ಮನುವಾದಿ ವಿಜಯ್ ಪೆರಿಯಾರ್ ವಿಚಾರ ಅಧ್ಯಯನ ಮಾಡಲಿ: ನಟ ಚೇತನ್ ಅಹಿಂಸಾ
'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್ ಹೇಳುತ್ತಾರೆ.

ಬೆಂಗಳೂರು: ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ’ ಎಂಬ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟ ಚೇತನ್ ಅಹಿಂಸಾ, ಮೊದಲು ಪೆರಿಯಾರ್ ವಿಚಾರಗಳನ್ನು ಅಧ್ಯಯನ ಮಾಡಿ ಎಂದು ಹೇಳಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪೆರಿಯಾರ್ ಹೇಳಿದ ಎಲ್ಲವನ್ನೂ ನಾನು ಒಪ್ಪುವುದಿಲ್ಲ, ದೇವರನ್ನು ನಂಬುತ್ತೇನೆ ಎಂದು ನೀವು(ವಿಜಯ್) ಹೇಳುತ್ತೀರಿ. ಹಾಗಾದರೆ, ಚುನಾವಣಾ ಪ್ರಚಾರದಲ್ಲಿ ಪೆರಿಯಾರ್ ಅವರ ಚಿತ್ರ ಬಳಸಿರುವ ನೀವು, ಪೆರಿಯಾರ್ ಅವರ ಯಾವ ವಿಚಾರಗಳನ್ನು ಒಪ್ಪುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.
'‘ದೇವರನ್ನು ಪ್ರಶ್ನಿಸಲು ಆಳವಾದ ಚಿಂತನೆ ಮತ್ತು ಅರಿವು ಬೇಕು; ದೇವರನ್ನು ನಂಬಲು ಒಬ್ಬ ಮೂರ್ಖರಾದರೆ ಸಾಕು’ ಎಂದು ಪೆರಿಯಾರ್ ಹೇಳುತ್ತಾರೆ. ಮನುವಾದಿ ಮನೋಭಾವ ಹೊಂದಿರುವ ವಿಜಯ್ ಅವರು ಪೆರಿಯಾರ್ ಅವರ ವಿಚಾರಗಳನ್ನು ಅಧ್ಯಯನ ಮಾಡಬೇಕು. ಕೇವಲ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳುವುದಲ್ಲ’ ಎಂದು ಟೀಕಿಸಿದ್ದಾರೆ.
ಸೋಮವಾರ ಸದನದಲ್ಲಿ ಮಾತನಾಡಿದ್ದ ವಿಜಯ್ ಅವರು, ‘ಪೆರಿಯಾರ್ ಅವರ ಸಿದ್ದಾಂತವನ್ನು ನಮ್ಮ ಪಕ್ಷ ಅಳವಡಿಸಿಕೊಂಡಿದ್ದರೂ, ದೇವರಲ್ಲಿ ನಂಬಿಕೆ ಇಲ್ಲ ಎಂಬ ಅವರ ತತ್ವವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಮಗೆ ದೇವರಲ್ಲಿ ನಂಬಿಕೆಯಿದೆ. ನಾವು ಯಾವ ಸಿದ್ಧಾಂತದ ವಿರೋಧಿಗಳಲ್ಲ’ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



