ರಾಜ್ಯ

ಜೈಲಿನಲ್ಲಿ ರಾಜಾತಿಥ್ಯ: ಹುಬ್ಬಳ್ಳಿ ಸಬ್ ಜೈಲಿನಲ್ಲಿ ಕೈದಿಗಳು ಮದ್ಯ, ಗಾಂಜಾ ಸೇವನೆ ವಿಡಿಯೊ ವೈರಲ್

ಹುಬ್ಬಳ್ಳಿ ಸಬ್ ಜೈಲಿನಲ್ಲಿ ಕೈದಿಗಳು, ಕೊಲೆ ಆರೋಪಿಗಳು ಮೋಜು-ಮಸ್ತಿ ಮಾಡಿಕೊಂಡಿದ್ದಾರೆ. ಗಾಂಜಾ, ಮದ್ಯ, ಮಾಂಸ ಸೇವನೆಯಲ್ಲಿ ಕೈದಿಗಳು ತೇಲಾಡುತ್ತಿರುವ ವಿಡಿಯೋ ಹೊರಬಿದ್ದಿದೆ.

ಜೈಲಿನಲ್ಲಿ ರಾಜಾತಿಥ್ಯ: ಹುಬ್ಬಳ್ಳಿ ಸಬ್ ಜೈಲಿನಲ್ಲಿ ಕೈದಿಗಳು ಮದ್ಯ, ಗಾಂಜಾ ಸೇವನೆ ವಿಡಿಯೊ ವೈರಲ್
ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಕೈದಿಗಳು
Published On :

ಬೆಂಗಳೂರು: ರಾಜ್ಯದ ಹಲವು ಕಾರಾಗೃಹಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುವ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತದೆ. ಜೈಲುಗಳಲ್ಲಿ ಕೈದಿಗಳು ಅಕ್ರಮವಾಗಿ ಗಾಂಜಾ, ಅಫೀಮು, ಮದ್ಯ ಸೇವನೆಯಲ್ಲಿ ತೊಡಗಿರುತ್ತಾರೆ, ಅವರಿಗೆ ಅಕ್ರಮವಾಗಿ ಪೂರೈಸಲಾಗುತ್ತದೆ ಎಂಬ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ.

ಹುಬ್ಬಳ್ಳಿ ಸಬ್ ಜೈಲಿನಲ್ಲಿ ಕೈದಿಗಳು, ಕೊಲೆ ಆರೋಪಿಗಳು ಮೋಜು-ಮಸ್ತಿ ಮಾಡಿಕೊಂಡಿದ್ದಾರೆ. ಗಾಂಜಾ, ಮದ್ಯ, ಮಾಂಸ ಸೇವನೆಯಲ್ಲಿ ಕೈದಿಗಳು ತೇಲಾಡುತ್ತಿರುವ ವಿಡಿಯೋ ಹೊರಬಿದ್ದಿದೆ.

ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸುಲಭವಾಗಿ ರಾಜಾತಿಥ್ಯ ಸಿಗುತ್ತಿವೆ. ಜೈಲಿನಲ್ಲೇ ಕೈದಿಗಳು ಮೋಜು-ಮಸ್ತಿಯಲ್ಲಿದ್ದಾರೆ. ಗುಂಡು, ತುಂಡು, ಗಾಂಜಾ, ಟಿವಿ, ಮೊಬೈಲ್‌ಗಳನ್ನು ಬಳಿಸಿಕೊಂಡು ಮಜಾ ಮಾಡುತ್ತಿರುವ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಟೈಮ್‌ಪಾಸ್ ಮಾಡಲು ಕೇರಂ ಬೋರ್ಡ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಮೂರು ದಿನದ ಹಿಂದೆಯಷ್ಟೆ ಹುಬ್ಬಳ್ಳಿ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಹುಬ್ಬಳ್ಳಿ ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಭೇಟಿ ನೀಡಿದ ಮೂರು ದಿನಗಳಲ್ಲೇ ಜೈಲಿನೊಳಗೆ ಎಗ್ಗಿಲ್ಲದೇ ಗಾಂಜಾ ಪೂರೈಸಲಾಗುತ್ತಿದೆ ಎಂಬ ಆರೋಪ ಬಂದಿದೆ.

ಹುಬ್ಬಳ್ಳಿ ಸಬ್ ಜೈಲ್ ವಿಡಿಯೋ ವೈರಲ್ ಆಗಿದೆ. ವಿಡಿಯೋ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಸತ್ಯ ಒಪ್ಪಿಕೊಂಡಿದ್ದಾರೆ. ವಿಡಿಯೋಗಳು ಸಬ್ ಜೈಲಿನದ್ದು, ವಾಟ್ಸಾಪ್ ಮೆಸೇಜ್ ಮೂಲಕ ವಿಡಿಯೋ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಬಂಧಿತ ಘಟನೆ ನಡೆದಿರುವುದು ಸತ್ಯ. ಆದರೆ, ಅದು ನಾನು ಹುದ್ದೆ ಸ್ವೀಕರಿಸುವ ಮೊದಲು ನಡೆದದ್ದು ಹುದ್ದೆ ಸ್ವೀಕರಿಸಿದ ನಂತರ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದೇನೆ. ಸಂಬಂಧಪಟ್ಟ ಸಿಬ್ಬಂದಿಯ ನಿರ್ಲಕ್ಷ್ಯ ಸಾಬೀತಾದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.