ರಾಜ್ಯ

ಸಿಎಂ ಭೇಟಿಗೆ ಆಗಮಿಸಿದ ಪ್ರೇಮಾ: ಗೇಟಿನಲ್ಲೇ ತಡೆದ ಭದ್ರತಾ ಸಿಬ್ಬಂದಿ, ನಿರಾಸೆಯಿಂದ ವಾಪಸ್ ತೆರಳಿದ ನಟಿ!

ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ ಒಳಪ್ರವೇಶಕ್ಕೆ ಅವಕಾಶ ನೀಡದ ವಿಡಿಯೋ ವೈರಲ್ ವೈರಲ್ ಆಗಿದೆ.

ಸಿಎಂ ಭೇಟಿಗೆ ಆಗಮಿಸಿದ ಪ್ರೇಮಾ: ಗೇಟಿನಲ್ಲೇ ತಡೆದ ಭದ್ರತಾ ಸಿಬ್ಬಂದಿ, ನಿರಾಸೆಯಿಂದ ವಾಪಸ್ ತೆರಳಿದ ನಟಿ!
ಸಿಎಂ ಭೇಟಿಗೆ ಆಗಮಿಸಿದ್ದ ನಟಿ ಪ್ರೇಮಾ
Published On :

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರೇಮ ವಾಪಸ್ ತೆರಳಿದ್ದಾರೆ.

ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ ಒಳಪ್ರವೇಶಕ್ಕೆ ಅವಕಾಶ ನೀಡದ ವಿಡಿಯೋ ವೈರಲ್ ಇದೀಗ ವೈರಲ್ ಆಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ನಟಿ ಪ್ರೇಮಾ ಅವರನ್ನು ಮನೆ ಒಳಗೆ ಬರಲು ಬಿಡದೆ, ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕಾದರೆ 'ಕೃಷ್ಣಾ' ಕಚೇರಿಗೆ ಆಗಮಿಸುವಂತೆ ನಟಿ ಪ್ರೇಮಾ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಘಟನೆಯ ಕುರಿತು ನಟಿ ಪ್ರೇಮಾ ಯಾವುದೇ ಹೇಳಿಕೆ ನೀಡಿಲ್ಲ. ಜೊತೆಗೆ ಪ್ರೇಮಾ ಅವರು ಯಾವ ಉದ್ದೇಶಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಂದಿದ್ದರು ಎಂಬುದೂ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.