ರಾಜ್ಯ

6 ರಿಂದ 12ನೇ ತರಗತಿಯವರೆಗೂ ಉಚಿತ CBSE ಶಿಕ್ಷಣ; ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ JNVS

JNVST 2027: ಪ್ರಸ್ತುತ ಜವಾಹರ್ ನವೋದಯ ವಿದ್ಯಾಲಯ ಸಮಿತಿಯು ನವೋದಯ ವಿದ್ಯಾಲಯಗಳಲ್ಲಿ 6 ನೇ ತರಗತಿ ಪ್ರವೇಶಕ್ಕಾಗಿ ನಡೆಸುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) 2027 ಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆ ಕುರಿತ ವರದಿ ಇಲ್ಲಿದೆ:

6 ರಿಂದ 12ನೇ ತರಗತಿಯವರೆಗೂ ಉಚಿತ CBSE ಶಿಕ್ಷಣ; ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ JNVS
ಜವಾಹರ್ ನವೋದಯ ವಿದ್ಯಾಲಯ — Online Desk
Published On :

JNVST 2027: ಅದೆಷ್ಟೋ ಜನರಿಗೆ ತಮ್ಮ ಮಕ್ಕಳನ್ನು CBSE ಶಾಲೆಗೆ ಸೇರಿಸಬೇಕು ಎಂಬ ಆಸೆ. ಆದರೆ, ಖಾಸಗಿ CBSE ಶಾಲೆಗಳಲ್ಲಿ ಪ್ರವೇಶ ಪಡೆಯಲು ಹೋದ್ರೆ ಸಾವಿರಾರು ರೂಪಾಯಿ ಫೀಸ್ ಕಟ್ಟಬೇಕು; ಹಲವರಿಗೆ ಇದು ಸಾಧ್ಯವಾಗುವುದಿಲ್ಲ; ಆದ್ರೆ, ನಿಮಗೆ ಗೊತ್ತಾ ಪ್ರತಿಭಾನ್ವಿತ ಶಾಲಾ ಮಕ್ಕಳಿಗೆ ಕೇಂದ್ರ ಸರ್ಕಾರ 12ನೇ ತರಗತಿಯವರೆಗೂ ಉಚಿತ CBSE ಇಂಗ್ಲಿಷ್ ಮೀಡಿಯಂ ಶಿಕ್ಷಣ ನೀಡುತ್ತದೆ ಎಂದು?

ಹೌದು, ಸರ್ಕಾರ ಜವಾಹರ್ ನವೋದಯ ವಿದ್ಯಾಲಯಗಳ ಮೂಲಕ ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಸತಿ ಸಹಿತ 6 ರಿಂದ 12ನೇ ತರಗತಿಯವರೆಗೂ ಉಚಿತ CBSE ಇಂಗ್ಲಿಷ್ ಮೀಡಿಯಂ ಶಿಕ್ಷಣ ನೀಡುತ್ತದೆ. ಅದ್ರಂತೆ, ಪ್ರಸ್ತುತ ಜವಾಹರ್ ನವೋದಯ ವಿದ್ಯಾಲಯ ಸಮಿತಿಯು ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (JNVs) 6 ನೇ ತರಗತಿ ಪ್ರವೇಶಕ್ಕಾಗಿ ನಡೆಸುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) 2027 ಕ್ಕೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆ ಕುರಿತ ವರದಿ ಇಲ್ಲಿದೆ:

ಅರ್ಹತೆ:

ವಿದ್ಯಾರ್ಥಿಯು ಪ್ರಸ್ತುತ (2026–27ನೇ ಸಾಲಿನಲ್ಲಿ) ಸರ್ಕಾರಿ ಅಥವಾ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಜೊತೆಗೆ ವಿದ್ಯಾರ್ಥಿಯು 01-05-2015 ಮತ್ತು 31-07-2017ರ ನಡುವೆ ಜನಿಸಿರಬೇಕು (ಎರಡೂ ದಿನಾಂಕಗಳು ಸೇರಿ).

