Safe City Project: ಲಿಂಗ ಸಮಾನತೆ ಬಗ್ಗೆ ಜಾಗೃತಿ, ಬೆಂಗಳೂರು ನಗರ ಪೊಲೀಸರಿಂದ online ಕೋರ್ಸ್ ಆರಂಭ!
ಪೊಲೀಸ್ ಇಲಾಖೆಯ ಪ್ರಕಾರ, 'ಸೇಫ್ ಸಿಟಿ ಬೆಂಗಳೂರು ಸಿಟಿ ಪೊಲೀಸ್' ವೆಬ್‌ಸೈಟ್ (https://safecitybcp.karnataka.gov.in) ಮೂಲಕ ಸಾರ್ವಜನಿಕರು ಈ ಆನ್‌ಲೈನ್ ಕೋರ್ಸ್ ಅನ್ನು ಪಡೆಯಬಹುದು.

ಬೆಂಗಳೂರು: ಲಿಂಗ ಸಮಾನತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಮತ್ತು ಲಿಂಗ ತಾರತಮ್ಯದ ಹಾನಿಕಾರಕ ಪರಿಣಾಮ ತಡೆಗಟ್ಟುವ ಉದ್ದೇಶದಿಂದ, ಬೆಂಗಳೂರು ನಗರ ಪೊಲೀಸರು 'ಸೇಫ್ ಸಿಟಿ ಪ್ರಾಜೆಕ್ಟ್' ಅಡಿಯಲ್ಲಿ ಲಿಂಗ ಸಂವೇದನಾ ಕುರಿತ ಆನ್‌ಲೈನ್ ಜಾಗೃತಿ ಕಾರ್ಯಕ್ರಮವೊಂದನ್ನು ಪ್ರಾರಂಭಿಸಿದ್ದಾರೆ.
ಪೊಲೀಸ್ ಇಲಾಖೆಯ ಪ್ರಕಾರ, 'ಸೇಫ್ ಸಿಟಿ ಬೆಂಗಳೂರು ಸಿಟಿ ಪೊಲೀಸ್' ವೆಬ್‌ಸೈಟ್ (https://safecitybcp.karnataka.gov.in) ಮೂಲಕ ಸಾರ್ವಜನಿಕರು ಈ ಆನ್‌ಲೈನ್ ಕೋರ್ಸ್ ಅನ್ನು ಪಡೆಯಬಹುದು.
ಆಸಕ್ತರು ಮೊದಲು ನೋಂದಾಯಿಸಿಕೊಳ್ಳಬೇಕು (ಖಾತೆ ಇಲ್ಲದಿದ್ದರೆ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಬೇಕು) ಲಾಗಿನ್ ಆಗಬೇಕು, ಕೋರ್ಸ್‌ಗೆ ನೋಂದಾಯಿಸಿಕೊಳ್ಳಬೇಕು, ಎಲ್ಲಾ ಜಾಗೃತಿ ವೀಡಿಯೊಗಳನ್ನು ವೀಕ್ಷಿಸಬೇಕು, ಪ್ರತಿ ಅಧ್ಯಾಯದ ನಂತರದ ಪ್ರಶ್ನಾವಳಿಯನ್ನು ಪೂರ್ಣಗೊಳಿಸಬೇಕು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಈ ಕೋರ್ಸ್ 'ಲಿಂಗದ ಕುರಿತು ಮರುಚಿಂತನೆ: ಅಧಿಕಾರ, ಗುರುತು ಮತ್ತು ಸಮಾನತೆ', 'ಪಿತೃಪ್ರಭುತ್ವ ಮತ್ತು ಲೈಂಗಿಕತೆ: ಅಧಿಕಾರ ಮತ್ತು ಬದಲಾವಣೆ'; 'ಸ್ತ್ರೀವಾದ: ತಪ್ಪು ಕಲ್ಪನೆಗಳಾಚೆಗಿನ ಅರ್ಥಪೂರ್ಣ ಬದಲಾವಣೆ'; ಹಾಗೂ 'ಮಹಿಳಾ ಸಬಲೀಕರಣ: ಲಿಂಗ ಸಮಾನತೆಯತ್ತ ಹಾದಿಗಳು ಸೇರಿದಂತೆ ಲಿಂಗ ಸಂವೇದನೆಯ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಆರು ಅಧ್ಯಾಯಗಳನ್ನು ಹೊಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, "ಸೇಫ್ ಸಿಟಿ ಯೋಜನೆಯಡಿಯಲ್ಲಿ, ಲಿಂಗ ತಾರತಮ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಾವು ಭಾರತದಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಸಾರ್ವಜನಿಕರು ಈ ಕೋರ್ಸ್‌ಗೆ ದಾಖಲಾಗಲು, ಜಾಗೃತಿ ವೀಡಿಯೊಗಳನ್ನು ವೀಕ್ಷಿಸಲು, ಮಾಡ್ಯೂಲ್‌ಗಳನ್ನು ಪೂರ್ಣಗೊಳಿಸಲು ಮತ್ತು ಪ್ರಮಾಣಪತ್ರವನ್ನು ಪಡೆಯಲು ಮನವಿ ಮಾಡುತ್ತೇನೆ ಎಂದರು.
ಲಿಂಗ ಸಮಾನತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು, ತಾರತಮ್ಯದ ವರ್ತನೆಗಳನ್ನು ಪ್ರಶ್ನಿಸುವುದು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ಸುರಕ್ಷಿತ ಮತ್ತು ಹೆಚ್ಚು ಅಂತರ್ಗತ ಸಮಾಜವನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



