ರಾಜ್ಯ

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ಪರಿಣಾಮಕಾರಿ ತನಿಖೆ ನಡೆಸಿದ ಖಾಕಿ ಪಡೆಗೆ 35 ಲಕ್ಷ ರೂ ನಗದು ಬಹುಮಾನ ಘೋಷಣೆ..!

ಗೃಹ ಇಲಾಖೆ ಆದೇಶದಂತೆ ಡಿಜಿ ಮತ್ತು ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ ರೂ.20,000ರಂತೆ ಒಟ್ಟು ರೂ. 25 ಲಕ್ಷ, ಡಿಜಿಪಿ, ಎಡಿಜಿಪಿ ಹಾಗೂ ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ ರೂ.8,000ರಂತೆ ಒಟ್ಟು ರೂ.3 ಲಕ್ಷ ಮಂಜೂರಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು; ಪರಿಣಾಮಕಾರಿ ತನಿಖೆ ನಡೆಸಿದ ಖಾಕಿ ಪಡೆಗೆ 35 ಲಕ್ಷ ರೂ ನಗದು ಬಹುಮಾನ ಘೋಷಣೆ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪರಿಣಾಮಕಾರಿ ತನಿಖೆ ಹಾಗೂ ಯಶಸ್ವಿ ನ್ಯಾಯಾಂಗ ಪ್ರ ಕ್ರಿಯೆಗೆ ಕಾರಣವಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಜ್ಯ ಗೃಹ ಇಲಾಖೆ 35 ಲಕ್ಷ ರೂ. ನಗದು ಬಹುಮಾನವನ್ನು ಘೋಷಣೆ ಮಾಡಿದೆ.

ಆದೇಶದಂತೆ ಡಿಜಿ ಮತ್ತು ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ ರೂ.20,000ರಂತೆ ಒಟ್ಟು ರೂ. 25 ಲಕ್ಷ, ಡಿಜಿಪಿ, ಎಡಿಜಿಪಿ ಹಾಗೂ ಐಜಿಪಿ ಹುದ್ದೆಯ ಅಧಿಕಾರಿಗಳಿಗೆ ತಲಾ ರೂ.8,000ರಂತೆ ಒಟ್ಟು ರೂ.3 ಲಕ್ಷ ಮಂಜೂರಾಗಿದೆ.

ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲಾ ರೂ.5,000ರಂತೆ ರೂ. 2 ಲಕ್ಷ ನೀಡಲಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲಾ ರೂ.5,000ರಂತೆ ಒಟ್ಟು ರೂ.1 ಲಕ್ಷ ಬಹುಮಾನ ನೀಡಲಾಗಿದೆ.

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳ ಪರಿಣಾಮಕಾರಿ ತನಿಖೆ ಮತ್ತು ವಿಚಾರಣೆಯನ್ನು ಗುರುತಿಸಿ ಈ ಬಹುಮಾನಗಳನ್ನು ನೀಡಲಾಗಿದೆ,

ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಗ್ರ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ವೃತ್ತಿಪರತೆ, ಹೊಣೆಗಾರಿಕೆ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಈ ನಗದು ಬಹುಮಾನವನ್ನು ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.