ಇದರೊಂದಿಗೆ ವಿದ್ಯಾರ್ಥಿಯು ತಾನು ಪ್ರವೇಶ ಬಯಸುವ ನವೋದಯ ವಿದ್ಯಾಲಯವಿರುವ ಅದೇ ಜಿಲ್ಲೆಯ ನಿವಾಸಿಯಾಗಿರಬೇಕು ಮತ್ತು ಅದೇ ಜಿಲ್ಲೆಯ ಶಾಲೆಯಲ್ಲಿ ಓದುತ್ತಿರಬೇಕು. ಏತನ್ಮಧ್ಯೆ, ಈ ಹಿಂದೆ 5ನೇ ತರಗತಿ ಪಾಸಾದವರು ಅಥವಾ ಈಗಾಗಲೇ ಒಮ್ಮೆ ನವೋದಯ ಪರೀಕ್ಷೆ ಬರೆದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ.ಮೀಸಲಾತಿ ವಿವರ

ಮೀಸಲಾತಿ:

ಒಂದು ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ 6 ನೇ ತರಗತಿಗೆ ಒಟ್ಟು 80 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಅದರಲ್ಲಿ, ಶೇಕಡಾ 75 ರಷ್ಟು ಸೀಟುಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಜೊತೆಗೆ ಒಟ್ಟು ಸೀಟುಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗ (1/3) ಸೀಟುಗಳನ್ನು ಹೆಣ್ಣುಮಕ್ಕಳಿಗೆ ಕಾಯ್ದಿರಿಸಲಾಗುತ್ತದೆ. ಇದರೊಂದಿಗೆ ಜಾತಿ ಆಧಾರಿತ ಮೀಸಲಾತಿಯೂ ಇದೆ.

JNVST 2027: ಪ್ರವೇಶ ಪರೀಕ್ಷೆ

ಪ್ರವೇಶ ಪರೀಕ್ಷೆಯನ್ನು OMR-ಆಧಾರಿತ ವಿಧಾನದಲ್ಲಿ 100 ಅಂಕಗಳನ್ನು ಹೊಂದಿರುವ 80 ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆಯು ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ, ಗಣಿತ ಮತ್ತು ಭಾಷೆಯಿಂದ ತಲಾ 20 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಅದರಲ್ಲೂ ಮಾನಸಿಕ ಸಾಮರ್ಥ್ಯ ಮತ್ತು ಪರಿಸರ ಅಧ್ಯಯನ ವಿಭಾಗಗಳು ಒಟ್ಟಾಗಿ 50 ಅಂಕಗಳನ್ನು ಹೊಂದಿರುತ್ತವೆ. ಇನ್ನು, ಪ್ರತಿ ಸರಿಯಾದ ಉತ್ತರಕ್ಕೆ 1.25 ಅಂಕಗಳು ಸಿಗುತ್ತವೆ ಮತ್ತು ಯಾವುದೇ ಋಣಾತ್ಮಕ ಅಂಕಗಳು ಇರುವುದಿಲ್ಲ.

ಏತನ್ಮಧ್ಯೆ, ಪರೀಕ್ಷೆಯು ಎರಡು ಗಂಟೆಗಳ ಕಾಲ ನಡೆಯಲಿದ್ದು, ಅಭ್ಯರ್ಥಿಗಳು ಮಾನಸಿಕ ಸಾಮರ್ಥ್ಯ ಮತ್ತು ಪರಿಸರ ಅಧ್ಯಯನದಲ್ಲಿ ಕನಿಷ್ಠ 14 ಅಂಕಗಳನ್ನು ಮತ್ತು ಇತರ ವಿಭಾಗಗಳಲ್ಲಿ 7 ಅಂಕಗಳನ್ನು ಪಡೆಯಬೇಕಾಗುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜುಲೈ 7, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 31, 2026

  • ನವೋದಯ ಪ್ರವೇಶ ಪರೀಕ್ಷೆ ದಿನಾಂಕ: ನವೆಂಬರ್ 28, 2026

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ಭಾವಚಿತ್ರ, ಸಹಿ, ಶಾಲಾ ಮುಖ್ಯಸ್ಥರ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಪೋಷಕರು ಜವಾಹರ್ ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ https://cbseitms.rcil.gov.in/nvs/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.