ವಿಧಾನಸಭೆ ಕಲಾಪ: ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಮೂವರು ಅಧಿಕಾರಗಳ ತಲೆದಂಡ?
ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನದ ಬಳಿಕ ಸದನ ನಡೆಸಲು ಒಪ್ಪಿದ ಸ್ಪೀಕರ್ ಖಾದರ್ ಕಲಾಪಕ್ಕೆ ಬಂದು ಕುರ್ಚಿಯಲ್ಲಿ ಕುಳಿತುಕೊಂಡರು.

ಬೆಂಗಳೂರು: ಅಧಿವೇಶನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸುವವರೇ ಇಲ್ಲ, ಸಚಿವರು, ಅಧಿಕಾರಿಗಳು ಗೈರಾಗಿದ್ದಾರೆ, ಹೀಗಾದರೆ ಸದನ ನಡೆಸುವುದು ಹೇಗೆ ಎಂದು ಹೊರನಡೆದ ಸ್ಪೀಕರ್ ಯುಟಿ ಖಾದರ್ ಆಕ್ರೋಶಕ್ಕೆ 3 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ವಿಧಾನಸಭೆ ಅಧಿವೇಶನಕ್ಕೆ ಸಚಿವರು ಗೈರಾಗಿದ್ದಾರೆ. ಅಲ್ಲದೇ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ಇಲ್ಲ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಲ್ಲ ಎಂದು ಸ್ಪೀಕರ್ ಯುಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸ್ಪೀಕರ್ ಖಾದರ್ ಜೊತೆ ಮಾತುಕತೆ ನಡೆಸಿ ಮನವೊಲಿಕೆ ಮಾಡಿದ್ದಾರೆ. ಸ್ಪೀಕರ್ ಜೊತೆ ಮಾತನಾಡಿದ ಬಳಿಕ ಮೂವರು ಅಧಿಕಾರಿಗಳಿಗೆ ನೋಟಿಸ್ ಕಳಿಸುವಂತೆ ಸೂಚನೆ ನೀಡಿದ್ದಾರೆ.

'ಹೀಗಾದರೆ ಸದನ ಹೇಗೆ ನಡೆಸಬೇಕು, ಉತ್ತರ ಕೊಡಿ': ಖಾದರ್ ಗರಂ; ಕಲಾಪದಿಂದ ಹೊರನಡೆದ ಸ್ಪೀಕರ್; ಮನವೊಲಿಸಿದ ಸಿಎಂ! Video
ಮತ್ತೆ ಸದನಕ್ಕೆ ಬಂದ ಸ್ಪೀಕರ್
ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನದ ಬಳಿಕ ಸದನ ನಡೆಸಲು ಒಪ್ಪಿದ ಸ್ಪೀಕರ್ ಖಾದರ್ ಕಲಾಪಕ್ಕೆ ಬಂದು ಕುರ್ಚಿಯಲ್ಲಿ ಕುಳಿತುಕೊಂಡರು.ಸರ್ಕಾರದ ವಿರುದ್ಧವೇ ಸಿಟ್ಟಾದ ಸ್ಪೀಕರ್ ಖಾದರ್ ಅವರ ಮನವೊಲಿಕೆ ಮಾಡುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಶಾಸಕರ ಪ್ರಶ್ನೆಗಳಿಗೆ ಸಿಗಲಿದೆ ಸೂಕ್ತ ಉತ್ತರ
ಲಿಖಿತ ಪ್ರಶ್ನೆಗಳಿಗೆ ಉತ್ತರ ಸಂಬಂಧ ಸಿಎಂ ಹಾಗೂ ಸಚಿವರು ಮತ್ತೆ ಪ್ರತಿಪಕ್ಷ ನಾಯಕರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಭೋಜನ ಸಮಯದ ಬಳಿಕ ಸರ್ಕಾರ ಅದಕ್ಕೆ ಉತ್ತರ ಕೊಡಲಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


