ರಾಜ್ಯ

ಚಿಕ್ಕಬಳ್ಳಾಪುರ: 13 ದಿನಗಳ ಹೆಣ್ಣು ಶಿಶುವನ್ನು ಸಂಪ್‌ಗೆ ಹಾಕಿ ಹತ್ಯೆಗೈದ ತಂದೆ!

ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ.

ಚಿಕ್ಕಬಳ್ಳಾಪುರ: 13 ದಿನಗಳ ಹೆಣ್ಣು ಶಿಶುವನ್ನು ಸಂಪ್‌ಗೆ ಹಾಕಿ ಹತ್ಯೆಗೈದ ತಂದೆ!
ಆರೋಪಿ ಇಮ್ರಾನ್
Published On :

ಚಿಕ್ಕಬಳ್ಳಾಪುರ: ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲೂ ಗಂಡಿಗೆ ಸಮನಾಗಿ ಪೈಪೋಟಿ ನೀಡುತ್ತಿದ್ದಾಳೆ. ಆದರೂ ಗಂಡು ಮಗು ಬಯಸಿ ಹೆಣ್ಣು ಮಗು ಕೊಲೆ ಮಾಡುವ ಪ್ರಕರಣಗಳು ಮುಂದುವರೆದಿದೆ.

ರಾಜಧಾನಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಇಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಗಂಡು ಮಗು ಬಯಸಿದ್ದ ಪಾಪಿ ತಂದೆಯೊಬ್ಬ, ಸ್ವಂತ ಹೆಣ್ಣು ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆ ಮಾಡಿರುವ ಘಟನೆ ಶಾಂತಿನಗರದಲ್ಲಿ ನಡೆದಿದೆ.

ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ. ಬಳಿಕ ತಾಯಿ ಎದ್ದು ಮಗು ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.

ತದನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ. ಕೊನೆಗೆ ಸಂಪ್ ನೀರು ಹೊರ ಹಾಕಿ ನೋಡಿದಾಗ ಮಗು ಶವವಾಗಿ ಪತ್ತೆಯಾಗಿದೆ.

ತದನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ. ಕೊನೆಗೆ ಸಂಪ್ ನೀರು ಹೊರ ಹಾಕಿ ನೋಡಿದಾಗ ಮಗು ಶವವಾಗಿ ಪತ್ತೆಯಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಪಿ ತಂದೆ ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.