ರಾಜ್ಯ

ನೆಲಮಂಗಲ ಬಳಿ ಸರಣಿ ಅಪಘಾತ; KSRTC ಚಾಲಕನಿಗೆ ಥಳಿತ! ಹೆದ್ದಾರಿಯಲ್ಲಿ ಕೆಲಕಾಲ ಸಾಲುಗಟ್ಟಿ ನಿಂತ ವಾಹನಗಳು!

ಈ ವೇಳೆ ಚಾಲಕ ಮತ್ತು ಉಳಿದ ವಾಹನಗಳ ಚಾಲಕರು, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದ್ದು, ಬಸ್ ಚಾಲಕನಿಗೆ ಥಳಿಸಿದ್ದಾರೆ.

ನೆಲಮಂಗಲ ಬಳಿ ಸರಣಿ ಅಪಘಾತ; KSRTC ಚಾಲಕನಿಗೆ ಥಳಿತ! ಹೆದ್ದಾರಿಯಲ್ಲಿ ಕೆಲಕಾಲ ಸಾಲುಗಟ್ಟಿ ನಿಂತ ವಾಹನಗಳು!
ಹೆದ್ದಾರಿಯಲ್ಲಿ ಸರಣಿ ಅಪಘಾತದಿಂದ ರೊಚ್ಚಿಗೆದ್ದ ಪ್ರಯಾಣಿಕರು
Published On :

ನೆಲ ಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸರಣಿ ಅಪಘಾತ ಸಂಭವಿಸಿದೆ.

ಹಾಸನದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ KSRTC ಪುಷ್ಪಕ್‌ ಪ್ಲಸ್‌ ಇವಿ ಬಸ್‌ ಓವರ್ ಟೇಕ್ ಮಾಡಲು ಹೋಗಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದು ಕಾರಿನ ಹಿಂಭಾಗ ನಜ್ಜುಗುಜ್ಜಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಈ ವೇಳೆ ಚಾಲಕ ಮತ್ತು ಉಳಿದ ವಾಹನಗಳ ಚಾಲಕರು, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದ್ದು, ಬಸ್ ಚಾಲಕನಿಗೆ ಥಳಿಸಿದ್ದಾರೆ.

ಸಾಮಾನ್ಯವಾಗಿ ಭಾನುವಾರ ಊರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ಈ ಹೆದ್ದಾರಿಯಲ್ಲಿ ಜಾಸ್ತಿ ಇರುತ್ತದೆ. ಹೀಗಾಗಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇಂದು ಕೂಡಾ ಸರಣಿ ಅಪಘಾತ ನಡೆದಿದೆ.

ಚಾಲಕ ಮತ್ತು ಸವಾರರ ಮಧ್ಯೆ ಜಗಳ ನಡೆದ ಪರಿಣಾಮ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಕಿಲೋಮೀಟರ್‌ಗಟ್ಟಲ್ಲೇ ವಾಹನಗಳ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.