ನನಗೆ ಮಕ್ಕಳಾಗಬೇಕೆಂದು ಹರಕೆ ಕಟ್ಟಿಲ್ಲ; ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು; ಮಮತಾ ಬ್ಯಾನರ್ಜಿ ಸೋಲಬೇಕು: ಪ್ರಥಮ್!
ಪಶ್ಚಿಮ ಬಂಗಾಳದಲ್ಲಿ ಏನಾದ್ರೂ ಮಮತಾಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ .

ಬೆಂಗಳೂರು: ಪಶ್ಚಿಮ ಬಂಗಾಳ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ನಟ ಒಳ್ಳೆ ಹುಡುಗ ಪ್ರಥಮ್ ಮಮತ ಬ್ಯಾನರ್ಜಿ ಸೋಲಿಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ಪ್ರಥಮ್, ನನಗೆ ಇಂತಹ ಮಕ್ಕಳಾಗಬೇಕು, ನನ್ನ ಸಿನಿಮಾ ಗೆಲ್ಲಬೇಕು ಅಂತ ಯಾವತ್ತು ಹರಕೆ ಹೊತ್ತವನಲ್ಲ, ಆದರೆ, ಪಶ್ಚಿಮ ಬಂಗಾಳದಲ್ಲಿ ಏನಾದ್ರೂ ಮಮತಾಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ ಎಂದಿದ್ದಾರೆ.
ನಾನು ರಾಜಕೀಯದಿಂದ ದೂರ, ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು! ನನ್ನ ದೇಶ ಚೆನ್ನಾಗಿರಬೇಕು. ಇದೊಂದೇ ಈಶ್ವರನಲ್ಲಿ ಬೇಡಿಕೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ.. ನಮ್ಮವರು ಚೆನ್ನಾಗಿರ್ಲಿ. ಖಂಡಿತಾ ಕಷ್ಟದಲ್ಲಿದ್ದವರ ಶಕ್ತಿ ಮೀರಿ ಸಹಾಯ ಮಾಡ್ತೀನಿ ಎಂದು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



