ರಾಜ್ಯ

ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿ ತೆಗೆಯಿರಿ: ಇತಿಹಾಸ ನೆನಪಿಸಿ ಕಾಂಗ್ರೆಸ್ ಗೆ ತಿವಿದ JDS

ಈಗ NEET ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್‌ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದಿದೆ.

ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿ ತೆಗೆಯಿರಿ: ಇತಿಹಾಸ ನೆನಪಿಸಿ ಕಾಂಗ್ರೆಸ್ ಗೆ ತಿವಿದ JDS
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನೆ
Published On :

ಬೆಂಗಳೂರು: ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ ಎಂದು ಕಾಂಗ್ರೆಸ್ ಗೆ ಜೆಡಿಎಸ್ ತಪರಾಕಿ ಹಾಕಿದೆ.

ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ NEET ವಿಚಾರವಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಬಹಿಷ್ಕರಿಸುವಂತೆ ಒತ್ತಡ ಹೇರುತ್ತಿರುವ ಕಾಂಗ್ರೆಸ್‌ ಶಾಸಕರು, ನಾಯಕರೇ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ... ಎರೆಡೆರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು.

ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ ? ಎಂದು ಪ್ರಶ್ನಿಸಿದ್ದಾರೆ.

ಈಗ NEET ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್‌ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದಿದೆ.

❌ ವಾಲ್ಮೀಕಿ ಹಗರಣ

❌ SCSP/TSP ಹಣ ದುರ್ಬಳಕೆ

❌ ಕೆಪಿಎಸ್ಸಿ (KPSC) ಹಗರಣ

❌ ಗೃಹಲಕ್ಷ್ಮಿ (5000 ಕೋಟಿ ) ಹಗರಣ

ಹೀಗೆ... ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್‌ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆ ಎಂದು ಜೆಡಿಎಸ್ ಕಿಡಿಕಾರಿದೆ.

ಧಾರವಾಡದಲ್ಲಿ ಉದ್ಯೋಗ ನೇಮಕಾತಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಮೇಲೆ , ನರಗುಂದದಲ್ಲಿ ಕಬ್ಬು ಬೆಳೆಗಾರರ ಮೇಲೆ, ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಲಾಠಿ ಏಟು ಕೊಟ್ಟ ಜನವಿರೋಧಿ ಸರ್ಕಾರ ನಿಮ್ಮದು. ದಲಿತರ ಮನೆಗೆ ಬೆಂಕಿ ಬಿದ್ದಾಗ, ಹುಬ್ಬಳ್ಳಿಯಲ್ಲಿ ಗಲಭೆಯಾದಾಗ ನಿಮ್ಮ ಬಾಯಿ ಏಕೆ ಮುಚ್ಚಿತ್ತು ಕಾಂಗೆಸ್ಸಿಗರೇ ? ಕಾಂಗ್ರೆಸ್‌ ಸರ್ಕಾರ ಮತ್ತು ಕಾಂಗ್ರೆಸ್‌ ನಾಯಕರ ಭ್ರಷ್ಟಾಚಾರ, ಬೂಟಾಟಿಕೆ ಹಾಗೂ ದ್ವಂದ್ವ ನೀತಿಯನ್ನು ರಾಜ್ಯದ ಯುವಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.