ಡಿಕೆಶಿ ಮಾತನ್ನು ನಂಬಬೇಕೇ ಅಥವಾ ಚರಿತ್ರೆ ನೋಡಬೇಕೇ? ಪ್ರಿಯಾಂಕ್ ಖರ್ಗೆ RSS ಶಾಖೆಗೆ ಭೇಟಿ ಕೊಡಲಿ: ಸಿ.ಟಿ ರವಿ
ಡಿಕೆಶಿ ಉಸ್ತುವಾರಿ ಸಚಿವರಾಗಿದ್ದ ಬೆಂಗಳೂರಿನಲ್ಲಿ ಭೂಪರಿವರ್ತನೆಗೆಂದು ಅಡಿಗೆ 100 ಕೊಡಬೇಕಿತ್ತಂತೆ. ಇದು ಶುಲ್ಕವಲ್ಲ ಲಂಚ. ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ಕೋಲಾರ: ಲಂಚ ಕೇಳಿದರೆ ದೂರು ಕೊಡಿ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರ ಮಾತು ನಂಬಬೇಕೇ ಅಥವಾ ಅವರ ಚರಿತ್ರೆ ನೋಡಬೇಕೇ ಗೊತ್ತಾಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.
ಕೋಲಾರದಲ್ಲಿ ಮಾತನಾಡಿದ ಅವರು, ಡಿಕೆಶಿ ಉಸ್ತುವಾರಿ ಸಚಿವರಾಗಿದ್ದ ಬೆಂಗಳೂರಿನಲ್ಲಿ ಭೂಪರಿವರ್ತನೆಗೆಂದು ಅಡಿಗೆ 100 ಕೊಡಬೇಕಿತ್ತಂತೆ. ಇದು ಶುಲ್ಕವಲ್ಲ ಲಂಚ. ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಹೆದರಬೇಡಿ, ನಾನಿದ್ದೇನೆ ಧೈರ್ಯವಾಗಿರಿ’ ಎಂದು ಕುರಿಗಳಿಗೆ ತೋಳ ನಿತ್ಯ ಹೇಳುತ್ತಿತಂತೆ. ತೋಳದ ಮಾತು ನಂಬಿ ದಿನ ಕಳೆದಂತೆ ಕುರಿಗಳ ಸಂಖ್ಯೆ ಕಡಿಮೆ ಆಗುತ್ತಾ ಹೋಯಿತಂತೆ. ರಾಜ್ಯದ್ದು ಕುರಿಗಳ ಪರಿಸ್ಥಿತಿ ಆಗಬಾರದು. ತೋಳನ ಕೈಗೆ ಕುರಿಮಂದಿಯನ್ನು ಒಪ್ಪಿಸಬಾರದು. ನಾವು ಕುರಿಗಾಹಿಗಳಾಗಿ ತೋಳದಿಂದ ಕುರಿಗಳನ್ನು ರಕ್ಷಿಸೋಣ ಎಂದು ಹೇಳಿದರು.
ಪ್ರಿಯಾಂಕ್ ಅವರಿಗೆ ಆರ್‌ಎಸ್‌ಎಸ್ ಯಾವುದೇ ಸ್ಪಷ್ಟನೆ, ಪ್ರತಿಕ್ರಿಯೆ ಕೊಟ್ಟಿಲ್ಲ. ಕೇರಳಂನಲ್ಲಿ ಜನರ ಪ್ರಶ್ನೆಯೊಂದಕ್ಕೆ ಸಂಘದ ಮೋಹನ್ ಭಾಗವತ್ ಉತ್ತರಿಸಿದ್ದಾರೆ. 100 ವರ್ಷಗಳ ಬೆಳವಣಿಗೆಯೇ ಆರ್‌ಎಸ್‌ಎಸ್ ಅಸ್ತಿತ್ವಕ್ಕೆ ಸಾಕ್ಷಿಯಾಗಿದೆ, ಜನ ಸ್ವೀಕಾರ ಮಾಡಿರುವುದಕ್ಕೂ ಸಾಕ್ಷಿಯಾಗಿದೆ. ಸಂಘದ ಸ್ವಯಂಸೇವಕರೇ ದೇಶದ ಪ್ರಧಾನಿ, ದೇಶದ ಗೃಹಸಚಿವ, ರಾಷ್ಟ್ರಪತಿ ಆಗಿದ್ದಾರೆ. ದೇಶದ ಜನ ಸ್ವೀಕಾರ ಮಾಡಿದ್ದರೆ ಎಂದರ್ಥ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಮೋಹನ್ ಭಾಗವತ್‌ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಪತ್ರ ಬರೆದಿದ್ದರೆ ಸರ್ಕಾರದಲ್ಲೇ ಅದಕ್ಕೆ ದಾಖಲೆ ಇವೆ. ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಕ್ಕೆ ಹಾಕಲಾಗಿತ್ತು. 2 ಬಾರಿ ಕೋರ್ಟ್ ನಿಷೇಧ ವಾಪಸ್ ಪಡೆದಿತ್ತು. ಒಮ್ಮೆ ಸರ್ಕಾರ ನಿಷೇಧ ವಾಪಸ್ ಪಡೆದಿತ್ತು. ನಿಮ್ಮ ಪ್ರಶ್ನೆಗಳಿಗೆ ಸರ್ಕಾರ ಮತ್ತು ನ್ಯಾಯಾಲಯದ ಹಂತದಲ್ಲಿ ಚರ್ಚೆ ಆಗಿದೆ. ಸಂವಿಧಾನದಲ್ಲಿ ನೋಂದಣಿ, ನೋಂದಣಿ ರಹಿತವಾಗಿ ನಡೆಸಲು ಅವಕಾಶ ಮಾಡಿ ಕೊಟ್ಟಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



