆ; ನಾಳೆಯಿಂದಲೇ ಹೊಸ ರೇಟ್​ ಅನ್ವಯ!

ಈ ಹಾಲಿನ ಬೆಲೆ ಏರಿಕೆಯು ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಮಧ್ಯಮ ವರ್ಗದ ಗ್ರಾಹಕರ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಗ್ರಾಹಕರಿಗೆ ಮತ್ತೊಂದು ಬರೆ: ಈ ಹಾಲಿನ ದರ ಏರಿಕೆ; ನಾಳೆಯಿಂದಲೇ ಹೊಸ ರೇಟ್​ ಅನ್ವಯ!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಅಮುಲ್ ಬ್ರಾಂಡ್ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ(ಜಿಸಿಎಂಎಂಎಫ್) ಬುಧವಾರ ಭಾರತದಾದ್ಯಂತ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ದರ ಮೇ 14 ರಿಂದ ಜಾರಿಗೆ ಬರಲಿದೆ.

ಈ ಹಾಲಿನ ಬೆಲೆ ಏರಿಕೆಯು ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಮಧ್ಯಮ ವರ್ಗದ ಗ್ರಾಹಕರ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

"ದೇಶಾದ್ಯಂತ ಮೇ 14 ರಿಂದ ಜಾರಿಗೆ ಬರುವಂತೆ ಪ್ರಮುಖ ತಾಜಾ ಪೌಚ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ" ಎಂದು GCMMF ಪ್ರಕಟಣೆಯಲ್ಲಿ ತಿಳಿಸಿದೆ.

"ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ವರ್ಷದಲ್ಲಿ ಜಾನುವಾರು ಮೇವು, ಹಾಲಿನ ಪ್ಯಾಕೇಜಿಂಗ್ ಫಿಲ್ಮ್ ಮತ್ತು ಇಂಧನದ ವೆಚ್ಚದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ" ಎಂದು GCMMF ತಿಳಿಸಿದೆ.

ನಂದಿನಿ ಹಾಲಿನ ದರ ಹೆಚ್ಚು ಅಂತ ಅಮುಲ್​ ಹಾಲು ಖರೀದಿಸುವವರಿಗೂ ಈಗ ಕಷ್ಟವಾಗಿದೆ. ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್​ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್​​ಗಳ ಬೆಲೆ ಏರಿಕೆ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.