ರಾಜ್ಯ

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ; ಆರೋಪಿಗಾಗಿ ಪೊಲೀಸರ ಶೋಧ

ತಸೀನಾ ಬಾನು ಅವರಿಂದ ವಿಚ್ಛೇದನ ಪಡೆದಿದ್ದ ಸುಹೈಲ್ ಕೋಪದಿಂದ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ನಂತರ ಆಕೆಯ ಕೈ ಮತ್ತು ಕಾಲುಗಳ ಮೇಲೆ ಆ್ಯಸಿಡ್ ಸುರಿದಿದ್ದಾನೆ.

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ; ಆರೋಪಿಗಾಗಿ ಪೊಲೀಸರ ಶೋಧ
ಆ್ಯಸಿಡ್ ದಾಳಿ
Published On :

ಚಿತ್ರದುರ್ಗ: ಭೀಕರ ಆ್ಯಸಿಡ್ ದಾಳಿಯೊಂದರಲ್ಲಿ ಮಹಿಳೆ ಹಾಗ ಮೂವರು ಮಕ್ಕಳು ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಚಿತ್ರದುರ್ಗದ ಮಲಪ್ಪನಹಟ್ಟಿ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.

ತಹಸೀನಾ ಭಾನು (47), ನಗ್ಮಾ ನಾಯಕ್ (49), ರೋಶ್ನಿ (12), ನೇಹಾ (27) ಮತ್ತು ಇಕ್ಸ್ರಾ ಫಾತಿಮಾ (4) ಆ್ಯಸಿಡ್ ದಾಳಿಯಲ್ಲಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ ನಗರದ ನೆಹರು ನಗರದ ಸುಹೈಲ್ ಬಾಷಾ ಅಲಿಯಾಸ್ ಸುಹೈಲ್ (50) ಈ ಹೇಯ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ತಸೀನಾ ಬಾನು ಅವರಿಂದ ವಿಚ್ಛೇದನ ಪಡೆದಿದ್ದ ಸುಹೈಲ್ ಕೋಪದಿಂದ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ನಂತರ ಆಕೆಯ ಕೈ ಮತ್ತು ಕಾಲುಗಳ ಮೇಲೆ ಆ್ಯಸಿಡ್ ಸುರಿದಿದ್ದಾನೆ.

ಈ ನಡುವೆ ಜಗಳ ತಡೆಯಲು ಮಧ್ಯಪ್ರವೇಶಿಸಿದ ನಗ್ಮಾ ನಾಯ್ಕ್ ಮತ್ತು ಮೂವರು ಮಕ್ಕಳ ಮುಖ, ಕೈ ಮತ್ತು ಕಾಲುಗಳಿಗೂ ಆ್ಯಸಿಡ್'ನಿಂದ ಗಾಯಗಳಾಗಿವೆ. ಗಾಯಗೊಂಡ ಎಲ್ಲರನ್ನೂ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೋಟೆ ಪೊಲೀಸರು ದೂರು ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಈ ಮಧ್ಯೆ ಪೊಲೀಸರು ಮೂರು ತಂಡಗಳನ್ನು ರಚಿಸಿ ಘಟನೆಯ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.