ರಾಜ್ಯ

ಮೈಸೂರು: ಹೊಸ್ತಿಲ ಮೇಲಿದ್ದ ದಾಸವಾಳ ನುಂಗಿ ಆರು ತಿಂಗಳ ಮಗು ಸಾವು!

ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಮೃತಪಟ್ಟ ಮಗು. ಶನಿವಾರ ಚಿನ್ಮಯಿ ತನ್ನ ಅಣ್ಣನೊಂದಿಗೆ ಮನೆಯ ಹೊಸಲಿನಲ್ಲಿ ಆಟವಾಡುತ್ತಿದ್ದನು.

ಮೈಸೂರು: ಹೊಸ್ತಿಲ ಮೇಲಿದ್ದ ದಾಸವಾಳ ನುಂಗಿ ಆರು ತಿಂಗಳ ಮಗು ಸಾವು!
ಮೃತ ಮಗು ಚಿನ್ಮಯಿ ಗೌಡ
Published On :

ಹುಣಸೂರು: ಆಟವಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಆಗಿ ಒಣಗಿದ ದಾಸವಾಳದ ಹೂವನ್ನು ನುಂಗಿದ ಪರಿಣಾಮ, ಆರೂವರೆ ತಿಂಗಳ ಹಸುಗೂಸು ಉಸಿರುಗಟ್ಟಿ ಮೃತಪಟ್ಟಿರುವ ಅತ್ಯಂತ ದುರದೃಷ್ಟಕರ ಘಟನೆ ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯಿಗೌಡ ಮೃತಪಟ್ಟ ಮಗು. ಶನಿವಾರ ಚಿನ್ಮಯಿ ತನ್ನ ಅಣ್ಣನೊಂದಿಗೆ ಮನೆಯ ಹೊಸಲಿನಲ್ಲಿ ಆಟವಾಡುತ್ತಿದ್ದನು.

ಈ ವೇಳೆ ಪೂಜೆಗೆ ಇರಿಸಲಾಗಿದ್ದ ಒಣಗಿದ ದಾಸವಾಳದ ಹೂವಿನ ತುಂಡನ್ನು ಮಗು ಬಾಯಿಗೆ ಹಾಕಿಕೊಂಡಿದೆ. ತನ್ನ ಅಣ್ಣ ಅದನ್ನು ಕಿತ್ತುಕೊಳ್ಳುತ್ತಾನೆಂಬ ಭಯದಿಂದ ಮಗು ಹೂವನ್ನು ನುಂಗಿದೆ.

ಹೂವು ಗಂಟಲಿನಲ್ಲಿ ಸಿಲುಕಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಯಿತು. ತಕ್ಷಣವೇ ಹನಗೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.