ರಾಜ್ಯ

ಪದವೀಧರರಿಗೆ ರಾಜ್ಯ ಸರ್ಕಾರದಿಂದ ಬೋಧನಾ ಹುದ್ದೆಗಳಿಗೆ ತರಬೇತಿ ಪ್ರಾರಂಭ!

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯ ತರಬೇತಿ ಸೌಲಭ್ಯ ಜೊತೆಗೆ ಕಲೆ, ವಿಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ಹಿನ್ನೆಲೆ ಹೊಂದಿರುವ ಹೊಸ ಪದವೀಧರರಿಗೆ ತರಬೇತಿ ಕಾರ್ಯಕ್ರಮ ಆರಂಭಿಸಿದೆ.

ಪದವೀಧರರಿಗೆ ರಾಜ್ಯ ಸರ್ಕಾರದಿಂದ ಬೋಧನಾ ಹುದ್ದೆಗಳಿಗೆ ತರಬೇತಿ ಪ್ರಾರಂಭ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹೊಸ ಪದವೀಧರರಿಗೆ ರಾಜ್ಯ ಶಿಕ್ಷಣ ಮಂಡಳಿ ಮತ್ತು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ತರಬೇತಿ ಕಾರ್ಯಕ್ರಮವನ್ನು ಸರ್ಕಾರ ಪ್ರಾರಂಭಿಸಿದೆ.

ಇದಕ್ಕಾಗಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯ ತರಬೇತಿ ಸೌಲಭ್ಯ (BMVNTFSA) ಜೊತೆಗೆ ಕಲೆ, ವಿಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ಹಿನ್ನೆಲೆ ಹೊಂದಿರುವ ಹೊಸ ಪದವೀಧರರಿಗೆ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ.

"2022, 2023, 2024 ಮತ್ತು 2025ನೇ ಸಾಲಿನಲ್ಲಿ ಬಿ.ಎಸ್ಸಿ, ಎಂ.ಎಸ್ಸಿ, ಬಿಸಿಎ, ಎಂಸಿಎ, ಎಂಎ (ಸಮಾಜಶಾಸ್ತ್ರ ಮತ್ತು ಇಂಗ್ಲಿಷ್), ಬಿಎ, ಬಿಇ ಪದವಿ ಪಡೆದಿರುವ ಪದವೀಧರರು ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಹ್ಯಾಂಡ್ಸ್ ಆನ್ ಫೌಂಡೇಶನ್ ಮತ್ತು ಕನೆಕ್ಟಿಂಗ್ ದಿ ಡಾಟ್ಸ್ ಸಂಸ್ಥೆ ಈ ಪದವೀಧರರು ಉತ್ತಮ ಶಿಕ್ಷಕರಾಗಲು ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುತ್ತದೆ. ಇದು ಅವರ ಪ್ರಸ್ತುತಿ, ಸಂವಹನ ಕೌಶಲ್ಯ ಮತ್ತು STEM ಜ್ಞಾನವನ್ನು ಉತ್ತಮಗೊಳಿಸಲು ನಾಲ್ಕು ವಾರಗಳ ವಸತಿ ಕಾರ್ಯಕ್ರಮವಾಗಿದೆ.

ಇವರಿಗೆ ತರಬೇತಿ ನೀಡುವ ಅಧ್ಯಾಪಕರು ನಾಲ್ಕು ವಾರಗಳ ತರಬೇತಿಯ ನಂತರವೂ ಅವರಿಗೆ ವರ್ಷವಿಡೀ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಯುವ ನಿಧಿ ಫಲಾನುಭವಿಗಳಿಗೆ ಉದ್ಯೋಗ ಸಿಗುವಂತೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 28 ದಿನಗಳ ಕಾರ್ಯಕ್ರಮ ಪೂರ್ಣಗೊಂಡ ನಂತರ, ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲು ಶಾಲೆಗಳು ಬರುತ್ತವೆ ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಶಾಲೆಗಳಲ್ಲಿ ಉದ್ಯೋಗ ದೊರೆಯುತ್ತದೆ.

ಚಿತ್ರದುರ್ಗ, ತರೀಕೆರೆ, ತುಮಕೂರು, ದಾವಣಗೆರೆ ಮತ್ತು ಇತರ ಜಿಲ್ಲೆಗಳ ಶಾಲೆಗಳು ನೇಮಕಾತಿಗಾಗಿ ಸಂದರ್ಶನ ನಡೆಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.