ಕಾರವಾರ: ಅಧಿಕಾರಿಗಳಿಂದ ಮಿಡ್ ನೈಟ್ ಕಾರ್ಯಾಚರಣೆ; ಜಿಂಕೆ ಬೇಟೆಗೆ ಬಂದಿದ್ದ ಗೋವಾ ಸರ್ಕಾರಿ ನೌಕರನ ಬಂಧನ!
ಅರಣ್ಯ ಅಧಿಕಾರಿಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಡಿಗ್ಗಿ ಬಳಿಯ ಬೊಂಡೆಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಬೇಟೆಯ ಬಗ್ಗೆ ಮಾಹಿತಿ ಬಂದಿದೆ.

ಉತ್ತರ ಕನ್ನಡ: ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು ನಡೆಸಿದ ಮಧ್ಯರಾತ್ರಿ ಕಾರ್ಯಾಚರಣೆಯಲ್ಲಿ, ಜಿಂಕೆ ಬೇಟೆಗೆ ಬಂದಿದ್ದ ಗೋವಾ ಸರ್ಕಾರಿ ನೌಕರನೊಬ್ಬನನ್ನು ಬಂಧಿಸಲಾಗಿದೆ.
ಗೋವಾದ ಇತರ ಮೂವರು ಮತ್ತು ಅವರಿಗೆ ಸಿವೆಟ್ ಹಾಗೂ ಜಿಂಕೆಗಳನ್ನು ಬೇಟೆಯಾಡಲು ಸಹಾಯ ಮಾಡಿದ ಒಬ್ಬ ಸ್ಥಳೀಯ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಡಿಗ್ಗಿ ಬಳಿಯ ಬೊಂಡೆಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಈ ಬೇಟೆಯ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣ ಅರಣ್ಯ ತಂಡವು ಗ್ರಾಮಕ್ಕೆ ಧಾವಿಸಿ ಒಬ್ಬ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯ ಹೇಳಿಕೆ ಪ್ರಕಾರ, ಬೇಟೆಗೆ ಬಳಸಿದ ಬಂದೂಕನ್ನು ಹೊಂದಿದ್ದ ಸುಭಾಷ್ ಮಿರಾಶಿ, ಇತರ ಮೂವರೊಂದಿಗೆ ನಾಪತ್ತೆಯಾಗಿದ್ದಾರೆ.
ಪ್ರಕರಣವನ್ನು ದುರ್ಬಲಗೊಳಿಸಲು ಗೋವಾ ರಾಜ್ಯದಿಂದ ಒತ್ತಡವಿರುವುದರಿಂದ ವನ್ಯಜೀವಿ ಕಾರ್ಯಕರ್ತರು ಇಂದು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮೂವರು ಆರೋಪಿಗಳಲ್ಲಿ ಇಬ್ಬರು ಖಾಸಗಿ ಭದ್ರತಾ ಸಂಸ್ಥೆ ಸೇರಿದ್ದು, ಒಬ್ಬರು ಗೋವಾ ಸರ್ಕಾರಿ ಉದ್ಯೋಗಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಜಯೇಂದ್ರ ದಿಗಂಬರ್ ಗಾವ್ಡೆ(45) ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ನಿಗಮದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅರಣ್ಯಾಧಿಕಾರಿಗಳು ಸಿವೆಟ್‌ನ ಮೃತದೇಹವನ್ನು ವಶಪಡಿಸಿಕೊಂಡಿದ್ದು, ಗುಂಡೇಟಿನ ಗಾಯಗಳಿವೆ ಎಂದು ಹೇಳಿದ್ದಾರೆ. ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಅದು ಜಿಂಕೆ ಅಥವಾ ಬಾರ್ಕಿಂಗ್ ಜಿಂಕೆಯದ್ದಾಗಿರಬಹುದು ಎನ್ನಲಾಗಿದೆ.
ಬೊಂಡೆಲಿ ಗ್ರಾಮವು ಗಡಿಯ ಸಮೀಪದಲ್ಲಿರುವುದರಿಂದ ಗೋವಾದೊಂದಿಗೆ ಸಂಪರ್ಕ ಹೊಂದಿದೆ. ಇದು 60 ಮನೆಗಳನ್ನು ಹೊಂದಿದೆ. ಪರಾರಿಯಾಗಿರುವ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



